Jada Pinkett Smith News Update Actor Actress Who Are Suffering From Alopecia.
">ಬ್ರೇಕಿಂಗ್ ನ್ಯೂಸ್
04-04-22 04:32 pm Source: Vijayakarnataka ಸಿನಿಮಾ
ಆಸ್ಕರ್ 2022ರಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಮತ್ತು ಕಲಾವಿದರಿಗಿಂತ ಅಲ್ಲಿ ನಡೆದ ಕಪಾಳಮೋಕ್ಷ ಪ್ರಕರಣವೇ ಜಗತ್ತಿನಾದ್ಯಂತ ಹೆಚ್ಚು ಸುದ್ದಿಯಾಗಿದೆ. ಈ ಮೂಲಕ ನಟಿ ಜಡಾ ಪಿಂಕೆಟ್ ಸ್ಮಿತ್ಗೆ ಅಲೊಪೇಶಿಯಾ ಎಂಬ ಅಪರೂಪದ ಕಾಯಿಲೆ ಇರುವ ಬಗ್ಗೆ ತಿಳಿದು ಬಂದಿದೆ. ಯಾವುದೇ ವ್ಯಕ್ತಿಯ ದೇಹದ ರೋಗ ನಿರೋಧಕ ವ್ಯವಸ್ಥೆಯು ಆ ವ್ಯಕ್ತಿಯ ಕೂದಲುಗಳ ಮೇಲೆ ದಾಳಿ ಮಾಡುವುದೇ ಅಲೋಪೇಶಿಯಾ ಕಾಯಿಲೆಯಾಗಿದೆ. ಇದರಿಂದ ವ್ಯಕ್ತಿಯ ಕೂದಲು ಉದುರುತ್ತವೆ.
ಜಡಾ ಪಿಂಕೆಟ್ಗೆ ಕೂಡ ಇದೇ ರೀತಿಯಾಗಿದ್ದು ಈ ಬಗ್ಗೆ ಅವರು 2018ರಲ್ಲೇ ಹೇಳಿಕೊಂಡಿದ್ದರು. ‘ಈ ಕಾಯಿಲೆಯು ಆರಂಭದಲ್ಲಿ ಭಯಾನಕವಾಗಿತ್ತು’ ಎಂದು ಹೇಳಿಕೊಂಡಿದ್ದ ಅವರು ಆಮೇಲೆ ಶಾರ್ಟ್ ಕೂದಲಿನಲ್ಲಿ ಕಾಣಿಸಿಕೊಂಡಿದ್ದರು. ಜನರು ಅವರಿಗೆ ಕಾನ್ಸರ್ನಿಂದಾಗಿ ಕೂದಲು ಉದುರುತ್ತಿದೆ ಎಂದು ಹೇಳುತ್ತಿದ್ದರು. ಅದಕ್ಕೂ ಸ್ಪಷ್ಟನೆ ನೀಡಿದ್ದ ಪಿಂಕೆಟ್ ನಂತರ ತಲೆಯನ್ನು ಬೋಳು ಮಾಡಿಸಿಕೊಂಡಿರುವ ವಿಡಿಯೊ ಶೇರ್ ಮಾಡಿ, ‘ನನ್ನ ಈ ಪರಿಸ್ಥಿತಿಗೆ ನನಗೆ ನಗಲಷ್ಟೇ ಸಾಧ್ಯವಾಗುತ್ತಿದೆ’ ಎಂದು ಬರೆದುಕೊಂಡಿದ್ದರು. ಈಗ ಅವರ ಈ ಕಾಯಿಲೆಯ ಬಗ್ಗೆ ಜನರಿಗೆ ಕುತೂಹಲ ಮನೆಮಾಡಿದ್ದು, ಕಳೆದೆರಡು ದಿನಗಳಿಂದ ಬಹುತೇಕ ಜನರು ಅಲೊಪೇಶಿಯಾ ಕಾಯಿಲೆಯ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಿದ್ದಾರಂತೆ. ಪಿಂಕೆಟ್ ಮಾತ್ರವಲ್ಲದೆ, ಹಾಲಿವುಡ್ನ ಇನ್ನೂ ಕೆಲವು ನಟಿಯರು ಅಲೊಪೇಶಿಯಾದಿಂದ ಬಳಲುತ್ತಿದ್ದಾರೆ. ಅವರ ವಿವರ ಇಲ್ಲಿದೆ.
ವಯೊಲಾ ಡೇವಿಸ್: ಅಮೆರಿಕನ್ ನಟಿ ವಯೊಲಾ ಡೇವಿಸ್ಗೆ 28ನೇ ವಯಸ್ಸಿನಲ್ಲಿಯೇ ಅಲೊಪೇಶಿಯಾ ಕಾಯಿಲೆ ಕಾಡಿತ್ತಂತೆ. ಈ ಬಗ್ಗೆ ಹೇಳಿಕೊಂಡಿದ್ದ ಅವರು, ‘ಅಧಿಕ ಮಾನಸಿಕ ಒತ್ತಡದಿಂದಾಗಿ ನನಗೆ ಈ ಸಮಸ್ಯೆ ಕಾಣಿಸಿಕೊಂಡಿತ್ತು’ ಎಂದಿದ್ದಾರೆ. ಬೋಳು ತಲೆಯನ್ನು ಮರೆಮಾಚಲು ಅವರು ವಿಗ್ಗಳನ್ನು ಧರಿಸಲು ಆರಂಭಿಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಈ ಸಮಸ್ಯೆ ತಲೆದೋರಿದ ಕಾರಣ ಅವರು ಅದನ್ನು ಒಪ್ಪಿಕೊಂಡೇ ವೃತ್ತಿಜೀವನದಲ್ಲಿಮುಂದುವರಿದರು.
ಕ್ರಿಸ್ಟಿನ್ ಡೇವಿಸ್
ನಟಿ ಕ್ರಿಸ್ಟಿನ್ ಡೇವಿಡ್ ಕೂಡ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೊದಲ ಹೆರಿಗೆಯ ನಂತರ ತಮಗೆ ಈ ಸಮಸ್ಯೆ ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ. ಅಲೊಪೇಶಿಯಾದಿಂದ ಕೂದಲು ಉದುರಿ ಬೋಳಾಗಿರುವ ತಲೆಯ ಜಾಗವನ್ನು ಅವರ ಹೇರ್ ಸ್ಟೈಲಿಸ್ಟ್ ಹೇರ್ ಎಕ್ಸ್ಟೆನ್ಷನ್ ಮತ್ತು ಇನ್ನಿತರ ವಿಧಾನಗಳಿಂದ ಮರೆಮಾಚುತ್ತಿದ್ದಾರಂತೆ.
ಕೈರಾ ನೈಟ್ಲೀ
ಬ್ರಿಟಿಷ್ ನಟಿ ಕೈರಾ ನೈಟ್ಲೀ 2010ರಿಂದಲೇ ಅಲೊಪೇಶಿಯಾದಿಂದ ಬಳಲುತ್ತಿದ್ದಾರೆ. ಕೂದಲಿಗೆ ಸ್ಟೈಲಿಂಗ್ ಮಾಡುವಾಗ ಉಂಟಾದ ಹಾನಿಯಿಂದ ಅವರಿಗೆ ಈ ಸಮಸ್ಯೆ ಶುರುವಾಯಿತಂತೆ. ಅಂದಿನಿಂದ ಅವರು ತಲೆಗೆ ವಿಗ್ ಧರಿಸುತ್ತಾರೆ.
ನವೋಮಿ ಕ್ಯಾಂಬೆಲ್
ಸೌಂದರ್ಯಕ್ಕೆ ಹೆಸರಾಗಿರುವ ಸೂಪರ್ ಮಾಡೆಲ್ ನವೋಮಿ ಕ್ಯಾಂಬೆಲ್ಗೂ ಕೂದಲು ಉದುರುವ ಸಮಸ್ಯೆ ಇದೆ. ಹೇರ್ ಎಕ್ಸ್ಟೆನ್ಷನ್ ಮತ್ತು ಹೇರ್ ವೀವ್್ಸ ಮುಂತಾದ ಕೃತಕ ಕೂದಲಿನಿಂದಾಗಿ ನೈಜ ಕೂದಲಿಗೆ ಉಂಟಾದ ಹಾನಿಯಿಂದ ಹೀಗಾಗಿದೆ ಎಂದು ಅವರು ಹೇಳಿದ್ದರು.
ಸೆಲ್ಮಾ ಬ್ಲೇರ್
ಅಮೆರಿಕನ್ ನಟಿ ಸೆಲ್ಮಾ ಬ್ಲೇರ್ಗೆ ಮೊದಲ ಹೆರಿಗೆಯಾದ ನಂತರ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಂಡಿದೆ. ತಮ್ಮ ಕೂದಲು ಜೊಂಪೆಯಾಗಿ ಉದುರುತ್ತಲೇ ಇತ್ತು. ತಲೆ ಅಲ್ಲಲ್ಲಿಬೋಳಾಗಿತ್ತು ಎಂದು ಅವರು ಹೇಳಿಕೊಂಡಿದ್ದರು.
ಟೈರಾ ಬ್ಯಾಂಕ್ಸ್
ಸೂಪರ್ ಮಾಡೆಲ್ ಟೈರಾ ಬ್ಯಾಂಕ್ಸ್ಗೂ ವಿಪರೀತ ಕೂದಲು ಉದುರುವ ಸಮಸ್ಯೆ ಇದೆ. ಅಧಿಕ ಮಾನಸಿಕ ಒತ್ತಡದಿಂದಾಗಿ ಅವರಿಗೆ ಈ ಸಮಸ್ಯೆ ಬಂದಿದೆ.
Jada Pinkett Smith News Update Actor Actress Who Are Suffering From Alopecia.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm