ಬ್ರೇಕಿಂಗ್ ನ್ಯೂಸ್
05-11-22 12:37 pm HK News Desk ಕರಾವಳಿ
ಅಮೃತಸರ, ನ.5:ಹಿಂದು ಸಂಘಟನೆ ಮುಖಂಡ ಹಾಗೂ ಶಿವಸೇನೆ ನಾಯಕನಾಗಿದ್ದ ಸುಧೀರ್ ಸೂರಿ ಅವರನ್ನು ಪೊಲೀಸರ ಎದುರಲ್ಲೇ ಗುಂಡಿಟ್ಟು ಕೊಂದ ಘಟನೆ ಪಂಜಾಬಿನ ಅಮೃತ್ಸರನಲ್ಲಿ ನಡೆದಿದೆ. ದೇವಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಧೀರ್ ಸೂರಿ ಮೇಲೆ ವ್ಯಕ್ತಿಯೊಬ್ಬ ಐದು ಸುತ್ತು ಗುಂಡು ಹಾರಿಸಿ ಕೊಲೆಗೈದಿದ್ದಾನೆ.
ದೇವರ ಭಗ್ನಗೊಂಡ ಮೂರ್ತಿಗಳು ರಸ್ತೆ ಬದಿ ಪತ್ತೆಯಾದ ಹಿನ್ನೆಲೆಯಲ್ಲಿ ಗೋಪಾಲ್ ಮಂದಿರದ ಆಡಳಿತ ಮಂಡಳಿ ವಿರುದ್ಧ ಸುಧೀರ್ ಸೂರಿ ನೇತೃತ್ವದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆಯಲ್ಲಿ ಧರಣಿ ಕುಳಿತಿದ್ದ ಸುಧೀರ್ ಸೂರಿ ಹಾಗೂ ಅವರ ಬೆಂಬಲಿಗರು, ಹಿಂದೂ ದೇವರನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ್ದ ಸಂದೀಪ್ ಸಿಂಗ್ ಎಂಬಾತ, ಏಕಾಏಕಿ ಸುಧಿರ್ ಸೂರಿ ಅವರತ್ತ ಐದು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಸ್ಥಳದಲ್ಲಿ ಹಾಜರಿದ್ದರೂ, ದಾಳಿಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಸುಧೀರ್ ಸೂರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅವರು ಕೊನೆಯಿಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.



ಆರೋಪಿ ಸಂದೀಪ್ ಸಿಂಗ್ನನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಿದ ಪರವಾನಗಿ ಹೊಂದಿದ್ದ ಪಿಸ್ತೂಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂದೀಪ್ ಸಿಂಗ್ ಬಟ್ಟೆ ಅಂಗಡಿ ಮಾಲೀಕನಾಗಿದ್ದು, ಸುಧೀರ್ ಸೂರಿ ಅವರ ಹಿಂದೂ ಪರ ನಿಲುವನ್ನು ವಿರೋಧಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಗುಂಡು ಹಾರಿಸಿದ್ದಾನೆಯೇ ಗೊತ್ತಾಗಿಲ್ಲ. ಶಿವಸೇನಾ ಮುಖಂಡ ಸುಧಿರ್ ಸೂರಿ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದರು. ಆದರೆ ಸಿಖ್ ಮೂಲಭೂತವಾದವನ್ನು ವಿರೋಧಿಸುತ್ತಿದ್ದರು. ಇದರಿಂದ ಖಲಿಸ್ತಾನ್ ಪರ ಹೋರಾಟಗಾರರ ವಿರೋಧವನ್ನೂ ಕಟ್ಟಿಕೊಂಡಿದ್ದರು. ಸೂರಿ ಅವರಿಗೆ ಪಂಜಾಬ್ ಸರ್ಕಾರ ಭದ್ರತೆ ಕೂಡ ಒದಗಿಸಿತ್ತು.
Tension gripped Amritsar on Friday after Shiv Sena leader Sudhir Suri was shot dead in a broad daylight here. This is the second shootout in Punjab after singer Sidhu Moosewala was shot dead in Mansa district on May 29. Speaking to reporters about the incident, Arun Pal Singh, Commissioner of Police Amritsar said, multiple shots were fired at Suri.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am