ಬ್ರೇಕಿಂಗ್ ನ್ಯೂಸ್
01-06-21 11:12 am Shreeraksha, BoldSky Kannada ಡಾಕ್ಟರ್ಸ್ ನೋಟ್
ಮುಂಗಾರು ಶುರುವಾಗುತ್ತಿರೋ ಈ ಟೈಮಲ್ಲಿ ಮಕ್ಕಳಿಂದ ಹಿಡಿದು ಎಲ್ಲರನ್ನೂ ಜ್ವರ ಕಾಡುವುದು. ಆದರೆ ಸದ್ಯ ಇರುವ ಕೊರೊನಾ ಸನ್ನಿವೇಶದಿಂದ ಸಾಮಾನ್ಯ ಜ್ವರ ಬಂದರೂ, ಹೆದರುವಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸದ ಸಂಗತಿ. ಯಾವುದೇ ಜ್ವರವಿರಲಿ ಇದರಿಂದ ದೇಹದಲ್ಲಿ ದೌರ್ಬಲ್ಯ (ವೀಕ್ ನೆಸ್) ಉಂಟಾಗುತ್ತದೆ, ಜೊತೆಗೆ ತೂಕ ನಷ್ಟ, ತಲೆನೋವು, ಮೊದಲಾದವುಗಳು ನಿಮ್ಮನ್ನು ಬಾಧಿಸುತ್ತವೆ. ಇದಕ್ಕಾಗಿ ಜ್ವರ ಕಡಿಮೆ ಮಾಡುವ ಕೆಲವು ದೇಶೀಯ ವಿಧಾನಗಳನ್ನು ಇಲ್ಲಿ ಹೇಳಿದ್ದೇವೆ. ನೆನಪಿಡಿ, ಇದು ಜ್ವರ ಕಡಿಮೆ ಮಾಡಲು ಸಹಾಯ ಮಾಡಬಹುದು ಆದರೆ ಇದೇ ಮದ್ದಲ್ಲ.
ಸಾಕಷ್ಟು ದ್ರವಗಳನ್ನು ಕುಡಿಯಿರಿ:
ಜ್ವರವು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವುದರಿಂದ ದೇಹವು ಹೆಚ್ಚು ಬೆವರುವಿಕೆಗೆ ಕಾರಣವಾಗಬಹುದು. ಇದು ನಿಮ್ಮ ದೇಹ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಆದ್ದರಿಂದ ಇದನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ದಿನವಿಡೀ ಸಾಕಷ್ಟು ದ್ರವಗಳನ್ನು ಕುಡಿಯಿರಿ. ಪ್ರತಿದಿನ ಕನಿಷ್ಠ 9-12 ಲೋಟ ನೀರು ಕುಡಿಯಿರಿ. ನೀರು ಮಾತ್ರವಲ್ಲ, ಮನೆಯಲ್ಲಿ ಆರೋಗ್ಯಕರ ಹಣ್ಣಿನ ರಸ, ತೆಂಗಿನ ನೀರು, ಸೂಪ್ ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು.

ಅಮೃತಬಳ್ಳಿ:
ಅಮೃತಬಳ್ಳಿ ಪ್ರಸಿದ್ಧ ಆಯುರ್ವೇದ ಮೂಲಿಕೆಯಾಗಿದ್ದು, ಇದನ್ನು ಅನೇಕ ಆರೋಗ್ಯ ಪ್ರಯೋಜನಗಳಿಗೆ ಬಳಸಲಾಗುತ್ತದೆ. ಜ್ವರವು ವೀಕ್ ನೆಸ್ ಗೆ ಕಾರಣವಾಗಬಹುದು ಮತ್ತು ಸೋಂಕಿನ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ. ವ್ಯಕ್ತಿಯ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ, ಅಪಾಯವು ಹೆಚ್ಚಾಗುತ್ತದೆ. ಆದ್ದರಿಂದ, ಅಮೃತಬಳ್ಳಿ ಜ್ವರವನ್ನು ತಡೆಗಟ್ಟಲು ಮತ್ತು ಮನೆಯಲ್ಲಿ ಸುಲಭವಾಗಿ ಚಿಕಿತ್ಸೆ ನೀಡಲು ಅದರ ಕಷಾಯ ಮಾಡಿ ಕುಡಿಯಬಹುದು.

ಬೆಳ್ಳುಳ್ಳಿ:
ಬೆಳ್ಳುಳ್ಳಿ ಬಿಸಿ ಗುಣ ಹೊಂದಿರುವ ಆಯುರ್ವೇದ ಸಸ್ಯವಾಗಿದ್ದು, ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿಯಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಗಳಿವೆ, ಇದು ಜ್ವರ ಸೇರಿದಂತೆ ಅನೇಕ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತುಳಸಿ:
ಜ್ವರ ಬಂದಾಗ ತುಳಸಿ ರಸವನ್ನು ಕುಡಿಯಲು ಪ್ರಯತ್ನಿಸಿ ಅಥವಾ ಅದನ್ನು ನಿಮ್ಮ ಸಾಮಾನ್ಯ ಚಹಾದಲ್ಲಿ ಸೇರಿಸಿ. ಇದು ನಿಮ್ಮ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. ತುಳಸಿ ಚಹಾ ನೀವು ಬೆಳಿಗ್ಗೆ ಸೇವಿಸಬಹುದಾದ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ತುಳಸಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳಿವೆ, ಇದು ನೈಸರ್ಗಿಕವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ರಸವನ್ನು ಹೊರತೆಗೆದು ಅದಕ್ಕೆ ಪುಡಿಮಾಡಿದ ತುಳಸಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ.

ಶುಂಠಿ:
ಶುಂಠಿ ಚಹಾವು ಅದ್ಭುತ ರೋಗನಿರೋಧಕ ವರ್ಧಕವಾಗಿದ್ದು, ಜ್ವರವನ್ನು ಎದುರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಮ್ಮು ಮತ್ತು ಶೀತಗಳಿಂದ ಉಂಟಾಗುವ ಯಾವುದೇ ಅಡಚಣೆಯಿಂದ ನಿಮ್ಮ ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಇದು ಆಯುರ್ವೇದ ಮೂಲಿಕೆಯಾಗಿದ್ದು, ನೆಗಡಿ ಮತ್ತು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸೂಚನೆ: ಸಾಮಾನ್ಯ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಲೇಖನವನ್ನು ಬರೆಯಲಾಗಿದೆ, ಒಬ್ಬ ವ್ಯಕ್ತಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ, ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ ಮತ್ತು ಸರಿಯಾದ ಚಿಕಿತ್ಸೆ ಪಡೆಯಿರಿ.
(Kannada Copy of Boldsky Kannada)
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm