ಬ್ರೇಕಿಂಗ್ ನ್ಯೂಸ್
27-05-22 06:01 pm Mangalore Correspondent ಕರಾವಳಿ
ಮಂಗಳೂರು, ಮೇ 27: ಕವಾಯತು ಮನೆ ಒಳಗಿನ ಡ್ರಾಯಿಂಗ್ ರೂಂನಂತೆ. ಅಲ್ಲಿನ ಅಲಂಕಾರ, ಶಿಸ್ತು ಹೇಗೆ ಮನೆಗೆ ಬರುವವರನ್ನು ಆಕರ್ಷಿಸುತ್ತದೋ ಪೊಲೀಸರ ಕವಾಯತು ಕೂಡ ಶಿಸ್ತನ್ನು ಪ್ರತಿಬಿಂಬಿಸುತ್ತದೆ. ನೋಡುಗರನ್ನು ಆಕರ್ಷಿಸುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ನಗರದ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸ್ ಪರೇಡ್ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಫೀಲ್ಡ್ ನಲ್ಲಿ ಕೆಲಸ ಮಾಡುವಾಗ ಹಿರಿಯ ಅಧಿಕಾರಿಗಳ ಕಮಾಂಡ್ ಮೇಲೆ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಈ ಕವಾಯತು ಪೊಲೀಸರ ಕ್ಷಮತೆ, ಶಿಸ್ತಿಗೆ ಪೂರಕವಾಗಿದ್ದು ಕಾಲ ಕಾಲಕ್ಕೆ ಪರೇಡ್ ನಡೆಸುವುದು ಮುಖ್ಯ ಎಂದು ಅಲೋಕ್ ಕುಮಾರ್ ನುಡಿದರು.
ದ.ಕ. ಜಿಲ್ಲೆಯಲ್ಲಿ ಹಿಂದಿನಿಂದಲೂ ಬೀಟ್ ವ್ಯವಸ್ಥೆ ಇದೆ. ಕೋವಿಡ್ ಕಾರಣ ಸ್ವಲ್ಪ ತೊಂದರೆಯಾಗಿತ್ತು. ಕೋವಿಡ್ ಪ್ರಕರಣ ಕಡಿಮೆ ಆಗಿರುವ ಕಾರಣ ಬೀಟ್ ವ್ಯವಸ್ಥೆ, ಜನಸಂಪರ್ಕ ಸಭೆಗಳನ್ನು ನಡೆಸಬೇಕು. ಈಗಿರುವ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಮುಂದುವರಿಸಬೇಕಿದೆ ಎಂದರು.

ಕಾಸರಗೋಡು, ಕಣ್ಣೂರು ಗಡಿ ಭಾಗದಲ್ಲಿ ಮಾದಕ ದ್ರವ್ಯಗಳ ಸಾಗಾಟ ಮೇಲೆ ನಿಗಾ, ಇತರ ಅಪರಾಧಗಳ ಬಗ್ಗೆ ನೆರೆಯ ಜಿಲ್ಲೆಯ ಪೊಲೀಸರ ಚತೆ ಚರ್ಚೆ ನಡೆಸುವ ಕೆಲಸ ಆಗಬೇಕು. ಆಗ ದುಷ್ಟ ಶಕ್ತಿಗಳಿಗೆ ಭಯ ಆಗಲಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಅಧೀಕ್ಷಕರು, ಐಜಿಪಿಗೆ ಸಲಹೆ ಮಾಡಿದ್ದೇನೆ. ಜನಸಾಮಾನ್ಯರ ಜತೆ ನಿಕಟ ಸಂಪರ್ಕ ಇರಿಸಿ ಕೆಲಸ ಮಾಡಿದರೆ ಶಾಂತಿ ಸುವ್ಯವಸ್ಥೆ, ಅಪರಾಧ ನಿಗ್ರಹ ಕಾಪಾಡಲು ಜನಸ್ನೇಹಿ ಪೊಲೀಸಿಂಗ್ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಣೆ, ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ADGP Alok Kumar in Mangalore, orders strict surveillance at Kerala border over drugs supply. He called upon the Commissioner of Police N Shashi Kumar, and Superintendent of Police Rishikesh Sonawane to conduct meetings with the police officers from the border districts especially Kasargod and Kannur on tackling NDPS cases. There is a need to interact and work in coordination with the police officers from border areas.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am