ಬ್ರೇಕಿಂಗ್ ನ್ಯೂಸ್
04-11-22 10:11 am Mangalore Correspondent ಕರಾವಳಿ
ಬೆಳ್ತಂಗಡಿ, ನ.4 : ಕಾಂತಾರ ಸಿನಿಮಾ ರೀತಿಯಲ್ಲಿ 'ಪಂಜುರ್ಲಿ' ದೈವದ ವೇಷ ತೊಟ್ಟು ದೈವಕ್ಕೆ ಅಣಕ ಮಾಡಿದ್ದ ಯುವತಿ ಜಾಲತಾಣದಲ್ಲಿ ತುಳುನಾಡಿನ ಜನರ ಆಕ್ರೋಶಕ್ಕೆ ಮಣಿದು ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ್ದಾಳೆ.
ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಎಂಬಾಕೆ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದಳು. ಈ ಬಗ್ಗೆ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದಳು. ಇದೀಗ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಕ್ಷಮೆ ಯಾಚಿಸಿದ್ದು ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಶ್ವೇತಾ ರೆಡ್ಡಿ ತಪ್ಪು ಕಾಣಿಕೆ ಹಾಕಿದ ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನ ಭೇಟಿಯಾಗಿ ಕ್ಷಮೆ ಯಾಚನೆ ಮಾಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ರೀಲ್ಸ್ ಹರಿ ಬಿಟ್ಟಿದ್ದ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದಂತೆ ಹಣ್ಣ ಹಚ್ಚಿ ವೇಷ ಧರಿಸಿ ಕುಣಿಯುವುದನ್ನು ತೋರಿಸಿದ್ದಳು. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಮಾಡಿದ್ದ ಈಕೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಹಲವರು ಶ್ವೇತಾ ರೆಡ್ಡಿ ವಿರುದ್ಧ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಅಂತ ಶಾಪ ಹಾಕಿದ್ದರು. ಇದರಿಂದ ಭೀತಿಗೊಂಡಿದ್ದ ಶ್ವೇತಾ ತನ್ನ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದಳು. ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು.
Shweta Reddy, a young woman hailing from Hyderabad tendered an apology to Dharmadhikari of Dharmasthala Dr D Veerendra Heggade and offered a penalty to Lord Manjunatha in Dharmasthala temple after her comments on Daiva Mukhavarnike in the film Kantara had become controversial in the social media.Shweta Reddy's comments on Daiva Mukhavarnike in the film Kantara had received a lot of flak in the social media just like the Daiva's role in the film.
02-07-25 11:02 pm
Bangalore Correspondent
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
Bengaluru Rural Name: ಬೆಂಗಳೂರು ಗ್ರಾಮಾಂತರ ಜಿಲ್...
02-07-25 10:05 pm
CM Siddaramaiah: ಐದು ವರ್ಷ ನಾನೇ ಸಿಎಂ ಆಗಿರ್ತೀನಿ...
02-07-25 07:55 pm
Belagavi, ASP Narayan Bharamani, Dharwad: ಅಂದ...
02-07-25 02:21 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
02-07-25 08:05 pm
Mangalore Correspondent
Puttur Bjp, Krishna Rao, Pregnant: ಬಿಜೆಪಿ ಮುಖ...
02-07-25 11:39 am
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
02-07-25 10:15 pm
Bangalore Correspondent
Massive Scam, Mangalore City Corporation, Fak...
02-07-25 12:24 pm
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm