ಬ್ರೇಕಿಂಗ್ ನ್ಯೂಸ್
30-05-22 12:29 pm Mangalore Correspondent ಕರಾವಳಿ
ಮಂಗಳೂರು, ಮೇ 30: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಇಂದು ಕೂಡ ಹೈಡ್ರಾಮಾ ನಡೆದಿದ್ದು ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದ 16 ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾರೆ.
ವಿವಿ ಪದವಿ ಕಾಲೇಜಿನಲ್ಲಿ ಸೋಮವಾರದಿಂದ ಹಿಜಾಬ್ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಿಡಿಸಿ ಸಭೆಯಲ್ಲಿ ನಿರ್ಣಯ ಆಗಿರುವುದರಿಂದ ಪ್ರಾಂಶುಪಾಲೆ ಅನಸೂಯಾ ರೈ ಇಂದು ಖಡಕ್ಕಾಗಿ ನಿಲುವು ತೆಗೆದುಕೊಂಡಿದ್ದಾರೆ. ಬುರ್ಖಾ, ಹಿಜಾಬ್ ಹಾಕ್ಕೊಂಡು ಬಂದ ವಿದ್ಯಾರ್ಥಿನಿಯರು ಕಾಲೇಜು ಆವರಣಕ್ಕೆ ಬಂದು ಅಲ್ಲಿಂದ ಹಿಜಾಬ್ ತೆಗೆದಿಟ್ಟು ತರಗತಿಗೆ ತೆರಳಬೇಕೆಂದು ಸೂಚನೆ ನೀಡಿದ್ದರು. ಅದರಂತೆ, ಇಂದು ಬೆಳಗ್ಗೆ ಕಾಲೇಜು ಗೇಟ್ ನಲ್ಲಿಯೇ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿಗಳನ್ನು ಪಾಸ್ ಪರಿಶೀಲಿಸಿ ಒಳಬಿಡುತ್ತಿದ್ದರು. ಆದರೆ ಮೊನ್ನೆ ತರಗತಿ ಬಹಿಷ್ಕರಿಸಿ ಹೊರನಡೆದಿದ್ದ 12 ಮಂದಿ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ತರಗತಿಗೆ ಹೋಗದೆ ಹೊರಗಡೆ ನಿಂತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುತ್ತಾರೆಂಬ ನಿರೀಕ್ಷೆ ಹುಸಿಯಾಗುತ್ತಲೇ ಅಲ್ಲಿಂದ ನಡೆದುಕೊಂಡು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾರೆ.
ಆದರೆ ಇಂದು ಮತ್ತಿಬ್ಬರು ಈ ತಂಡಕ್ಕೆ ಸೇರಿಕೊಂಡಿದ್ದು ಮಾಧ್ಯಮಗಳ ಕ್ಯಾಮರಾ ಎದುರಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ನಡೆದು ತೆರಳಿದ್ದಾರೆ. ಕಚೇರಿಯಲ್ಲಿ ಡೀಸಿ ಇರದ ಕಾರಣ ಅಲ್ಲಿಯೇ ಹೊರಗಡೆ ಕಾದು ಕುಳಿತಿದ್ದಾರೆ. ಜಿಲ್ಲಾಧಿಕಾರಿ ರಾಜೇಂದ್ರ, ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರತ್ಯೇಕ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರಣ 12 ಗಂಟೆ ಸುಮಾರಿಗೆ ಡೀಸಿ ಕಚೇರಿಗೆ ಆಗಮಿಸಿದ್ದಾರೆ. ಸೇರಿದ್ದ 16 ವಿದ್ಯಾರ್ಥಿನಿಯರ ಜೊತೆಗೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದ್ದು ಮನವೊಲಿಕೆಗೆ ಪ್ರಯತ್ನ ಪಟ್ಟಿದ್ದಾರೆ. ವಿದ್ಯಾರ್ಥಿನಿಯರು ಯಾವುದೇ ಮೀಡಿಯಾಕ್ಕೂ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ್ದಾರೆ. ಅಲ್ಲದೆ, ಟಿವಿ ಕ್ಯಾಮರಾಗಳು ಜೊತೆಗೆ ಬಂದಿದ್ದಕ್ಕೆ ನಿಮಗ್ಯಾರೂ ಅಕ್ಕ ತಂಗಿಯರಿಲ್ಲವೇ ಎಂದು ಟೀಕೆಯನ್ನೂ ಮಾಡಿದ್ದಾರೆ.
ಹೈಕೋರ್ಟ್ ಹಿಜಾಬ್ ಕುರಿತ ತೀರ್ಪಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ತರಗತಿಗಳಿಗೆ ಮಾತ್ರ ಸಮವಸ್ತ್ರ ಕಡ್ಡಾಯ ಎಂದು ಸೂಚಿಸಿದೆ. ಪದವಿ ಕಾಲೇಜಿನ ಬಗ್ಗೆ ಉಲ್ಲೇಖ ಇಲ್ಲ ಎನ್ನುವುದು ವಿದ್ಯಾರ್ಥಿನಿಯರ ವಾದ. ಹೀಗಾಗಿ ಸರಕಾರಿ ಪದವಿ ಕಾಲೇಜಿನಲ್ಲಿ ತಮಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಕಾಲೇಜಿನ ಆಡಳಿತ ಸಮವಸ್ತ್ರ ಕಡ್ಡಾಯಗೊಳಿಸಿದ್ದರೆ ಅಲ್ಲಿಗೆ ಹಿಜಾಬ್ ತೀರ್ಪು ಅನ್ವಯ ಆಗುತ್ತದೆ ಎನ್ನುವುದು ಕಾಲೇಜು ಆಡಳಿತದ ನಿಲುವು. ಹೀಗಾಗಿ ಹಂಪನಕಟ್ಟೆ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಮೊದಲಿನಿಂದಲೂ ಇದೆ, ಹಿಜಾಬ್ ತೀರ್ಪು ಪಾಲನೆಯಾಗಬೇಕೆಂದು ಶಾಸಕರ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಣಯಿಸಿದೆ.
Hijab row, students with hijab on Monday we're again sent back from Mangalore university as they denied to remove Hijab to enter the classrooms, 16 students with Hijab have approached DC Dr Rajendra Kumar for help. A meeting is going on with the students now.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm