ಬ್ರೇಕಿಂಗ್ ನ್ಯೂಸ್
19-11-22 08:11 pm Mangalore Correspondent ಕರಾವಳಿ
ಮಂಗಳೂರು, ನ.19: ನಗರದ ಕಂಕನಾಡಿ ನಾಗುರಿ ಪೊಲೀಸ್ ಠಾಣೆ ಬಳಿಯಲ್ಲೇ ನಿಗೂಢ ಸ್ಫೋಟ ಆಗಿದೆ. ಆಟೋ ಚಲಿಸುತ್ತಿದ್ದಾಗಲೇ ಒಳಗಿನಿಂದ ಸ್ಫೋಟ ಆಗಿದ್ದು, ಆಟೋ ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದಾರೆ. ಬ್ಲಾಸ್ಟ್ ಯಾವ ರೀತಿಯದ್ದು, ಹೇಗೆ ಸಂಭವಿಸಿದೆ ಎನ್ನುವುದು ದೃಢಪಟ್ಟಿಲ್ಲ.
ಆಟೋ ನಾಗುರಿಯಿಂದ ಹೆದ್ದಾರಿಯಲ್ಲಿ ಪಂಪ್ವೆಲ್ ಕಡೆಗೆ ಚಲಿಸುತ್ತಿತ್ತು. ಸಂಜೆ 5.30ರ ವೇಳೆಗೆ ಘಟನೆ ಸಂಭವಿಸಿದ್ದು, ಆಟೋ ಚಲಿಸುತ್ತಿದ್ದಾಗಲೇ ಹಿಂದೆ ಕುಳಿತಿದ್ದ ವ್ಯಕ್ತಿಯ ಜೊತೆಗಿದ್ದ ಬಾಕ್ಸ್ ನಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಆತನ ಜೊತೆಗೆ ಕುಕ್ಕರ್ ಇದ್ದಿರುವುದು ಶಂಕೆಗೆ ಕಾರಣವಾಗಿದೆ. ಇಬ್ಬರು ಗಾಯಾಳುಗಳನ್ನು ಕಂಕನಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಾಗುರಿಯಿಂದ ಆಟೋ ಹತ್ತಿದ್ದ ಪ್ರಯಾಣಿಕನ ಕೈಯಲ್ಲಿದ್ದ ಬಾಕ್ಸ್ ನಲ್ಲಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಬ್ಯಾಗ್ ಹಿಡಿದುಕೊಂಡಿದ್ದ ವ್ಯಕ್ತಿಗೂ ಬೆಂಕಿ ತಗಲಿದೆ. ಆಟೋ ಒಳಗಡೆ ಸುಟ್ಟು ಹೋಗಿದೆ. ಹಿಂದಿನಿಂದ ಬೆಂಕಿ ಕಾಣಿಸಿದ್ದಾಗಿ ಆಟೋ ಚಾಲಕ ಹೇಳಿದ್ದಾನೆ. ಬೆಂಕಿ ಹೇಗೆ ಹತ್ತಿಕೊಂಡಿದೆ ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡದ ತಜ್ಞರು ಬಂದು ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಬ್ಲಾಸ್ಟ್ ಘಟನೆ ಸ್ಥಳದಲ್ಲಿದ್ದ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರೀ ಹೊಗೆ ಕಾಣಿಸಿಕೊಂಡಿದೆ, ಜನರು ಗಾಬರಿಗೊಂಡು ಸ್ಥಳದತ್ತ ಓಡಿದ್ದಾರೆ. ಬೆಂಕಿ ಹತ್ತಿಕೊಂಡು ಏನೋ ಸ್ಫೋಟ ಆದ ರೀತಿ ಕಂಡುಬಂದಿದೆ. ಆಟೋ ರಿಕ್ಷಾ ಒಳಗಡೆ ಹಳೆಯ ಕುಕ್ಕರ್ ಪತ್ತೆಯಾಗಿದೆ. ಹೇಗೆ ಸ್ಫೋಟ ಸಂಭವಿಸಿದೆ ಅನ್ನುವುದು ಇನ್ನೂ ದೃಢಪಟ್ಟಿಲ್ಲ. ಯಾವುದಾದ್ರೂ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದನೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿಯೇ ಘಟನೆ ನಡೆದಿದ್ದರಿಂದ ಆತಂಕ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಪೊಲೀಸರನ್ನು ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ.
Autorickshaw minor explosion at Naguri in Mangalore, catches fire passenger suffers injury, driver escapes unhurt, police are now investigating the case.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm