ಬ್ರೇಕಿಂಗ್ ನ್ಯೂಸ್
28-10-22 08:47 pm Mangalore Correspondent ಕರಾವಳಿ
ಮಂಗಳೂರು, ಅ.28 : ಮೀನುಗಾರಿಕೆ ಧಕ್ಕೆ ಬಳಿಯ ಬೆಂಗ್ರೆ ಪ್ರದೇಶದಲ್ಲಿ ಲಂಗರು ಹಾಕಿದ್ದ ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಮಿನಿ ಹಡಗು ಮಾದರಿಯ ಮೂರು (ಮಂಜಿ) ಬೃಹತ್ ಬೋಟುಗಳು ಬೆಂಕಿಗಾಹುತಿಯಾಗಿದೆ.
ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಬೋಟ್ ಇದಾಗಿದ್ದು ಬೆಂಗ್ರೆಯಲ್ಲಿ ಮಳೆಗಾಲದಲ್ಲಿ ಮಳೆ ಬೀಳದಂತೆ ತೆಂಗಿನ ಗರಿಗಳಿಂದ ಮಾಡಿದ್ದ ಕೊಟ್ಟಿಗೆಯನ್ನು ರಚಿಸಿ, ಅದರ ಅಡಿಭಾಗದಲ್ಲಿ ಹಡಗನ್ನು ನಿಲ್ಲಿಸಲಾಗಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ಕೊಟ್ಟಿಗೆ ಪಕ್ಕದಲ್ಲಿ ಮಕ್ಕಳು ಪಟಾಕಿ ಬಿಡುತ್ತಿದ್ದರು. ಈ ವೇಳೆ, ಮಕ್ಕಳು ಸಿಡಿಸಿದ್ದ ಪಟಾಕಿಯೊಂದು ನೇರವಾಗಿ ತೆಂಗಿನ ಗರಿಗಳಿದ್ದ ಮಾಡಿಗೆ ಹೋಗಿದ್ದು ಬೆಂಕಿ ಸಿಡಿಯುವಂತೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕ್ಷಣಾರ್ಧದಲ್ಲಿ ಬೆಂಕಿ ಹರಡಿದ್ದು ಒಂದರಿಂದ ಇನ್ನೊಂದು ಮಿನಿ ಹಡಗುಗಳಿಗೆ ವ್ಯಾಪಿಸಿದೆ.


ಸರಕು ಸಾಗಿಸಲು ಬಳಸುತ್ತಿದ್ದ ಮೂರೂ ಹಡಗುಗಳು ಪೂರ್ತಿ ಹೊರಮೈ ಮರದಿಂದ ನಿರ್ಮಿತವಾಗಿದ್ದು ಒಳಭಾಗದ ರಚನೆಯೂ ಫೈಬರ್ ಮತ್ತು ಮರದಿಂದ ಮಾಡಲ್ಪಟ್ಟವು. ಹೀಗಾಗಿ ಬೆಂಕಿ ಬಹುಬೇಗನೆ ಇಡೀ ಹರಡಿದ್ದು ನೋಡ ನೋಡುತ್ತಲೇ ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಬಾನೆತ್ತರಕ್ಕೆ ಏರಿತ್ತು. ಒಂದು ಹಡಗು ಮಂಗಳೂರಿನ ವೈದ್ಯರಿಗೆ ಸೇರಿದ್ದಾಗಿದ್ದು ಇನ್ನೆರಡು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದೆಂದು ಮಾಹಿತಿಯನ್ನು ಸ್ಥಳೀಯರು ತಿಳಿಸಿದ್ದಾರೆ.


ವಿಷಯ ತಿಳಿದ ಕೂಡಲೇ ವಿವಿಧ ಕಡೆಯ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಪಣಂಬೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೂರೂ ಹಡಗುಗಳು ಪೂರ್ತಿಯಾಗಿ ಸುಟ್ಟು ಹೋಗಿವೆ. ಈ ಮಿನಿ ಹಡಗಿನ ಒಂದರ ಬೆಲೆ ಐದು ಕೋಟಿಯಷ್ಟಿದ್ದು ಬೆಂಕಿ ದುರಂತದಲ್ಲಿ ಮೂರೂ ಭಸ್ಮ ಆಗಿವೆ. ಈ ಮಿನಿ ಹಡಗಿನಲ್ಲಿ ಅಂದಾಜು 300 ಟನ್ ನಷ್ಟು ಸರಕು ಸಾಗಾಟ ಮಾಡಲಾಗುತ್ತಿತ್ತು.
Mangalore Three boats anchored in Kasaba Bengre under Panambur Police Station limits here accidentally caught fire on Friday, October 28. It is said that initially one boat caught fire. Later the flames spread to nearby anchored boats.
09-02-26 07:20 pm
Bangalore Correspondent
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರ...
09-02-26 12:29 pm
Gadag, No phone, Tv: ಎಸ್ಸೆಸ್ಸೆಲ್ಸಿ ಮಕ್ಕಳ ಭವಿಷ...
07-02-26 05:09 pm
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
09-02-26 10:25 pm
HK News Desk
ಜಾಗತಿಕ ಷೇರು ಮಾರುಕಟ್ಟೆಯಲ್ಲಿ 'ಆಂಥ್ರೋಪಿಕ್' AI ಬಿ...
09-02-26 12:27 pm
ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕ...
08-02-26 10:18 pm
25 ವರ್ಷಗಳ ಬಳಿಕ ಮುಂಬೈ ಪಾಲಿಕೆ ಬಿಜೆಪಿ ತೆಕ್ಕೆಗೆ ;...
07-02-26 10:53 pm
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
09-02-26 11:20 pm
HK News Desk
Mangalore Accident, Bus: ನಂತೂರಿನಲ್ಲಿ ಅಪಘಾತಕ್ಕ...
09-02-26 08:02 pm
ಕೆಪಿಟಿ ಜಂಕ್ಷನ್ ಬಳಿಯ ಹೆದ್ದಾರಿ ಡಿವೈಡರ್ ಮುಚ್ಚಿದ್...
09-02-26 02:50 pm
ಸೌಜನ್ಯಾ ಕೊಲೆ ಪ್ರಕರಣ ; ದೋಷಪೂರಿತ ತನಿಖೆ ನಡೆಸಿದ ಅ...
08-02-26 11:17 pm
ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ; ಕೋಡಿ- ಕನ್ಯಾನ...
08-02-26 10:10 pm
09-02-26 02:04 pm
HK News Desk
ಬೆಳ್ತಂಗಡಿ ; ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತ...
09-02-26 11:26 am
Mangalore Jail Raid: ಮಂಗಳೂರು ಜೈಲಿನಲ್ಲಿ ಬರ್ಕೆ...
08-02-26 02:07 pm
MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಪೊಲೀಸ್ ದಾ...
08-02-26 12:59 pm
Mangalore Robbery, Crime: ಕಳವಾರಿಗೆ ಮೆಹಂದಿ ಹೋಗ...
08-02-26 12:37 pm