ಬ್ರೇಕಿಂಗ್ ನ್ಯೂಸ್
21-11-22 10:10 pm Mangalore Correspondent ಕರಾವಳಿ
ಉಳ್ಳಾಲ, ನ.21 : ಮಲೆನಾಡು ಗಿಡ್ಡ ದೇಸಿ ತಳಿ ಹಸುವಿನ ಸಂವರ್ಧನೆಯೇ ಮುಖ್ಯ ಉದ್ದೇಶವಾಗಿದ್ದರೂ ಪ್ರಸ್ತುತ ದಿನಗಳಲ್ಲಿ ಗೋಶಾಲೆಯನ್ನು ನಡೆಸೋದು ಬಹಳ ಕಷ್ಟಕರವಾಗಿದ್ದು, ಗೋಶಾಲೆಯ ಬಗ್ಗೆ ಸಮಾಜಕ್ಕೆ ಮಾಹಿತಿ ಬಿತ್ತರಿಸುವ ಉದ್ದೇಶದಿಂದ ಜ.14ರಿಂದ ಫೆ.13ರ ವರೆಗೆ ತಿಂಗಳ ಕಾಲ "ಗೋ ಸೇವಾ ಮಾಸಾಚರಣೆ" ಹಮ್ಮಿ ಕೊಳ್ಳಲಾಗಿದೆ ಎಂದು ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯ ಸಂಚಾಲಕ ಟಿ.ಜಿ. ರಾಜಾರಾಮ ಭಟ್ ಹೇಳಿದರು.
ಕೈರಂಗಳ ಪುಣ್ಯಕೋಟಿ ನಗರದ
ಅಮೃತಧಾರಾ ಗೋಶಾಲೆಯಲ್ಲಿ ಜ. 14ರಿಂದ ಫೆ.13ರ ತನಕ ನಡೆಯಲಿರುವ "ಗೋ ಸೇವಾ ಮಾಸಾಚರಣೆ" ಪ್ರಯುಕ್ತ ಭಾನುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಗುರುಗಳಾದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅಮೃತಧಾರಾ ಗೋಶಾಲೆ ನಡೆಯುತ್ತಿದೆ. ಕಟುಕರ ಕೈಯಿಂದ ಬಿಡಿಸಿದ, ಅನಾಥವಾಗಿರುವ ಹಸುಗಳನ್ನು ಸಾಕಿದರೂ ಸರಕಾರ ಮಾತ್ರ ಕಿಂಚಿತ್ತೂ ಅನುದಾನ ನೀಡುತ್ತಿಲ್ಲ. ದೂರದ ಊರಿನಿಂದ ಸುಶಿಕ್ಷಿತ ಟೆಕ್ಕಿಗಳು ಗೋಶಾಲೆಗೆ ಬಂದು ಗೋವಿನ ಜತೆ ಬೆರೆತು ಮನಸ್ಸು ಹಗುರಗೊಳಿಸಿ ತೆರಳುತ್ತಾರೆ. ಯಾರೇ ಆದರೂ ಗೋಸೇವೆ ಮಾಡಿದರೆ ಗೋಸೇವಾ ಚಟುವಟಿಕೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಮಾತ್ರವಲ್ಲದೆ ನಮ್ಮ ಪಾಪ ಕ್ಲೇಶ ಕಳೆದು ಅನಾರೋಗ್ಯ ಕೂಡ ದೂರವಾಗ್ತದೆ ಎಂದರು.
ಡಿಸೆಂಬರ್ ನಲ್ಲಿ ಪುಣ್ಯಕೋಟಿ ಶಾರದಾ ಗಣಪತಿ ಶಾಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕೃಷಿ ಉತ್ಸವ, ಜ.7ಕ್ಕೆ ಶಾಲಾ ವಾರ್ಷಿಕ ಉತ್ಸವ, "ಶಾರದೋತ್ಸವ" ಹಾಗೂ ಜ.14ರಿಂದ ಫೆ.13ರ ತನಕ ಗೋಸೇವಾ ಮಾಸಾಚರಣೆ ನಡೆಯಲಿದ್ದು ವಿವಿಧ ಮಠಗಳ ಸ್ವಾಮೀಜಿಗಳನ್ನು ಕರೆಸಿ ಯತಿ ಸಮಾವೇಶ, ಯತಿಗಳು ಮತ್ತು ಗೋವು ಎಂಬ ವಿಚಾರದಲ್ಲಿ ಮಂಥನ ಕಾರ್ಯಕ್ರಮ ನಡೆಯಲಿರುವುದು. ಫೆ.3 ರಂದು ಅಮೃತಧಾರಾ ಗೋಶಾಲೆಯ ವಾರ್ಷಿಕೋತ್ಸವವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದರು.
ಕಣಂತೂರು ದೈವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮುಖಂಡರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.
Event organised at Amruthadhara Goshala to give awareness about desi cows at Ullal in Mangalore.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm