ಬ್ರೇಕಿಂಗ್ ನ್ಯೂಸ್
30-05-22 01:10 pm Mangalore Correspondent ಕರಾವಳಿ
ಮಂಗಳೂರು, ಮೇ 30: ಮೈಸೂರಿನಿಂದ ಹಲಸಿನ ಮೇಳಕ್ಕೆ ಬಂದವರಿಬ್ಬರು ಎರಡು ದಿನದ ವ್ಯಾಪಾರ ಮುಗಿಸಿ ಪಣಂಬೂರು ಬೀಚ್ ನೋಡಲೆಂದು ಹೋಗಿ ಸ್ನಾನಕ್ಕಿಳಿದು ಸಮುದ್ರಪಾಲಾಗಿರುವ ಘಟನೆ ನಡೆದಿದೆ.
ಮೈಸೂರಿನ ಜಯನಗರದ ನಾಲ್ಕನೇ ಕ್ರಾಸ್ ನಿವಾಸಿಗಳಾದ ದಿವಾಕರ ಆರಾಧ್ಯ(40), ನಿಂಗಪ್ಪ (65) ಮೃತರು. ಇವರು ಮೈಸೂರಿನ ಅಗ್ರಹಾರದಲ್ಲಿ ಆರಾಧ್ಯ ಫುಡ್ ಅಂಡ್ ಬೇವರೇಜಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಂಗಳೂರಿನ ಬಾಳಂ ಭಟ್ ಹಾಲ್ ನಲ್ಲಿ ಮೇ 28, 29ರಂದು ಎರಡು ದಿನಗಳ ಹಲಸಿನ ಮೇಳ ನಡೆದಿದ್ದು, ಅದರಲ್ಲಿ ಸ್ಟಾಲ್ ಹಾಕಲು ಬಂದಿದ್ದರು. ಶನಿವಾರ, ಭಾನುವಾರ ಎರಡು ದಿನಗಳಲ್ಲಿ ವ್ಯಾಪಾರ ಮುಗಿಸಿ, ಇಂದು ಬೆಳಗ್ಗೆ ನಾಲ್ವರು ಸೇರಿಕೊಂಡು ಪಣಂಬೂರು ಬೀಚ್ ಹೋಗಿದ್ದರು.
ಬೀಚ್ ನೋಡಿಕೊಂಡು ಬಳಿಕ ಮೈಸೂರಿಗೆ ಹೊರಡಲು ಪ್ಲಾನ್ ಹಾಕಿದ್ದರು. ಆದರೆ, ಬೀಚ್ ನಲ್ಲಿ ನೀರಾಟವಾಡುತ್ತಿದ್ದಾಗ ಅಲೆಗಳ ನಡುವೆ ಸಿಲುಕಿದ್ದು ಒಬ್ಬರನ್ನು ರಕ್ಷಿಸಲು ಹೋಗಿ ಇಬ್ಬರೂ ನೀರುಪಾಲಾಗಿದ್ದಾರೆ. ಇನ್ನಿಬ್ಬರು ಬಚಾವ್ ಆಗಿದ್ದಾರೆ. ಬಳಿಕ ಸ್ಥಳೀಯ ಮೀನುಗಾರರು ಬಂದು ಇಬ್ಬರ ಶವ ಮೇಲೆತ್ತಿದ್ದಾರೆ. ಹಲಸಿನ ಮೇಳದಲ್ಲಿ ಆಹಾರ ಸಾಮಗ್ರಿ ವ್ಯಾಪಾರಕ್ಕೆ ಬಂದಿದ್ದವರು ಬೀಚ್ ನೋಡುವ ಧಾವಂತದಲ್ಲಿ ದುರಂತ ಸಾವು ಕಂಡಿದ್ದಾರೆ.
Two from Mysuru drowned at Panambur Beach in Mangalore.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
19-09-26 03:37 pm
HK News Staffer
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am