ಬ್ರೇಕಿಂಗ್ ನ್ಯೂಸ್
14-11-25 09:10 pm HK News Desk ದೇಶ - ವಿದೇಶ
ಪಾಟ್ನಾ, ನ.14 : ಬಿಹಾರ ಚುನಾವಣೆಯಲ್ಲಿ ರಾಜಕಾರಣಿಗಳ ಪಾಲಿಗೆ ಬಾಹುಬಲಿ, ಊರಿನ ಜನರ ಪಾಲಿಗೆ ಛೋಟೇ ಸರ್ಕಾರ್ ಎಂದು ಖ್ಯಾತಿ ಪಡೆದಿರುವ ಅನಂತ್ ಕುಮಾರ್ ಸಿಂಗ್ ಜೈಲಿನಲ್ಲಿದ್ದುಕೊಂಡೇ ಎದುರಾಳಿ ವಿರುದ್ಧ 28 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಯಾವುದೇ ಪದವಿಯನ್ನು ಹೊಂದಿಲ್ಲದ, ಕೇವಲ ಓದಲು, ಬರೆಯಲು ಮಾತ್ರ ಬರುವ ಅಂದರೆ ಜಸ್ಟ್ ಅಕ್ಷರಸ್ಥ ಎಂದೇ ತನ್ನ ಅಫಿಡವಿಟ್ ನಲ್ಲಿ ಬರೆದುಕೊಂಡಿರುವ ಅನಂತ್ ಕುಮಾರ್ ಸಿಂಗ್ ಗೆಲುವು ಇಡೀ ದೇಶದ ಗಮನ ಸೆಳೆದಿದೆ.
2005ರಿಂದ ನಿರಂತರ ಐದು ಬಾರಿ ಮೊಕಾಮಾ ಕ್ಷೇತ್ರದಲ್ಲಿ ಗೆದ್ದುಕೊಂಡು ಬಂದಿರುವ ಅನಂತ್ ಕುಮಾರ್ ಸಿಂಗ್ ಅವರದ್ದು ಈ ಸಲ ಆರನೇ ಗೆಲುವು. ಆದರೆ ಇವರ ಮೇಲೆ ದಾಖಲಾಗಿರುವ ಅಪರಾಧಿಕ ಪ್ರಕರಣಗಳು ಬರೋಬ್ಬರಿ 52. ಹೀಗೆಂದು 2020ರ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಮೊಕಾಮಾ ಕ್ಷೇತ್ರದಲ್ಲಿ ಈ ಸಲ ಹಲವರು ಡಿಗ್ರಿ, ಎಂಎ ಇನ್ನಿತರ ಪದವಿ ಗಳಿಸಿದವರು ಚುನಾವಣಾ ಕಣದಲ್ಲಿದ್ದರೆ, ಅನಂತ್ ಕುಮಾರ್ ಸಿಂಗ್ ತಾನೊಬ್ಬ ಅಕ್ಷರಸ್ಥ ಅಷ್ಟೇ ಎಂದು ಹೇಳಿಕೊಂಡು ಚುನಾವಣೆ ಗೆಲ್ಲಲು ಕೇವಲ ಡಿಗ್ರಿ ಸಾಲಲ್ಲ ಎಂದು ತೋರಿಸಿದ್ದಾರೆ.



ಈ ಬಾರಿಯ ಚುನಾವಣೆ ಸ್ಪರ್ಧೆ ಸಂದರ್ಭದಲ್ಲಿ ಅನಂತ್ ಕುಮಾರ್ ಸಿಂಗ್ ತನ್ನ ಆಸ್ತಿಯನ್ನು 100.06 ಕೋಟಿಯೆಂದು ಘೋಷಿಸಿದ್ದು 28 ಕ್ರಿಮಿನಲ್ ಕೇಸುಗಳು ಬಾಕಿ ಇವೆ ಎಂದು ಹೇಳಿಕೊಂಡಿದ್ದಾರೆ. ಇವರಿಗೆ ಮೊಕಾಮಾ ಕ್ಷೇತ್ರದಲ್ಲಿ ಛೋಟೇ ಸರ್ಕಾರ್ ಎಂದೂ ಹೆಸರಿದೆ. ಇವರ ದೊಡ್ಡ ಸೋದರ ದಿಲೀಪ್ ಸಿಂಗ್ 1990ರ ದಶಕದಲ್ಲಿ ಬಡೇ ಸರ್ಕಾರ್ ಎಂಬ ಹೆಸರಿನಲ್ಲಿ ಗುರುತಿಸಿದ್ದರು. ಶುಭ್ರ ಬಿಳಿ ವಸ್ತ್ರ, ಕಪ್ಪು ಕನ್ನಡಕ, ಜನಸೇವಕನ ಪೋಸಿನ ಕಾರಣಕ್ಕೆ ಇವರಿಗೆ ಬಡೇ ಸರ್ಕಾರ್, ಅವರ ಅಗಲಿಕೆ ನಂತರ ತಮ್ಮನಿಗೆ ಛೋಟೇ ಸರ್ಕಾರ್ ಎಂಬ ಬಿರುದು ಅಭಿಮಾನಿಗಳಿಂದ ಬಂದಿತ್ತು.
ಅಂದಹಾಗೆ, ಈ ಬಾರಿಯ ಚುನಾವಣೆಯಲ್ಲಿ ಅನಂತ್ ಸಿಂಗ್ ಜೆಡಿಯು ಪಕ್ಷದಿಂದ 91,416 ಮತ ಪಡೆದಿದ್ದು ನಿಕಟ ಪ್ರತಿಸ್ಪರ್ಧಿ ಆರ್ ಜೆಡಿಯ ವೀಣಾ ದೇವಿ ಅವರನ್ನು 28,206 ಮತಗಳಿಂದ ಸೋಲಿಸಿದ್ದಾರೆ. ವಿಚಿತ್ರ ಅಂದ್ರೆ, ಮೊನ್ನೆ ಮತದಾನಕ್ಕೆ ಒಂದು ವಾರ ಇರುವಾಗಲೇ ಅನಂತ್ ಕುಮಾರ್ ಸಿಂಗ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದರು. ಅಕ್ಟೋಬರ್ 30ರಂದು ತನ್ನ ಪ್ರತಿಸ್ಪರ್ಧಿ ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಪ್ರಿಯದರ್ಶಿ ಪಿಯೂಶ್ ಅವರ ಪರವಾಗಿ ಪಕ್ಕದ ಜಿಲ್ಲೆಯ ಡಾನ್ ಆಗಿರುವ ದೂಲರ್ ಸಿಂಗ್ ಯಾದವ್ ಪ್ರಚಾರ ಕಾರ್ಯಕ್ಕೆ ಬಂದಿದ್ದಾಗಲೇ ಅನಂತ್ ಸಿಂಗ್ ಮತ್ತು ದೂಲರ್ ಸಿಂಗ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ, ದೂಲರ್ ಸಿಂಗ್ ಮೇಲೆ ಶೂಟೌಟ್ ಆಗಿದ್ದು, ಆತನ ಕಾಲಿಗೆ ಗುಂಡೇಟು ಬಿದ್ದಿತ್ತು. ಆದರೆ ಗುಂಡೇಟಿನಿಂದಾಗಿ ಶಾಕ್ ಆದ ದೂಲರ್ ಸಿಂಗ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಆದರೆ ಈ ಕೃತ್ಯವನ್ನು ಅನಂತ್ ಸಿಂಗ್ ಅವರೇ ಮಾಡಿಸಿದ್ದಾರೆಂದು ದೂಲರ್ ಸಿಂಗ್ ಸೋದರ ಪೊಲೀಸ್ ದೂರು ಕೊಟ್ಟಿದ್ದರಿಂದ ಪ್ರಚಾರ ಕಣದಲ್ಲಿದ್ದ ಛೋಟೇ ಸರ್ಕಾರ್ ಜೆಡಿಯು ಆಡಳಿತದಲ್ಲಿದ್ದರೂ ಬಂಧಿತರಾಗಿದ್ದರು.
ಅನಂತ್ ಕುಮಾರ್ ಸಿಂಗ್ ತಾನು ಜೈಲಿನಲ್ಲಿದ್ದರೂ ತನ್ನ ಜನರು ಕೈಬಿಡಲ್ಲ ಎಂಬ ವಿಶ್ವಾಸದಲ್ಲಿದ್ದರು. ಅದೇ ಕಾರಣಕ್ಕೆ ಜೈಲಿಗೋದರೂ ಹೊರಗೆ ಬಾರದೇ ಅಲ್ಲಿಯೇ ಉಳಿದುಕೊಂಡು ಗೆಲುವಿನೊಂದಿಗೆ ಮೀಸೆ ತಿರುವಿದ್ದಾರೆ. ಮತದಾನಕ್ಕೆ ಮೊದಲೇ ಬೆಂಬಲಿಗರು ಛೋಟೇ ಸರ್ಕಾರ್ ಜೈಲಿನ ಕಂಬಿಗಳನ್ನು ಒಡೆದು ಹೊರಗೆ ಬಂದೇ ಬರುತ್ತಾರೆ ಎಂದು ಬ್ಯಾನರ್ ಗಳನ್ನು ಹಾಕಿದ್ದರು. ಕೊಲೆ, ಸುಲಿಗೆ, ಕೊಲೆಯತ್ನ ಹೀಗೆ ಹತ್ತಾರು ಕೇಸುಗಳನ್ನು ಹೊಂದಿರುವ ಅನಂತ್ ಸಿಂಗ್ ಕುಖ್ಯಾತ ಕ್ರಿಮಿನಲ್ ಆಗಿದ್ದರೂ, ದೂಲರ್ ಸಿಂಗ್ ನನ್ನು ನಾನು ಕೊಂದಿಲ್ಲ, ಯಾರೋ ಗುಂಡು ಹಾರಿಸಿದ್ದಕ್ಕೆ ನನ್ನನ್ನು ಜೈಲಿಗೆ ಹಾಕಿದ್ದಾರೆ ಎಂದಿದ್ದರು.
ಇಷ್ಟಕ್ಕೂ ಅನಂತ್ ಸಿಂಗ್, ಬಿಹಾರವನ್ನು ಗೂಂಡಾ ರಾಜ್ಯವನ್ನಾಗಿಸಿದ್ದ ಲಾಲೂ ಕಾಲದಲ್ಲಿಯೇ ಕ್ರಿಮಿನಲ್ ರಾಜಕೀಯದಲ್ಲಿ ಪಳಗುತ್ತ ಬಂದವರು. ನಿತೀಶ್ ಕುಮಾರ್ ಜೆಡಿಯು ಕಡೆಗೆ ಹೋದಾಗ ಅನಂತ್ ಸಿಂಗ್ ಅವರೂ ಆ ಕಡೆ ಸರಿದಿದ್ದರು. 2005ರಲ್ಲಿ ಮೊಕಾಮಾ ಕ್ಷೇತ್ರದಿಂದ ಮೊದಲ ಬಾರಿಗೆ ಜೆಡಿಯುನಿಂದ ಗೆದ್ದು 2010ರಲ್ಲೂ ಅದೇ ಸ್ಥಾನದಿಂದ ಗೆದ್ದಿದ್ದರು. 2015ರ ವೇಳೆಗೆ, ಜೆಡಿಯು – ಆರ್ಜೆಡಿ ಕಚ್ಚಾಟದ ಕಾರಣಕ್ಕೆ ಆ ಪಕ್ಷವನ್ನು ಬಿಟ್ಟು ಸ್ವತಂತ್ರ ಸ್ಪರ್ಧಿಸಿ ಮತ್ತೆ ಗೆಲುವು ಕಂಡಿದ್ದರು. 2020ರಲ್ಲಿ ಆರ್ ಜೆಡಿ ಪಕ್ಷದಲ್ಲಿ ಗೆದ್ದು ಶಾಸಕರಾಗಿದ್ದರು. 2022ರಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅನಂತ್ ಸಿಂಗ್ ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಉಪ ಚುನಾವಣೆ ನಡೆದಾಗ ತನ್ನ ಪತ್ನಿ ನೀಲಂ ಸಿಂಗ್ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು. ಈ ಬಾರಿ ತನ್ನ ಎದುರಾಳಿ ಸೂರಜ್ ಬನ್ ಸಿಂಗ್ ಅವರ ಪತ್ನಿ ವೀಣಾ ದೇವಿ ಆರ್ ಜೆಡಿಯಿಂದ ಕಣಕ್ಕಿಳಿದರೂ ಅವರನ್ನು ಸೋಲಿಸಿ ಜೈಲಿನಲ್ಲಿದ್ದೇ ಗೆಲುವಿನ ಹಾರ ತೊಡಿಸಿಕೊಂಡಿದ್ದಾರೆ.
Bihar’s controversial strongman and six-time Mokama MLA, Anant Kumar Singh — popularly known as Chhote Sarkar — has won the election by over 28,000 votes while lodged in jail. Arrested just days before voting in connection with a murder case, the criminal-turned-politician with 52 criminal cases continues to enjoy massive public support.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 11:01 pm
Mangalore Correspondent
ಬೀದಿ ನಾಯಿಗಳ ದಾಳಿಗೆ ಮಂಗಳೂರಿನಲ್ಲಿ ವ್ಯಕ್ತಿ ಬಲಿ !...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm