ಬ್ರೇಕಿಂಗ್ ನ್ಯೂಸ್
26-10-22 10:41 pm Mangalore Correspondent ಕರಾವಳಿ
ಮಂಗಳೂರು, ಅ.26 : ಕಂಕನಾಡಿ ಬಳಿಯ ಜೆಪ್ಪು ಬಪ್ಪಾಲ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎನ್ನುವ ವದಂತಿ ಹರಡಿತ್ತು. ಬಳಿಕ ಪೊಲೀಸರು ಚೆಕ್ ಮಾಡಿದಾಗ, ಫುಡ್ ಪಾಯ್ಸನ್ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದು ತಿಳಿದುಬಂತು.
ಜೆಪ್ಪು ಬಪ್ಪಾಲ್ ನಿವಾಸಿ ಅರವಿಂದ ರಾವ್ (52), ಅವರ ಪತ್ನಿ ಪ್ರಭಾವತಿ (45), ಮಕ್ಕಳಾದ ಸೌರಭ್(20) ಮತ್ತು ಪ್ರತೀಕ್ (18) ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಬೆಳಗ್ಗೆ ಅವರು ಮನೆಯಲ್ಲಿ ಎದ್ದಿರಲಿಲ್ಲ. ಬೆಳಗ್ಗೆ ಬಾಗಿಲು ತೆಗೆಯದೇ ಇರುವುದನ್ನು ಗಮನಿಸಿದ ಸಂಬಂಧಿಕರು ಒಡೆದು ನೋಡಿದಾಗ ನಾಲ್ವರು ಕೂಡ ವಾಂತಿ ಮಾಡಿದ್ದು ಕಂಡುಬಂದಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇವರು ನಿನ್ನೆ ರಾತ್ರಿ ಹೆಸರು ಬೇಳೆ ಹಾಗೂ ಐಸ್ ಕ್ರೀಂ ತಿಂದು ಮಲಗಿದ್ದಾರೆ ಎನ್ನಲಾಗಿದ್ದು ಅದು ಫುಡ್ ಪಾಯ್ಸನ್ ಆಗಿರುವುದಾಗಿ ನಂಬಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು ನಾಲ್ವರು ಕೂಡ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆ ಮಾತ್ರ ನಾಲ್ವರು ಆತ್ಮಹತ್ಯೆ ಯತ್ನ ಎಂದೇ ಸುದ್ದಿ ಹಬ್ಬುವಂತಾಗಿತ್ತು. ಮನೆಯಲ್ಲಿ ವಾಂತಿ ಮಾಡಿ ಬಿದ್ದುಕೊಂಡಿದ್ದವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ಒಯ್ದಿದ್ದರಿಂದ ಅಂತಹ ಸಂಶಯ ಬರುವಂತಾಗಿತ್ತು. ಈ ಬಗ್ಗೆ ಅವರಲ್ಲಿ ವೈದ್ಯರು ಪ್ರಶ್ನೆ ಮಾಡಿದಾಗ, ಯಾವುದೇ ವಿಷಕಾರಿ ವಸ್ತು ತಿಂದಿಲ್ಲ ಎಂದಿದ್ದಾರೆ.
In a bizarre case, what was presumed to be a mass suicide attempt by a family of four turned out to be an instance of food poisoning.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 07:09 pm
HK News Desk
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
15-11-25 07:42 pm
Mangalore Correspondent
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm