ಬ್ರೇಕಿಂಗ್ ನ್ಯೂಸ್
10-10-22 08:47 pm Mangalore Correspondent ಕರಾವಳಿ
ಉಳ್ಳಾಲ, ಅ.10 : ಕ್ಷುಲ್ಲಕ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆಸಿದ್ದಲ್ಲದೆ, ಮಹಿಳೆ ಮತ್ತು ಆಕೆಯ ಗಂಡನ ಮೇಲೆ ಬಿಜೆಪಿ ಪುಢಾರಿ ಮತ್ತು ಪೊಲೀಸ್ ಸಿಬಂದಿಯೊಬ್ಬರು ಸೇರಿ ಹಲ್ಲೆಗೈದ ಘಟನೆ ಕೊಲ್ಯ ಬಳಿಯ ಕಣೀರು ತೋಟ ಎಂಬಲ್ಲಿ ನಡೆದಿದೆ.
ಕೊಲ್ಯ ಕಣೀರುತೋಟ ನಿವಾಸಿ ವಿಜಯಲಕ್ಷ್ಮಿ(43) ಹಲ್ಲೆಗೊಳಗಾದ ಮಹಿಳೆ. ನಿನ್ನೆ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದ ವೇಳೆ ಮನೆಯಂಗಳದ ಹೊರಗೆ ಸ್ಕೂಟರಲ್ಲಿ ತೆರಳುತ್ತಿದ್ದ ಸ್ಥಳೀಯ ಬಿಜೆಪಿ ಪುಢಾರಿ ಶೇಖರ್ ಕಣೀರ್ ತೋಟ ಎಂಬವರು ಕರ್ಕಷವಾಗಿ ಪದೇ ಪದೇ ಹಾರ್ನ್ ಹೊಡೆದಿದ್ದಾರೆ ಎನ್ನಲಾಗಿದೆ. ಹಾರ್ನ್ ಯಾಕ್ ಹೊಡೀತೀಯ ಎಂದು ವಿಜಯಲಕ್ಷ್ಮಿ ಅವರು ಶೇಖರ್ ಅವರಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ, ಮಾತಿಗೆ ಮಾತು ಬೆಳೆದು ಶೇಖರ್ ಮತ್ತು ಸ್ಥಳೀಯ ನಿವಾಸಿ ಪಾಂಡೇಶ್ವರ ಪೊಲೀಸ್ ಠಾಣೆ ಸಿಬಂದಿ ನೂತನ್ ಕೊಲ್ಯ ಮತ್ತು ಇತರರು ವಿಜಯಲಕ್ಷ್ಮಿ ಅವರ ನಿವಾಸದ ಅಂಗಳಕ್ಕೆ ಬಂದಿದ್ದು ಮಹಿಳೆಯ ಕೈಎಳೆದು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯೊಳಗಿದ್ದ ವಿಜಯಲಕ್ಷ್ಮಿ ಅವರ ಪತಿ ತೇಜ್ ಪಾಲ್, ಮಕ್ಕಳಾದ ಹಿತೇಶ್ ಮತ್ತು ಹರ್ಷ ಅವರು ಗಲಾಟೆ ತಡೆಯಲು ಬಂದಿದ್ದಾರೆ. ಜಟಾಪಟಿಯಲ್ಲಿ ವಿಜಯಲಕ್ಷ್ಮಿ ಮತ್ತು ಪತಿಯ ಮೇಲೆ ಹಲ್ಲೆ ನಡೆಸಲಾಗಿದ್ದು ವಿಜಯಲಕ್ಷ್ಮಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೆ ವೈಷಮ್ಯದಿಂದ ಹಲ್ಲೆ ಕೃತ್ಯ
ಸ್ಥಳೀಯ ಬಿಜೆಪಿ ಪುಢಾರಿ ಶೇಖರ್, ವಿಜಯಲಕ್ಷ್ಮಿ ಅವರ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು. ವಿಜಯಲಕ್ಷ್ಮಿ ಅವರ ಮನೆಯ ಮುಂದೆ, ಶೇಖರ್ ತನ್ನ ಅತ್ತಿಗೆಗಾಗಿ ಮನೆಯನ್ನು ನಿರ್ಮಿಸಲು ಮುಂದಾಗಿದ್ದರು. ಶೇಖರ್ ನಿರ್ಮಿಸುತ್ತಿದ್ದ ಮನೆ ಕಾಮಗಾರಿಯನ್ನ ಅಕ್ರಮವೆಂದು ಕಾನೂನು ಹೋರಾಟ ನಡೆಸಿ ವಿಜಯಲಕ್ಷ್ಮಿ ತಡೆದಿದ್ದರು. ಇದರಿಂದ ಇವರ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು. ಹಳೆ ವೈಷಮ್ಯದಲ್ಲಿ ಈಗ ಮಾತನಾಡಿಕೊಂಡು ಹಲ್ಲೆಗೂ ಯತ್ನಿಸಿದ್ದಾರೆ. ಘಟನೆ ಬಗ್ಗೆ ಶೇಖರ್, ಪೊಲೀಸ್ ಸಿಬಂದಿ ನೂತನ್ ಸೇರಿ ಐವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangalore Woman assaulted by police constable and BJP leader over horn matter in Ullal, Kolya resident Vijayalakshmi has been hospitalized after she suffered injuries. Bjp leader Shekar and Pandeshwara police station staff Nutan have assaulted women over silly reasons.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm