'ಕೆಜಿಎಫ್ 2' ಅಬ್ಬರಕ್ಕೆ ತಮಿಳುನಾಡು ಬಾಕ್ಸ್ ಆಫೀಸ್ ಥಂಡಾ; ಕೇರಳದಲ್ಲಿ 'ಬೀಸ್ಟ್‌'ಗೆ ಹಿನ್ನಡೆ!

15-04-22 03:04 pm       Source: Vijayakarnataka   ಸಿನಿಮಾ

'ರಾಕಿಂಗ್ ಸ್ಟಾರ್' ಯಶ್, ಸಂಜಯ್ ದತ್‌, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್‌, ಪ್ರಕಾಶ್ ರಾಜ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಪ್ರಮಾಣದ ಕಲೆಕ್ಷನ್‌ ಮಾಡುತ್ತಿದೆ. ವಿಜಯ್ ಅವರ ಬೀಸ್ಟ್ ಸಿನಿಮಾ ಇದ್ದಾಗಿಯೂ 'ಕೆಜಿಎಫ್ 2' ಅಬ್ಬರವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾದರೆ, ತಮಿಳುನಾಡಿನಲ್ಲಿ 'ಕೆಜಿಎಫ್ 2' ಹವಾ ಹೇಗಿದೆ? ಕೇರಳದಲ್ಲಿ ಎಷ್ಟಾಯ್ತು ಕಲೆಕ್ಷನ್? ಇಲ್ಲಿದೆ ಮಾಹಿತಿ...

'ರಾಕಿಂಗ್ ಸ್ಟಾರ್' ಯಶ್‌ ಅಭಿನಯದ 'ಕೆಜಿಎಫ್‌: ಚಾಪ್ಟರ್ 2' ಸಿನಿಮಾದ ಅಬ್ಬರ ಜೋರಾಗಿದೆ. ದೇಶಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ 'ಕೆಜಿಎಫ್‌: ಚಾಪ್ಟರ್ 2' ಸಿನಿಮಾವು ಹಳೆಯ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಹೊರರಾಜ್ಯಗಳಲ್ಲಿ ಹೆಚ್ಚು ಪ್ರದರ್ಶನ ಕಾಣುತ್ತಿರಲಿಲ್ಲ. ಆದರೆ 'ಕೆಜಿಎಫ್ 2' ಅದನ್ನು ಸುಳ್ಳು ಮಾಡಿದೆ. ಡಬ್ಬಿಂಗ್ ವರ್ಷನ್‌ಗಳ ಜೊತೆಗೆ ಕೆಜಿಎಫ್ 2 ಕನ್ನಡ ವರ್ಷನ್ ಕೂಡ ಹೊರರಾಜ್ಯದಲ್ಲಿ ಸಖತ್ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ 2 ತೆರೆಗೂ ಬರುವ ಒಂದು ದಿನ ಮುನ್ನವೇ ತೆರೆಕಂಡಿದ್ದ 'ಬೀಸ್ಟ್' ಸಿನಿಮಾ ಕೂಡ ರಾಕಿ ಭಾಯ್ ಹವಾದ ಎದುರು ತಣ್ಣಗಾಗಿದೆ!

ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾವು ತಮಿಳುನಾಡಿನಲ್ಲಿ ಅಬ್ಬರದ ಓಪನಿಂಗ್ ಪಡೆದುಕೊಂಡಿದೆ. ಅಲ್ಲಿ ಬುಧವಾರವೇ (ಏ.13) 'ಬೀಸ್ಟ್' ಸಿನಿಮಾ ತೆರೆಕಂಡಿತ್ತು. ಹೀಗಿದ್ದರೂ ಕೂಡ 'ಕೆಜಿಎಫ್ 2' ಕಾಲಿವುಡ್ ಬಾಕ್ಸ್ ಫೀಸ್‌ನಲ್ಲಿ ಹವಾ ಎಬ್ಬಿಸಿದೆ. ಚೆನ್ನೈ ನಗರವೊಂದರಲ್ಲೇ ಮೊದಲ ದಿನ 67 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಅಲ್ಲದೇ ಶೋಗಳ ಸಂಖ್ಯೆ ಕೂಡ ಮೊದಲ ದಿನಕ್ಕಿಂತ ಎರಡನೇ ದಿನ ಜಾಸ್ತಿಯಾಗುತ್ತಿವೆ. ಇನ್ನು, 'ಬೀಸ್ಟ್‌' ಸಿನಿಮಾವು 1.61 ಕೋಟಿ ರೂ. ಗಳಿಕೆ ಮಾಡಿದೆ.

K.G.F. Chapter 2 (2022) - Movie | Reviews, Cast & Release Date in bengaluru  - BookMyShow

KGF Chapter 2 Vs Jersey Vs Beast: Does A 3 Way Box-Office Clash Make Sense?

ಒಂದೇ ಮಾಲ್‌ನಲ್ಲಿ 27 ಶೋ

KGF: Chapter 2' release pushed to April 2022
ಚೆನ್ನೈ ಮಾಲ್‌ವೊಂದರಲ್ಲಿ 'ಕೆಜಿಎಫ್: ಚಾಪ್ಟರ್ 2' ಸಿನಿಮಾವು 27 ಶೋ ನೀಡಲಾಗಿದೆ. ಎರಡನೇ ದಿನವಾದರೂ, ಮುಂಜಾನೆ 3 ಗಂಟೆಗೆ ಶೋ ಆರಂಭವಾಗಿರುವುದು ಅಲ್ಲಿರುವ ಕ್ರೇಜ್‌ಗೆ ಸಾಕ್ಷಿಯಾಗಿದೆ. 27ಕ್ಕೆ 27 ಶೋಗಳು ಕೂಡ ಹೌಸ್‌ಫುಲ್ ಆಗಿದೆ. ಅಚ್ಚರಿ ಎಂದರೆ, ಇದೇ ಮಾಲ್‌ನಲ್ಲಿ ವಿಜಯ್‌ ನಟನೆಯ 'ಬೀಸ್ಟ್‌'ಗೆ ಕೇವಲ 16 ಶೋ ನೀಡಲಾಗಿದೆ ಮತ್ತು ಶೋಗಳು 6 ಗಂಟೆಗೆ ಆರಂಭವಾಗಿವೆ. ಟಿಕೆಟ್‌ಗಳು ಕೂಡ ಪೂರ್ಣಪ್ರಮಾಣದಲ್ಲಿ ಸೇಲ್‌ ಆಗಿಲ್ಲ.

ಕೇರಳದಲ್ಲಿ 'ಬೀಸ್ಟ್' ಬೀಟ್ ಮಾಡಿದ 'ಕೆಜಿಎಫ್'
ಇನ್ನು, ಯಶ್ ಅಭಿನಯದ 'ಕೆಜಿಎಫ್‌: ಚಾಪ್ಟರ್ 2' ಸಿನಿಮಾವು ಮೊದಲ ದಿನ ಬರೋಬ್ಬರಿ 7.10 ಕೋಟಿ ರೂ. ಗಳಿಸಿದೆ. ಆದರೆ 'ಬೀಸ್ಟ್' ಸಿನಿಮಾ 6.60 ಕೋಟಿ ರೂ. ಗಳಿಕೆ ಆಗಿದೆ. ಡಬ್ಬಿಂಗ್ ಸಿನಿಮಾವೊಂದು ತಮಿಳುನಾಡು, ಕೇರಳ ಬಾಕ್ಸ್ ಆಫೀಸ್‌ನಲ್ಲಿ ಈ ಮಟ್ಟದ ಗಳಿಕೆ ಮಾಡುತ್ತಿರುವುದು ಇದೇ ಮೊದಲಾಗಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ 'ಕೆಜಿಎಫ್‌ 2'ಗೆ ಜೈಕಾರ ಹಾಕುತ್ತಿದ್ದಾರೆ. ತಮಿಳುನಾಡಿನಲ್ಲಿ 'ಬೀಸ್ಟ್‌' ಬದಲು 'ಕೆಜಿಎಫ್ 2' ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲ ದಿನ ತಮಿಳುನಾಡಿನಲ್ಲಿ ಸುಮಾರು 350 ಸ್ಕ್ರೀನ್‌ ಪಡೆದುಕೊಂಡಿತ್ತು. ಇದೀಗ ಆ ಸಂಖ್ಯೆ ಜಾಸ್ತಿ ಆಗುತ್ತಿದೆ. ಎರಡನೇ ಮತ್ತು ಮೂರನೇ ದಿನದಲ್ಲೂ 'ಕೆಜಿಎಫ್ 2' ಮುಂಜಾನೆಯೇ ಶೋ ಸಿಗುತ್ತಿರುವುದು ಈ ಸಿನಿಮಾಗೆ ಇರುವ ಕ್ರೇಜ್ ಎಂಥದ್ದು ಎಂಬುದನ್ನು ತೋರಿಸುತ್ತಿದೆ

Yash And Prashanth Neel On KGF Chapter 2 And The Crafting Of Anti-Gravity  Cinema | Film Companion

ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಸಿನಿಮಾವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಭುವನ್ ಗೌಡ ಛಾಯಾಗ್ರಹಣಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಲಾ ನಿರ್ದೇಶಕ ಶಿವಕುಮಾರ್ ಕೆಲಸಕ್ಕೆ ಬಹುಪರಾಕ್ ಹೇಳುತ್ತಿದ್ದಾರೆ. ಸಂಜಯ್ ದತ್, ರವೀನಾ ಟಂಡನ್‌, ಶ್ರೀನಿಧಿ ಶೆಟ್ಟಿ, ರಾವ್ ರಮೇಶ್, ಪ್ರಕಾಶ್ ರೈ, ಈಶ್ವರಿ ರಾವ್ ಮುಂತಾದವರು ನಟಿಸಿದ್ದಾರೆ.

Kgf Chapter 2 Vs Beast Collection Yashs Movie Gets Extra Shows In Tamil Nadu.