ಬ್ರೇಕಿಂಗ್ ನ್ಯೂಸ್
27-05-22 02:59 pm Mangalore Correspondent ಕರಾವಳಿ
ಮಂಗಳೂರು, ಮೇ 27: ಮಳಲಿಯ ಜುಮ್ಮಾ ಮಸೀದಿ ಇರುವ ಜಾಗ ಈ ಹಿಂದೆ ಗುರುಮಠಕ್ಕೆ ಸೇರಿತ್ತು. ಶಿವನ ಆರಾಧನೆ ಇತ್ತು ಎಂಬ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದ ಬೆನ್ನಲ್ಲೇ ಗುರುಪುರದ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಮಳಲಿಯಲ್ಲಿ ಲಿಂಗಾಯತ ಮಠ ಇತ್ತು. ಟಿಪ್ಪು ಕಾಲದಲ್ಲಿ ನಾಶ ಆಗಿರುವ ಬಗ್ಗೆ ಶಂಕೆಯಿದೆ ಎಂದು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಹಿಂದಿನ ಕಾಲದಲ್ಲಿ 64 ಮಠಗಳಿದ್ದವು. ಆ ಪೈಕಿ ಈಗ ಉಳಿದುಕೊಂಡಿರುವುದು 21 ಮಾತ್ರ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಲಿಂಗಾಯತರು ಉಳಿದುಕೊಂಡಿದ್ದಾರೆ. ಮಠದಲ್ಲಿರುವ ನೀಲಕಂಠ ವೈಭವ ಎನ್ನುವ ಪುಸ್ತಕದಲ್ಲಿ ಎಲ್ಲೆಲ್ಲಿ 64 ಮಠಗಳಿದ್ದವು ಅನ್ನುವುದರ ಬಗ್ಗೆ ಮಾಹಿತಿಗಳಿವೆ. ಅದರಲ್ಲಿ ಮಳಲಿಯಲ್ಲಿ ಗುರುಮಠ ಇತ್ತೆನ್ನುವ ಬಗ್ಗೆಯೂ ಉಲ್ಲೇಖ ಇದೆ ಎಂದು ಹೇಳಿದ್ದಾರೆ.
ಆ ಭಾಗದಲ್ಲಿ ಗುರುಮಠ ಇದ್ದುದರ ಬಗ್ಗೆ ನಮಗೆ ಮೊದಲೇ ಮಾಹಿತಿಗಳಿದ್ದವು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಯಾರಲ್ಲಿ ಕೇಳಿ ಪಡೆದುಕೊಳ್ಳುವುದು ಎನ್ನುವ ಜಿಜ್ಞಾಸೆ ಇತ್ತು. ಈಗ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿರುವ ಅಂಶಗಳು ನೂರಕ್ಕೆ ನೂರು ಸತ್ಯ. ಶೈವ ಸಂಪ್ರದಾಯದ ಗುರುಮಠಕ್ಕೆ ಸೇರಿದ ಜಾಗ ಅನ್ನುವುದನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. ಸ್ಥಳೀಯರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.

1770ರ ವರೆಗೆ ಈ ಭಾಗದಲ್ಲಿ ಕೆಳದಿ ರಾಜರ ಆಡಳಿತ ಇತ್ತು. ಆನಂತರ ಹೈದರಾಲಿ, ಟಿಪ್ಪು ಆಳ್ವಿಕೆ ಬಂದಿತ್ತು. ಟಿಪ್ಪು ಆಳ್ವಿಕೆಯ ಕಾಲದಲ್ಲಿ ಆತನ ಸಹಚರರು ದಾಳಿ ನಡೆಸಿ ಹಲವಾರು ಮಠಗಳನ್ನು ನಾಶ ಮಾಡಿದ್ದಾರೆ ಎನ್ನಲಾಗುತ್ತಿದೆ. ಆತನ ಕಾಲಾನಂತರ ಈ ಭಾಗದ ಭೂಮಿಯನ್ನು ನೋಡಿಕೊಳ್ಳಲು ಕಟ್ಟೆಮಾರ್ ಜೈನ ವಂಶಸ್ಥರಿಗೆ ನೀಡಲಾಗಿತ್ತು. ಕಟ್ಟೆಮಾರ್ ಕುಟುಂಬಸ್ಥರು 1970ರಲ್ಲಿ ಭೂಮಸೂದೆ ಕಾಯ್ದೆ ಬರುವ ವರೆಗೂ ಲೀಸಿನಂತೆ ಮಠಕ್ಕೆ ಹಣ ನೀಡುತ್ತಿದ್ದರು. ಮಳಲಿಯ ಜಾಗದಲ್ಲಿ ಲಿಂಗಾಯತ ಸಂಪ್ರದಾಯ ಇತ್ತು. ಗುರುಮಠಕ್ಕೆ ಸೇರಿದ ಭೂಮಿಯಾಗಿತ್ತು ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಮಳಲಿ ಮಸೀದಿಯ ಬಗ್ಗೆ ಹಿಂದು ಸಂಘಟನೆಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಇಡಲಾಗಿತ್ತು. ಅದರಲ್ಲಿ ಗುರುಮಠಕ್ಕೆ ಸೇರಿದ ಜಾಗ, ಅಲ್ಲಿ ಶಿವನ ಆರಾಧನೆ ಇತ್ತು. ಅದು ದೇವ ಸಾನ್ನಿಧ್ಯ ಭೂಮಿ ಎನ್ನುವ ಅಂಶವನ್ನು ಜ್ಯೋತಿಷಿಗಳು ತಿಳಿಸಿದ್ದರು. ಅದರಂತೆ ಹಿಂದು ಸಂಘಟನೆಗಳು ಪೂರಕ ದಾಖಲೆಯನ್ನು ಸಂಗ್ರಹಿಸಲು ತೊಡಗಿವೆ. ಅಲ್ಲದೆ, ಈ ಬಗ್ಗೆ ಕೋರ್ಟಿಗೆ ದಾಖಲೆಗಳನ್ನು ಸಲ್ಲಿಸುವುದಕ್ಕೂ ತಯಾರಿ ನಡೆಸಿವೆ.
Seer of Jangama Math Sri Rudramuni Swamiji said that there is shrine belonging to their math on the land of Malali mosque. Speaking to reporters on Thursday, swamiji said, “It has come to light in Tambula Prashne that there was Shivashakti shrine and Guru Math at Malali. There are records to prove that the Guru Math which was on the mosque land was branch of Gurpur Math.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
14-11-25 11:16 am
Mangalore Correspondent
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm