ಬ್ರೇಕಿಂಗ್ ನ್ಯೂಸ್
31-08-22 05:55 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 31: ಮೋದಿ ಆಗಮನದ ಹಿನ್ನೆಲೆಯಲ್ಲಿ ಸೆ.2ರಂದು ಬಹುತೇಕ ಮಂಗಳೂರು ಸ್ತಬ್ಧವಾಗುವ ಸಾಧ್ಯತೆ ಕಂಡುಬಂದಿದೆ. ಜಿಲ್ಲಾಡಳಿತ, ಎನ್ಎಂಪಿಟಿ ಮತ್ತು ಎಂಆರ್ ಪಿಎಲ್ ವತಿಯಿಂದ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಪ್ರತಿ ಗ್ರಾಮದಿಂದ ಜನರನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಸುಮಾರು 75 ಸಾವಿರ ಕೇಂದ್ರ ಸರಕಾರದ ಫಲಾನುಭವಿಗಳಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಎಂಆರ್ ಪಿಎಲ್ ಮತ್ತು ಎನ್ಎಂಪಿಟಿ ಆಧರಿತ ವ್ಯಾಪಾರ ಕೇಂದ್ರಗಳು, ಇನ್ನಿತರ ವಹಿವಾಟುದಾರರು ಒಂದೂವರೆ ಲಕ್ಷ ಮಂದಿಗೆ ಆಹ್ವಾನ ನೀಡಲಾಗಿದೆ. ಉಳಿದಂತೆ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬಹುದು. ಇದಕ್ಕಾಗಿ ಟ್ರಾಫಿಕ್ ಡೈವರ್ಶನ್ ಸೇರಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟ್ರಾಫಿಕ್ ಡೈವರ್ಶನ್ ಮಾಡುವ ಬಗ್ಗೆಯೂ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಕೆಪಿಟಿ- ಕುಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಸೆ.2ರಂದು ಬೆಳಗ್ಗಿನಿಂದಲೇ ಕುಳೂರು ಜಂಕ್ಷನ್ನಿಂದ ಕೆಪಿಟಿ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೆಪಿಟಿ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ವಾಹನಗಳು ಗೋಲ್ಡ್ ಫಿಂಚ್ ಸಿಟಿ ಮೈದಾನದ ಪೂರ್ವದಲ್ಲಿರುವ ಬಯಲು ಪ್ರದೇಶಕ್ಕೆ ಕೊಟ್ಟಾರ ಚೌಕಿಯಿಂದ ಮಾಲೆಮಾರ್ ಮೂಲಕ ತೆರಳಬೇಕು. ಕಾವೂರು ಭಾಗದಿಂದ ಬರುವ ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕುಳೂರಿನ ಟಾಟಾ ಶೋರೂಮ್ ಮುಂದಿನ ಕಾವೂರು ರಸ್ತೆ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು.
ಪಡುಬಿದ್ರಿಯಲ್ಲಿ ಘನ ವಾಹನಗಳಿಗೆ ಡೈವರ್ಶನ್
ಉಡುಪಿ ಕಡೆಯಿಂದ ಆಗಮಿಸುವ ಘನ ವಾಹನಗಳು ಪಡುಬಿದ್ರಿ ಜಂಕ್ಷನ್ನಿಂದ ಕಾರ್ಕಳ- ಬೆಳ್ಮಣ್ ಮಾರ್ಗದಲ್ಲಿ ಮೂಡುಬಿದ್ರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮೆಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು ಕಡೆಗೆ ಸಂಚರಿಸುವುದು, ಇನ್ನಿತರ ಲಘು ವಾಹನಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ, ವಿಜಯ ಸನ್ನಿಧಿ, ಮೂರು ಕಾವೇರಿ, ಕಟೀಲು, ಬಜಪೆ, ಕೈಕಂಬ ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು, ಬಂಟ್ವಾಳ ಕಡೆಗೆ ತೆರಳುವ ವಾಹನಗಳು ಮೂಡುಬಿದ್ರೆ ಮೂಲಕ ಮಂಗಳೂರಿಗೆ ಸಾಗುವುದು.
ಸುರತ್ಕಲ್ ನಿಂದ ಬಜ್ಪೆ, ಕೈಕಂಬ ರಸ್ತೆಗೆ ದಾರಿ
ಸುರತ್ಕಲ್ ನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕಾನ ರಸ್ತೆಯಾಗಿ ಜೋಕಟ್ಟೆ, ಪೊರ್ಕೋಡಿ, ಬಜ್ಪೆ, ಕೈಕಂಬ, ಗುರುಪುರ ಮಾರ್ಗವಾಗಿ ಮಂಗಳೂರಿಗೆ ತೆರಳಬೇಕು. ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡುಬಿದ್ರೆ ಮಾರ್ಗವಾಗಿ ಮಂಗಳೂರಿಗೆ ಸಾಗುವುದು, ತಲಪಾಡಿ, ಉಳ್ಳಾಲ ಕಡೆಯಿಂದ ಬಿಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು ಕೆಸಿ ರೋಡ್, ತೊಕ್ಕೊಟ್ಟು, ಮುಡಿಪು ಮಾರ್ಗವಾಗಿ ಸಂಚರಿಸುವುದು. ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ, ಕಟೀಲು, ಮುಲ್ಕಿ ಮೂಲಕ ತೆರಳುವುದು. ಬಂಗ್ರಕುಳೂರು ಸಾರ್ವಜನಿಕ ಸಮಾವೇಶ ಇರುವುದರಿಂದ ಕೆಪಿಟಿ ಜಂಕ್ಷನ್ನಿಂದ ಪಣಂಬೂರಿನ ಎನ್ಎಂಪಿಟಿ ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಗ್ಗೆ 6ರಿಂದ ಸಂಜೆ ಕಾರ್ಯಕ್ರಮ ಮುಕ್ತಾಯದ ವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಉಡುಪಿ, ಮೂಲ್ಕಿ ಕಡೆಯವ್ರಿಗೆ ತಣ್ಣೀರುಬಾವಿ ಪಾರ್ಕಿಂಗ್
ಉಡುಪಿ, ಮೂಲ್ಕಿ, ಸುರತ್ಕಲ್, ಬಜ್ಪೆ ಕಡೆಯಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ಬಸ್ಸುಗಳಿಗೆ ತಣ್ಣೀರುಬಾವಿ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ. ದ್ವಿಚಕ್ರ. ಕಾರು, ಇನ್ನಿತರ ಲಘು ವಾಹನಗಳಿಗೆ ಎನ್ಎಂಪಿಟಿ ಮೈದಾನ ಮತ್ತು ಎಂಎಸ್ಇಝೆಡ್ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ.
ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಪಾರ್ಕಿಂಗ್
ಮೂಡುಬಿದ್ರೆ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಿಂದ ಸಮಾವಶಕ್ಕೆ ಬರುವ ಬಸ್ಸುಗಳಿಗೆ ಕೆಪಿಟಿ ಮೈದಾನ, ವ್ಯಾಸನಗರ ಮೈದಾನ, ಪದವು ಮೈದಾನ, ಕರಾವಳಿ ಉತ್ಸವ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವಾ ಮಾರ್ಕೆಟ್ ಮೈದಾನ, ಉರ್ವಾ ಸ್ಟೋರ್ ಮಾರ್ಕೆಟ್, ಕುಂಟಿಕಾನ ಜಂಕ್ಷನ್ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ. ಕಾರು ಇತರ ಲಘು ವಾಹನಗಳಿಗೆ ಎಜೆ ಆಸ್ಪತ್ರೆ, ಲೇಡಿಹಿಲ್ ಚರ್ಚ್ ಗ್ರೌಂಡ್, ಕರಾವಳಿ ಮೈದಾನದಲ್ಲಿ ಪಾರ್ಕಿಂಗ್ ಇರಲಿದೆ.
ವಿಐಪಿ ವಾಹನಗಳಿಗೆ ಕುಳೂರಿನಲ್ಲೇ ಪಾರ್ಕಿಂಗ್
ಉಡುಪಿ, ಮುಲ್ಕಿ, ಸುರತ್ಕಲ್, ಬಜ್ಪೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ ಗಳು ಕುಳೂರು ಜಂಕ್ಷನ್ನಲ್ಲಿ ಜನರನ್ನು ಇಳಿಸಿ ತಣ್ಣೀರುಬಾವಿ ರಸ್ತೆಗೆ ತೆರಳುವುದು. ಮಂಗಳೂರು ನಗರ, ಮೂಡುಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಕಡೆಯಿಂದ ಆಗಮಿಸುವ ವಾಹನಗಳು ಕೊಟ್ಟಾರ ಚೌಕಿ ಬಳಿ ಜನರನ್ನು ಇಳಿಸಿ, ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಕ್ಕೆ ತೆರಳುವುದು. ವಿವಿಐಪಿ ಪಾಸ್ ಹೊಂದಿರುವ ವಾಹನಗಳಿಗೆ ಬಂಗ್ರ ಕುಳೂರು ಡೆಲ್ಟಾ ಗ್ರೌಂಡ್ ನಲ್ಲಿ ಪಾರ್ಕಿಂಗ್ ಇರಲಿದೆ. ವಿಐಪಿ ಪಾಸ್ ಹೊಂದಿರುವ ವಾಹನಗಳಿಗೆ ರೆನಾಲ್ಡ್ ಶೋರೂಂ ಎದುರುಗಡೆಯ ವಿಆರ್ ಎಲ್ ಗೋಡೌನ್ ಬಳಿಯ ಸೋಮಯಾಜಿ ಗ್ರೌಂಡ್ ಮತ್ತು ಎಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜು ಬಂಗ್ರಕುಳೂರಿನಲ್ಲಿ ನಿಲ್ಲಿಸಲು ಅವಕಾಶವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಂದಿ ಯಾವುದೇ ರೀತಿಯ ಶಸ್ತ್ರಾಸ್ತ್ರ, ಸ್ಫೋಟಕ ವಸ್ತು, ಆಯುಧ, ದಹನ ಶೀಲ ವಸ್ತುಗಳು, ಕಪ್ಪು ಬಾವುಟ, ಬ್ಯಾನರ್, ಆಕ್ಷೇಪಾರ್ಹ ವಸ್ತುಗಳನ್ನು ತರುವುದಕ್ಕೆ ನಿರ್ಬಂಧ ಇರುತ್ತದೆ.
ಕೆಂಜಾರು, ಮರವೂರು, ಮರಕಡ, ಕಾವೂರು, ಬೊಂದೆಲ್, ಯೆಯ್ಯಾಡಿ ಮತ್ತು ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್ನಿಂದ ಕೊಟ್ಟಾರ ಚೌಕಿ, ಕುಳೂರು, ಎನ್ಎಂಪಿಟಿ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಿಷೇಧಿಸಿದೆ.
The district administration has made all the necessary preparations ahead of prime minister Narendra Modi’s visit to Mangaluru on September 2. Addressing the media here on Wednesday, August 31, Deputy Commissioner Dr Rajendra K V said, "Close to 1 lac people will gather at the prime minister’s program including beneficiaries of central government schemes. We have taken certain measures ahead of the event and are well prepared. We have appealed to the beneficiaries to take part in the event."
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm