ಬ್ರೇಕಿಂಗ್ ನ್ಯೂಸ್
19-11-22 06:32 pm Mangalore Correspondent ಕರಾವಳಿ
ಮಂಗಳೂರು, ನ.19: ಚಿಲುಮೆ ಸಂಸ್ಥೆಯ ಪರಿಚಯ ನನಗೆ ಇಲ್ಲ ಎನ್ನುವುದಿಲ್ಲ. ಅವರು ನನಗೆ ಪರಿಚಯಸ್ಥರೇ. ಆದರೆ, ನಾನು ಯಾವುದಕ್ಕೂ ಅವರನ್ನು ಬಳಸಿಕೊಂಡಿಲ್ಲ. ನನಗೆ ಅಂತಹ ಉದ್ದೇಶವೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಬಿಬಿಎಂಪಿ ಈಗಾಗಲೇ ದೂರು ದಾಖಲಿಸಿದೆ. ಚಿಲುಮೆ ಸಂಸ್ಥೆಯಿಂದ ಬಿಬಿಎಂಪಿ ಏನೆಲ್ಲ ಕೆಲಸಗಳನ್ನು ವಹಿಸಿತ್ತು, ಅವರಿಗೆ ಏನು ಷರತ್ತು ಹಾಕಿತ್ತು ಎಂದು ನನಗೆ ಗೊತ್ತಿಲ್ಲ. ಆದರೆ ಅಕ್ರಮ ಏನಾಗಿದೆ ಅಂತ ಗೊತ್ತಿಲ್ಲ. ಆದರೆ ಚುನಾವಣಾ ಅಕ್ರಮ ನಡೆಸುವುದೇನಿದ್ದರೂ ಕಾಂಗ್ರೆಸ್ ಪಕ್ಷ. ಕಾರ್ಯಕರ್ತರೇ ಇಲ್ಲದ, ಸಿದ್ಧಾಂತವೇ ಇಲ್ಲದ ಪಕ್ಷ ಕಾಂಗ್ರೆಸ್' ಎಂದರು.
2018ರಲ್ಲಿ ಅಧಿಕಾರದಲ್ಲಿ ಇದ್ದದ್ದು ಯಾರು. ಇವರಿಗೆ ಏನೂ ಉದ್ದ-ಅಳತೆ ಗೊತ್ತಿಲ್ವಾ. ಸುಮ್ನೆ ಏನೇನೋ ಹೇಳುತ್ತಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಿಜಾಂಶ ಏನೆಂಬುದು ಅದರಲ್ಲೇ ತಿಳಿಯಲಿದೆ ಎಂದರು. ಹಲವಾರು ರೀತಿಯ ಸರ್ವೇ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ರಾಜಕೀಯ ಅಭಿಪ್ರಾಯ ಸಂಗ್ರಹ ಮಾಡುವುದು ಒಂದು ಸರ್ವೇ. ಪ್ರತಿಕ್ರಿಯೆಗಳನ್ನು ಪಡೆಯುವುದು ಕೂಡ ಸರ್ವೇ. ಚುನಾವಣಾ ನಿರ್ವಹಣೆ, ಮತದಾರರ ಪಟ್ಟಿ ತಯಾರಿ... ಬೇರೆಯದ್ದೇ ವಿಷಯ ಎಂದರು.
ನಾನಂತು ಚಿಲುಮೆ ಸಂಸ್ಥೆಯನ್ನ ನೇಮಿಸಿಕೊಂಡಿಲ್ಲ, ಅವರನ್ನು ಬಳಕೆ ಮಾಡಿಕೊಂಡಿಲ್ಲ. ನಾನು ಜನರ ಆಶೀರ್ವಾದದಿಂದ ಬೆಳೆದಿರುವವನು. 2018ರ ಚುನಾವಣೆಯಲ್ಲಿ ಬಿಜೆಪಿಯಲ್ಲೇ ಅತಿ ಹೆಚ್ಚು ಅಂತರದಿಂದ ಗೆದ್ದವನು ನಾನು. ನನ್ನ ಗೆಲುವಿನ ಅಂತರ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದರು. 'ನನ್ನ ಹೆಸರಿನ ಪ್ರತಿಷ್ಠಾನವು ಪ್ರತಿ ವರ್ಷ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೇಣಿಗೆ ನೀಡುತ್ತದೆ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಹಿಂದೆ ಚೆಕ್ ಕೊಡ್ತಾ ಇದ್ವಿ. ಈಗ ಆನ್ಲೈನಲ್ಲಿ ಆಗ್ತಾ ಇದೆ. ಸತ್ಯಾಸತ್ಯತೆ ಬಹಿರಂಗ ಮಾಡಲು ತನಿಖೆ ನಡೆಸಲಾಗುತ್ತಿದೆ. ಆರೋಪ ಮಾಡುವವರ ಹಿನ್ನೆಲೆ ಏನು, ಯಾವ ವಿಷಯಕ್ಕಾಗಿ ಬಂದಿದ್ದಾರೆ ಎಂಬುದು ಗೊತ್ತಿದೆ. ನಾನೇನು ಹೇಳಬೇಕಾಗಿಲ್ಲ ಎಂದರು.
ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್ ಓ ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ವೋಟರ್ಸ್ ಗಳನ್ನು ಸೇರಿಸಲು, ಡಿಲೀಟ್ ಮಾಡಲು ನಮಗೆ ಅವಕಾಶ ಇಲ್ಲ. ನನ್ನ ಕ್ಷೇತ್ರ ಸಂಬಂಧ ಯಾವುದಾದರೂ ಬಂದಿದೆಯಾ..? ನನಗೆ ಇದರ ಅವಶ್ಯಕತೆ ಇಲ್ಲ. ಬಾಡಿಗೆಗೆ ಜನ ಬೇಕಾಗೋದು ಕಾಂಗ್ರೆಸ್ ಪಕ್ಷಕ್ಕೆ, ಅದು ಕಾರ್ಯಕರ್ತರಿಲ್ಲದ ಪಕ್ಷ. ಈಗ ಆಗ್ತಿರೋ ಪ್ರಕ್ರಿಯೆ ಆಧಾರ್ ಅಪ್ ಡೇಟ್ ಗೆ ಆಗ್ತಿರೋದು.
ಎಲ್ಲರೂ ಬೇಕಾದರೂ ಬನ್ನಿ, ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಗ್ರಹಿಸುವ ದಾಖಲೆ ಬಗ್ಗೆಯು ತನಿಖೆಯಾಗಲಿ. ನಮ್ಮಲ್ಲಿ ರಕ್ಷಣೆ ಕೊಡುವ ಪ್ರಯತ್ನ ಇಲ್ಲ, ಮುಕ್ತವಾಗಿ ಆಗಲಿ. ಇವರ ಕೀಳುಮಟ್ಟ ಇದೆಲ್ಲಾ, ಅದು ನಾಡಿನ ಜನರಿಗೆ ಗೊತ್ತಿದೆ ಎಂದರು.
Kantara production firm Hombale and Chelume Films closely linked to Karnataka BJP minister Ashwath narayan, denies
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm