ಬ್ರೇಕಿಂಗ್ ನ್ಯೂಸ್
11-05-21 04:17 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಮನುಕುಲ ಹಿಂದೆಂದೂ ಕಾಣದ ಸಾಂಕ್ರಾಮಿಕವನ್ನು ಎದುರಿಸುತ್ತಿದೆ. ಅದೆಷ್ಟೇ ಜಾಗೃತಿ ವಹಿಸಿದರೂ ಕೊರೋನಾ ವೈರಾಣು ಹೇಗೋ ಮನುಷ್ಯನ ದೇಹ ಹೊಕ್ಕುತ್ತಿದೆ. ಲಾಕ್ ಡೌನ್, ಐಸೋಲೇಷನ್ ನಡುವೆಯೇ ಜೀವನ ಸಾಗುತ್ತಿದ್ದು, ಪ್ರತಿಯೊಬ್ಬರೂ ಆತಂಕದಿಂದ ಬದುಕಬೇಕಾದ ಪರಿಸ್ಥಿತಿ.
ಈ ಒತ್ತಡ ಹಾಗೂ ಆತಂಕ ನವಜಾತ ಶಿಶುಗಳನ್ನು ಹೊಂದಿರುವ ತಾಯಂದಿರಿಗೆ ತುಸು ಹೆಚ್ಚಾಗಿಯೇ ಇದೆ. ಇಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಆ ಪುಟ್ಟ ಕಂದಮ್ಮನ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವುದು ಸವಾಲೇ ಸರಿ. ಆದ್ದರಿಂದ ಈ ಲೇಖನದಲ್ಲಿ ನವಜಾತ ಶಿಶು ಹಾಗೂ ತಾಯಿಯನ್ನು ಕೊರೋನಾದಿಂದ ಹೇಗೆ ದೂರವಿರಿಸುವುದು ಎಂಬುದನ್ನು ಹೇಳಿದ್ದೇವೆ.
ತಾಯಂದಿರು ತಮ್ಮ ನವಜಾತ ಶಿಶುಗಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ನವಜಾತ ಶಿಶುವನ್ನು ಸಂಪೂರ್ಣವಾಗಿ ಸೋಂಕುರಹಿತವಾಗಿರುವ ಒಂದು ಕೋಣೆಯಲ್ಲಿ ಇರಿಸಿ
2. ತಾಯಿ ಮತ್ತು ಮಗು ಮನೆಯೊಳಗೆ ಇರಬೇಕು ಮತ್ತು ಸೋಂಕಿನ ಲಕ್ಷಣವಿರುವ ಯಾವ ವ್ಯಕ್ತಿ ಹತ್ತಿರ ಸುಳಿಯದಂತೆ ನೋಡಿಕೊಳ್ಳಿ.
3. ಒಂದು ವೇಳೆ ಮಗುವಿಗೆ ಒಡಹುಟ್ಟಿದವರಿದ್ದರೆ, ಅವರನ್ನು ನಿಮ್ಮ ಮಗುವಿನಿಂದ ದೂರವಿರಿಸಿ, ಏಕೆಂದರೆ ಅವರು ಸೋಂಕು ಹೊತ್ತು ಬರಬಹುದು.
4. 5 ವರ್ಷಕ್ಕಿಂತ ಸಣ್ಣ ಮಕ್ಕಳು ಮಾಸ್ಕ ಧರಿಸುವ ಅಗತ್ಯವಿಲ್ಲ, ಆದರೆ ಮಗುವಿಗೆ ಹಾಲು ಉಣಿಸುವಾಗ ತಾಯಿಯಾದವಳು ಮಾಸ್ಕ್ ಧರಿಸಿ.
5. ತಾಯಿ ಸರಿಯಾದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಆಹಾರ ನೀಡುವ ಮೊದಲು ನಿಯಮಿತವಾಗಿ ತನ್ನ ಕೈಗಳನ್ನು ಸೋಪ್ ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ ಬಳಸಬೇಕು.
6. ಹೊಸ ತಾಯಂದಿರು ಕೊರೋನಾ ಸೋಂಕಿಗೆ ಒಳಗಾಗುವ ಬಗ್ಗೆ ಚಿಂತಿಸಬಾರದು. ಈ ಆತಂಕ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತಾಯಿಯ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಸರಳ ಮಾರ್ಗಗಳು: ಮಹಿಳೆಯರು ದೈನಂದಿನ ಜೀವನದಲ್ಲಿ ಸಾಕಷ್ಟು ಒತ್ತಡಗಳನ್ನು ಹೊಂದಿರುತ್ತಾರೆ. ತನ್ನ ಮಕ್ಕಳು, ಕುಟುಂಬ, ಮನೆ ಹೀಗೆ ನಾನಾ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಮಗುವಾದ ನಂತರ ಅವರ ಸಾಮಾನ್ಯ ಜೀವನಕ್ಕೆ ಒಮ್ಮೆಲೆ ಮರಳುವಾಗ ಇದಕ್ಕಿಂತ ವಿಭಿನ್ನವಾದ ಒತ್ತಡ ಅವರನ್ನು ಸುತ್ತಿಕೊಳ್ಳುತ್ತದೆ. ಆಗ ತಮ್ಮನ್ನು ತಾವೇ ನೋಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಬಹುದು:
1.ಕನಿಷ್ಠ 7-8 ಗಂಟೆಗಳ ನಿರಂತರ ನಿದ್ರೆಯನ್ನು ಮಾಡಿ.
2. ಧ್ಯಾನ ಮತ್ತು ಯೋಗ ಅಥವಾ ಚುರುಕಾದ ನಡಿಗೆ ಹೀಗೆ ನಿಮಗಿಷ್ಟವಾದ ದೈಹಿಕ ವ್ಯಾಯಾಮವನ್ನು ಪ್ರತಿನಿತ್ಯ ಸುಮಾರು 30 ನಿಮಿಷಗಳು ಮಾಡಿ.
3. ಕಡಿಮೆ ಕೊಬ್ಬು ಮತ್ತು ಕಡಿಮೆ ಉಪ್ಪಿರುವ ಆಹಾರವನ್ನು ಒಳಗೊಂಡಿರುವ ಹೃದಯಕ್ಕೆ ಆರೋಗ್ಯಕರವಾದ ಜೀವನಶೈಲಿ ಅನುಸರಿಸಿ.
4. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಸೇರಿಸಿ.
5. ಹೈಡ್ರೀಕರಿಸಿದಂತೆ ಇರಿ, ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ.
6. ಪೌಷ್ಟಿಕಾಂಶ ಭರಿತ ಆಹಾರವನ್ನು ಸೇವಿಸಿ.
7. ಆನ್ಲೈನ್ ಅಥವಾ ಫೋನ್ ಮೂಲಕ ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
ಮಹಿಳೆಯರು ತಮ್ಮ ಹೃದಯವನ್ನು ನೋಡಿಕೊಳ್ಳಲು ಮಾಡಬಹುದಾದ ಹಲವಾರು ಚಟುವಟಿಕೆಗಳನ್ನು ಕೆಳಗೆ ನೀಡಲಾಗಿದೆ:
1. ನಿಮ್ಮ ತೂಕ ಮತ್ತು ರಕ್ತದೊತ್ತಡವನ್ನು ಪರಿಶೀಲಿಸಿ: ಪ್ರತಿಯೊಬ್ಬರು ತಮ್ಮ ದೇಹದ ತೂಕ, ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿದಿರಬೇಕು, ಏಕೆಂದರೆ ಇವುಗಳು ಹೃದೃರೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ. ಈ ಮಟ್ಟಗಳು ಏರಿಳಿತವಾಗಿದ್ದರೆ, ಅವುಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
2. ಹೃದಯ ಸ್ನೇಹಿ ಆಹಾರವನ್ನು ಸೇವಿಸಿ: ಹೃದಯಕ್ಕೆ ಒಳ್ಳೆಯದಾದ ಕಡಿಮೆ ಕೊಬ್ಬಿನಂಶ, ತರಕಾರಿಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು ಮುಖ್ಯ. ಸ್ಯಾಚುರೇಟೆಡ್ ಕೊಬ್ಬುಗಳು, ಸಕ್ಕರೆ ವಸ್ತುಗಳು ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ.
3. ಹೃದ್ರೋಗದ ಸೂಚನೆಯನ್ನು ಅರ್ಥಮಾಡಿಕೊಳ್ಳಿ:
ಎದೆ ನೋವು ಅಥವಾ ಭಾರ, ಉಸಿರಾಟದ ತೊಂದರೆ, ಬೆವರು, ತಲೆತಿರುಗುವಿಕೆ, ವಾಕರಿಕೆ, ಭುಜ ಮತ್ತು ಬೆನ್ನುನೋವಿನಂತಹ ಹೃದಯ ಸಂಬಂಧಿ ಅಪಾಯಗಳ ಸೂಚನೆಗಳ ಬಗ್ಗೆ ತಿಳಿದಿರಬೇಕು. ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಇಸಿಜಿಯನ್ನು ಮಾಡಲು ಸೂಚಿಸಲಾಗಿದೆ.
(Kannada Copy of Boldsky Kannada)
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm