ಬ್ರೇಕಿಂಗ್ ನ್ಯೂಸ್
19-11-22 11:04 pm Mangalore Correspondent ಕರಾವಳಿ
ಮಂಗಳೂರು, ನ.19 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಬಂದಿದ್ದಾಗಲೇ ಆಟೋದಲ್ಲಿ ನಿಗೂಢ ಸ್ಫೋಟ ಆಗಿರುವ ಘಟನೆಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿರುವುದು ದೃಢಪಟ್ಟಿದ್ದು, ಯಾವ ರೀತಿಯ ಸ್ಫೋಟಕ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಭಾರತ ಮೂಲದ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಪೊಲೀಸರು ಹೇಳಿಕೆ ಪಡೆಯುವ ಸಂದರ್ಭ ಯಾವುದೇ ಮಾಹಿತಿ ನೀಡಿಲ್ಲ ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿದೆ. ಆತನ ದೇಹದ ಅರ್ಧ ಭಾಗ ಸುಟ್ಟು ಹೋಗಿದ್ದು, ಮೈ ಮತ್ತು ಮುಖ ಪೂರ್ತಿ ಸುಟ್ಟು ಹೋಗಿದೆ. ಹೀಗಾಗಿ ಆತನನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಕಾರ್ಮಿಕ ಕುಕ್ಕರ್ ಇದ್ದ ಬಾಕ್ಸ್ ಒಂದನ್ನು ಹಿಡಿದು ನಾಗುರಿಯಿಂದ ಆಟೋ ಹತ್ತಿದ್ದು, ಆಟೋ ರಿಕ್ಷಾ ಕಪಿತಾನಿಯೋ ಸ್ಕೂಲ್ ಬಳಿಗೆ ತಲುಪಿದಾಗ ಬ್ಲಾಸ್ಟ್ ಆಗಿತ್ತು.
ಸ್ಫೋಟದ ಸದ್ದು ಕೇಳಿಬರುತ್ತಲೇ ಜನರು ಆಟೋದತ್ತ ಓಡಿ ಬಂದಿದ್ದಾರೆ. ಅಲ್ಲದೆ, ಬಿಳಿಯ ಹೊಗೆ ಆವರಿಸಿಕೊಂಡಿದೆ. ಬಿಳಿಯ ಸುಟ್ಟು ಹೋದ ಕಣಗಳು ಗಾಳಿಯಲ್ಲಿ ಹಾರಿವೆ. ಇದರ ಚಿತ್ರಣ ಪಕ್ಕದ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದೆ. ಆಟೋ ಚಾಲಕನಿಗೂ 25 ಶೇಕಡಾ ಸುಟ್ಟ ಗಾಯಗಳಾಗಿದ್ದು, ಹಿಂದೆ ಕುಳಿತಿದ್ದ ಕಾರ್ಮಿಕ 50 ಶೇಕಡಾ ಸುಟ್ಟು ಹೋಗಿದ್ದಾನೆ. ಆತನಿಗೆ ಕುಕ್ಕರ್ ನಲ್ಲಿ ಸ್ಫೋಟಕ ಇದ್ದ ಬಗ್ಗೆ ಮಾಹಿತಿ ಇತ್ತೇ ಅಥವಾ ಯಾರಾದ್ರೂ ಬೇರೆಯವರು ಆ ಬಾಕ್ಸ್ ಅನ್ನು ಒಯ್ಯುವಂತೆ ಹೇಳಿ ಆಟೋದಲ್ಲಿ ಕಳಿಸಿಕೊಟ್ಟಿದ್ದಾರೆಯೇ ಎಂಬ ಬಗ್ಗೆ ಪೊಲೀಸರ ತನಿಖೆ ಸಾಗಿದೆ.
ಕುಕ್ಕರ್ ಬಾಂಬ್ ಆಗಿರುವ ಶಂಕೆ
ಕುಕ್ಕರ್ ಬಾಕ್ಸ್ ಒಡೆದು ಹೋಗಿದ್ದು, ಮೇಲ್ಭಾಗದ ಮುಚ್ಚಳ ಒಡೆದು ಹಾರಿ ಹೋಗಿದೆ. ಆಟೋ ರಿಕ್ಷಾ ಒಳಭಾಗ ಸುಟ್ಟು ಹೋಗಿದ್ದು, ಯಾವುದೋ ಸ್ಫೋಟಕ ವಸ್ತು ಕುಕ್ಕರ್ ಒಳಗೆ ಇದ್ದಿರಬಹುದಾದ ಶಂಕೆ ವ್ಯಕ್ತವಾಗಿದೆ. ವಿಧಿ ವಿಜ್ಞಾನ ತಂಡದ ಸದಸ್ಯರು ಅಲ್ಲಿ ಬಿದ್ದಿರುವ ಹೊಗೆಯ ಕಣಗಳು, ಪುಡಿಗಳನ್ನು ಆಧರಿಸಿ ಅಲ್ಲಿ ಯಾವ ಮಾದರಿಯ ಸ್ಫೋಟಕ ಇಡಲಾಗಿತ್ತು ಎನ್ನುವುದನ್ನು ಪತ್ತೆ ಮಾಡಲಿದ್ದಾರೆ. ಮಂಗಳೂರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಬಂದಿದ್ದಾಗಲೇ ಈ ರೀತಿಯ ಸ್ಫೋಟ ಆಗಿರುವುದರಿಂದ ಯಾವುದೋ ಷಡ್ಯಂತ್ರ ಇದರ ಹಿಂದೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಕ್ಕರ್ ನಲ್ಲಿ ಯಾವುದಾದ್ರೂ ಸ್ಫೋಟಕ ವಸ್ತುಗಳನ್ನಿಟ್ಟು ಅದು ಸ್ಫೋಟ ಆಗಿದ್ದರೆ, ಅದೊಂದು ರೀತಿಯ ಕುಕ್ಕರ್ ಬಾಂಬ್ ಎನ್ನುವುದು ದೃಢವಾಗುತ್ತದೆ. ಜಮ್ಮು ಕಾಶ್ಮೀರ, ಪಂಜಾಬ್ ನಲ್ಲಿ ಈ ಮಾದರಿಯ ಕುಕ್ಕರ್ ಬಾಂಬ್ ಸ್ಫೋಟ ಆಗಿರುವ ಉದಾಹರಣೆ ಬಹಳಷ್ಟಿದೆ.
An autorickshaw exploded after it came to a stop on a busy road at Nagori in coastal Karnataka's Mangaluru today. The entire incident was caught on nearest CCTV camera. As per the CCTV footage, the autorickshaw exploded while it was seen crossing a public bus. Full details here at Headline Karnataka.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm