ಬ್ರೇಕಿಂಗ್ ನ್ಯೂಸ್
16-06-21 10:35 am Shreeraksha, BoldSky Kannada ಡಾಕ್ಟರ್ಸ್ ನೋಟ್
ಮಳೆಗಾಲ ಭರದಿಂದಲೇ ಶುರುವಾಗಿದೆ. ಜೋರಾಗಿ ಸುರಿಯುವ ಮಳೆ ಖುಷಿ, ಸಂತೋಷವನ್ನ ತರುವುದರ ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಆಹ್ವಾನ ಮಾಡುವುದು. ಕೊರೊನಾದಂತಹ ಸಾಂಕ್ರಾಮಿಕದ ನಡುವೆ ಈ ಮಳೆಗಾಲದ ರೋಗಗಳು ನಮ್ಮನ್ನ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದ್ದರಿಂದ ಇಂತಹ ರೋಗಗಳಿಂದ ಮಳೆಗಾಲದಲ್ಲಿ ನಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ನಾವು ಜಾಗರೂಕರಾಗಿಬೇಕಾದ ಕೆಲವು ಮಾನ್ಸೂನ್ ಕಾಯಿಲೆಗಳ ಪಟ್ಟಿ ಇಲ್ಲಿದೆ.
ಸೊಳ್ಳೆಯಿಂದ ಹರಡುವ ರೋಗಗಳು:
ಮಾನ್ಸೂನ್ ಅಥವಾ ಮಳೆಗಾಲ ಸೊಳ್ಳೆಗಳ ಸಂತಾನೋತ್ಪತ್ತಿ ಕಾಲ. ಆದ್ದರಿಂದ ಈ ಕಾಲದಲ್ಲಿ ಹಲವಾರು ರೋಗಗಳಿಗೆ ಕಾರಣವಾಗಬಹುದು. ಜಾಗತಿಕವಾಗಿ ಡೆಂಗ್ಯೂ ಶೇಕಡಾ 34 ಮತ್ತು ಮಲೇರಿಯಾ ಪ್ರಕರಣಗಳಲ್ಲಿ 11 ಪ್ರತಿಶತ ಭಾರತದಿಂದ ದಾಖಲಾಗುತ್ತಿದೆ. ಮಲೇರಿಯಾ: ಮಲೇರಿಯಾವು ಪ್ಲಾಸ್ಮೋಡಿಯಮ್ ಎಂಬ ಏಕಕೋಶೀಯ ಪರಾವಲಂಬಿಯಿಂದ ಬರುವುದು. ಇದು ಮಳೆಗಾಲದಲ್ಲಿ ಕಂಡುಬರುವ ಆರೋಗ್ಯದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ನೀರಿನ ಕಾಲುವೆಗಳು ಮತ್ತು ತೊರೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಿಂದ ಉಂಟಾಗುತ್ತಿದ್ದು, ಹಲವಾರು ದಿನಗಳವರೆಗೆ ಜ್ವರ ಬರುತ್ತದೆ.
ಡೆಂಗ್ಯೂ:
ಡೆಂಗ್ಯೂವು ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುತ್ತದೆ. ಇದು ನಿಂತ ಅಥವಾ ಶೇಖರಣೆಯಾದ ನೀರಿನಲ್ಲಿ (ಬಕೆಟ್, ಡ್ರಮ್ಸ್, ಬಾವಿಗಳು, ಮರದ ರಂಧ್ರಗಳು ಮತ್ತು ಹೂವಿನ ಮಡಿಕೆಗಳು) ಸಂತಾನೋತ್ಪತ್ತಿ ಮಾಡುತ್ತದೆ. ಕಚ್ಚಿದ ನಾಲ್ಕರಿಂದ ಏಳು ದಿನಗಳ ನಂತರ ಡೆಂಗ್ಯೂ ಬರಲಿದ್ದು, ಮೊದಲ ಲಕ್ಷಣ ಜ್ವರ ಮತ್ತು ಆಯಾಸವನ್ನು ಒಳಗೊಂಡಿದೆ.
ಚಿಕುನ್ ಗುನ್ಯಾ:
ಚಿಕುನ್ ಗುನ್ಯಾವು ಈಡಿಸ್ ಅಲ್ಬೋಪಿಕ್ಟಸ್ ಸೊಳ್ಳೆಯಿಂದ ಉಂಟಾಗುವುದಲ್ಲದೇ, ಇದು ಮಾರಣಾಂತಿಕವಲ್ಲದ ವೈರಲ್ ಕಾಯಿಲೆಯಾಗಿದೆ. ಈ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಈ ಸೊಳ್ಳೆಗಳು ರಾತ್ರಿಯ ಸಮಯದಲ್ಲಿ ಮಾತ್ರವಲ್ಲದೆ ಹಗಲಿನಲ್ಲಿಯೂ ನಿಮ್ಮನ್ನು ಕಚ್ಚುತ್ತವೆ.
ಸೊಳ್ಳೆಯಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:
ನೀರಿನಿಂದ ಹರಡುವ ರೋಗಗಳು ಹೀಗಿವೆ:
ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳು ಮತ್ತೊಂದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಈ ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ ಏಕೆಂದರೆ ಅವರ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ನೀರಿನಿಂದ ಹರಡುವ ಕೆಲವು ಸಾಮಾನ್ಯ ರೋಗಗಳು ಹೀಗಿವೆ:
ಟೈಫಾಯಿಡ್:
ಎಸ್. ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಟೈಫಾಯಿಡ್ ನೀರಿನಿಂದ ಹರಡುವ ರೋಗವಾಗಿದ್ದು, ಇದು ನೈರ್ಮಲ್ಯದ ಕೊರತೆಯಿಂದ ಉಂಟಾಗುವುದು. ತೆರೆದ ಅಥವಾ ಹಾಳಾದ ಆಹಾರವನ್ನು ಸೇವಿಸುವುದು ಅಥವಾ ಕಲುಷಿತ ನೀರನ್ನು ಕುಡಿಯುವುದು ಟೈಫಾಯಿಡ್ ನ ಎರಡು ಪ್ರಮುಖ ಕಾರಣಗಳಾಗಿವೆ. ತಲೆನೋವು, ಕೀಲು ನೋವು, ಜ್ವರ ಮತ್ತು ಗಂಟಲು ನೋವು ಟೈಫಾಯಿಡ್ ನ ಲಕ್ಷಣಗಳಾಗಿವೆ.
ಕಾಲರಾ:
ಕಳಪೆ ನೈರ್ಮಲ್ಯ ಮತ್ತು ಕಲುಷಿತ ಆಹಾರದ ಕಾರಣದಿಂದಾಗಿ, ಕಾಲರಾವು ಉಂಟಾಗಬಹುದು.
ಕಾಮಾಲೆ( ಹಳದಿ ಕಾಯಿಲೆ):
ಕಳಪೆ ನೈರ್ಮಲ್ಯ, ಕಲುಷಿತ ನೀರು ಮತ್ತು ಆಹಾರದಿಂದ ಕಾಮಾಲೆ ಉಂಟಾಗುತ್ತದೆ. ಇದು ಆಯಾಸ, ಹಳದಿ ಮೂತ್ರ, ವಾಂತಿ ಮತ್ತು ಹಳದಿ ಕಣ್ಣುಗಳಂತಹ ಲಕ್ಷಣಗಳನ್ನು ಹೊಂದಿರುತ್ತದೆ.
ಹೆಪಟೈಟಿಸ್ ಎ: ಇದು ವೈರಲ್ ಸೋಂಕು, ಇದು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದು ನಿಮ್ಮ ಯಕೃತ್ತನ್ನು ಹಾನಿಗೊಳಿವುದಲ್ಲದೇ, ಉಬ್ಬುವಿಕೆಗೆ ಕಾರಣವಾಗುವುದು. ಹೆಪಟೈಟಿಸ್ ನ ಲಕ್ಷಣಗಳು ಆಯಾಸ, ಜ್ವರ, ಹಳದಿ ಕಣ್ಣುಗಳು, ಹೊಟ್ಟೆಯ ಮೃದುತ್ವ, ಗಾಢ ಬಣ್ಣದ ಮೂತ್ರ ಮತ್ತು ಹಸಿವಿಲ್ಲದಿರುವುದು.
ನೀರಿನಿಂದ ಹರಡುವ ರೋಗಗಳಿಂದ ಸುರಕ್ಷಿತವಾಗಿರಲು ಸಲಹೆಗಳು:
(Kannada Copy of Boldsky Kannada)
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm