ಬ್ರೇಕಿಂಗ್ ನ್ಯೂಸ್
01-06-21 12:00 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಬಂದಾಗ ಒಂದು ಸಂಕಟ ಎದುರಾದರೆ ಅದರಿಂದ ಗುಣಮುಖರಾಗಿ ನಿಟ್ಟುಸಿರು ಬಿಡುವಾಗ ಬೇರೆ-ಬೇರೆ ಕಾಯಿಲೆಗಳು ಎದುರಾಗುತ್ತಿರುವುದರಿಂದ ಜನರಲ್ಲಿ ಭಯ, ತೊಂದರೆ ಕೊರೊನಾದಿಂದ ಗುಣಮುಖರಾದ ಮೇಲೂ ಮುಂದುವರೆಯುತ್ತಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ರೀತಿಯ ಸಮಸ್ಯೆ ಕಂಡು ಬಂದಿತ್ತು. ಇದೀಗ ಕೋವಿಡ್ 19 ಬಳಿಕ ಹೃದಯಾಘಾತ, ಪಾರ್ಶ್ವವಾಯು ಉಂಟಾಗುವ ಅಪಾಯವು ಇದೆ ಎಂದು ತಿಳಿದು ಬಂದಿದೆ.

ಗುಣಮುಖರಾದವರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ
ಮುಂಬಯಿಯ ಕಮೋಥೆ ನಿವಾಸಿ 36 ವರ್ಷದ ಚಂದ್ರ ಶೇಖರ ರೆಡ್ಡಿಗೆ ಮೊದಲಿಗೆ ಕೊರೊನಾ ಬಂತು, ರೋಗ ಲಕ್ಷಣಗಳೇನು ತೀವ್ರವಾಗಿರಲಿಲ್ಲ, ಕೋವಿಡ್ 19ನಿಂದ ಬೇಗನೆ ಗುಣಮುಖರಾದರು. ಅದಾದ ಬಳಿಕ ಅವರಿಗೆ ಸ್ಟ್ರೋಕ್ ಉಂಟಾಗಿ ಈಗ ಕಾಲುಗಳು ಸ್ವಾದೀನ ಕಳೆದುಕೊಂಡಿದೆ. ಅವರು ಕೂರಲು ತಿಂಗಳು ಹಿಡಿಯಿತು, ಸಂಪೂರ್ಣ ಗುಣಮುಖರಾಗಲು 6 ತಿಂಗಳು ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವೈದ್ಯರು ಇಂಥ ಪ್ರಕರಣಗಳು ಕಂಡು ಬರುತ್ತಿರುವುದಾಗಿ ಹೇಳುತ್ತಿದ್ದಾರೆ. ಕೆಲವರು ಕೋವಿಡ್ 19ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಹೋಗಿ 2 ತಿಂಗಳು ಆದ ಬಳಿಕ ಹೃದಯಾಘಾತ, ಪಾರ್ಶ್ವವಾಯು ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ.

ವೈದ್ಯರ ಅಭಿಪ್ರಾಯವೇನು?
ರೆಡ್ಡಿಯವರಿಗೆ ಚಿಕಿತ್ಸೆ ನೀಡಿದ ಮೆದುಳು ಹಾಗೂ ಬೆನ್ನು ಮೂಳೆಯ ಸರ್ಜನ್ ಆಗಿರುವ ಡಾ. ವಿಶ್ವನಾಥ್ ಅಯ್ಯರ್ ಈ ಏಪ್ರಿಲ್ ತಿಂಗಳಿನಲ್ಲಿ ಇಂಥ 4 ಕೇಸ್ಗಳು ಬಂದಿದ್ದೆವು ಅಂದಿದ್ದಾರೆ. ರೋಗಿಯಲ್ಲಿ ಉರಿಯೂತ ಉಂಟಾಗಿ ರಕ್ತ ಹೆಪ್ಪುಗಟ್ಟುವುದರಿಂದ ಸ್ಟ್ರೋಕ್ ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
KEM ಆಸ್ಪತ್ರೆಯ ನ್ಯೂರೋಲಾಜಿಸ್ಟ್ ಡಾ. ನಿತಿನ್ ಡಾಂಗೆ ಕೋವಿಡ್ 19 ಗುಣಮುಖರಾದವರಲ್ಲಿ 20ಕ್ಕೂ ಹೆಚ್ಚು ಜನರು ಪಾರ್ಶ್ವವಾಯು, ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ತುಂಬಾ ಚಿಕ್ಕ ಪ್ರಾಯದವರಲ್ಲೂ ಈ ರೀತಿಯ ಸಮಸ್ಯೆ ಕಂಡು ಬರುತ್ತಿದೆ.
ಥಾಣೆಯ ಜ್ಯುಪಿಟರ್ ಆಸ್ಪತ್ರೆಯ ಡಾ. ಆಶಿಷ್ ನಬರ್ ಅವರು ತಮ್ಮ ಕುಟುಂಬದಲ್ಲಿ ಈ ರೀತಿ ಒಬ್ಬರನ್ನು ಕಳೆದುಕೊಂಡಿದ್ದಾರೆ. ಅವರ 50 ವರ್ಷ ಪ್ರಾಯದ ಸಂಬಂಧಿ ಕೋವಿಡ್ 19 ನಿಂದ ಗುಣಮುಖರಾಗಿ 5-6 ದಿನಗಳ ಬಳಿಕ ಪಾರ್ಶ್ವವಾಯು ಉಂಟಾಯಿತು. ಅವರ ಅಪಧಮಿನಿಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಎಂಆರ್ಐ ಸ್ಕ್ಯಾನಿಂಗ್ನಲ್ಲಿ ತಿಳಿದು ಬಂತು. ಸರ್ಜರಿ ಮಾಡಲಾಯಿತು, ಆದರೆ ಅವರನ್ನು ವೆಂಟಿಲೇಟರ್ನಲ್ಲಿ ಹಾಕಬೇಕಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಕೋವಿಡ್ 19ನಿದ ಚೇತರಿಸಿ ಬಳಿಕವೂ ಆರೋಗ್ಯ ಜೋಪಾನ
ಕೊರೊನಾದಿಂದ ಗುಣಮುಖರಾದೆವು ಎಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ. ವೈದ್ಯರು ಸೂಚಿಸಿದ ವ್ಯಾಯಾಮ ಮಾಡಿ. ಉಸಿರಾಟದ ವ್ಯಾಯಾಮವನ್ನು ಕನಿಷ್ಠ ಆರು ತಿಂಗಳು ಕಡ್ಡಾಯವಾಗಿ ಮಾಡಿ, ನಂತರವೂ ಮಾಡಿದರೆ ಮತ್ತಷ್ಟು ಒಳ್ಳೆಯದು. ಆರೋಗ್ಯಕರ ಆಹಾರ ಸೇವಿಸಿ, ಮಾನಸಿಕ ಒತ್ತಡ ಕಡಿಮೆ ಮಾಡಿ.
(Kannada Copy of Boldsky Kannada)
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm