ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ರಿಲೀಸ್‌ ದಿನಾಂಕ ತಿಳಿಸಲಿದ್ದಾರೆ ಭಾರತದ ಸೂಪರ್ ಸ್ಟಾರ್‌ಗಳು

01-04-22 01:33 pm       Source: Vijayakarnataka   ಸಿನಿಮಾ

ನಟ ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್‌ ರೋಣ’ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವ ಟೀಸರ್‌ ಏಪ್ರಿಲ್‌ 2ರಂದು ಬಿಡುಗಡೆಯಾಗುತ್ತಿದೆ.

ನಟ ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ ‘ವಿಕ್ರಾಂತ್‌ ರೋಣ’ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವ ಟೀಸರ್‌ ಏಪ್ರಿಲ್‌ 2ರಂದು ಬಿಡುಗಡೆಯಾಗುತ್ತಿದೆ. ಈ ಟೀಸರ್‌ ಬಿಡುಗಡೆಗೆ ದಕ್ಷಿಣ ಭಾರತದ ಸ್ಟಾರ್‌ ನಟರು ಕೈ ಜೋಡಿಸಿದ್ದಾರೆ. ತಮಿಳಿನಲ್ಲಿ ಸಿಂಬು, ತೆಲುಗಿನಲ್ಲಿ ಮೆಗಾಸ್ಟಾರ್‌ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್‌ಲಾಲ್‌, ಹಿಂದಿಯಲ್ಲಿ ಕಿಚ್ಚ ಸುದೀಪ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ‘ವಿಕ್ರಾಂತ್‌ ರೋಣ’ ಸಿನಿಮಾದ ಟೀಸರ್‌ ಮೂಲಕ ರಿಲೀಸ್‌ ದಿನಾಂಕವನ್ನು ಅನೌನ್ಸ್‌ ಮಾಡಲಿದ್ದಾರೆ. ನಿರ್ದೇಶಕ ಅನೂಪ್‌ ಭಂಡಾರಿ ಮತ್ತು ಕಿಚ್ಚ ಸುದೀಪ್‌ ಕಾಂಬಿನೇಶನ್‌ನಲ್ಲಿ ನಿರ್ಮಾಣವಾಗಿರುವ ಈ 3ಡಿ ಆ್ಯಕ್ಷನ್‌ ಅಡ್ವೆಂಚರ್‌ ಮತ್ತು ಮಿಸ್ಟ್ರಿ ಥ್ರಿಲ್ಲರ್‌ ಸಿನಿಮಾ ಟೀಸರ್‌ ಬಗ್ಗೆ ನಿರ್ದೇಶಕರು ‘ಅನೌನ್ಸಿಂಗ್‌ ದಿ ಅರೈವಲ್‌ ಆಫ್‌ ದಿ ಡೆವಿಲ್‌’ ಎಂದು ಬರೆದುಕೊಂಡಿದ್ದಾರೆ. ‘ವಿಕ್ರಾಂತ್‌ ರೋಣ’ ಕನ್ನಡ, ಹಿಂದಿ, ತೆಲುಗು ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇಂಗ್ಲಿಷ್‌, ಅರೇಬಿಕ್‌, ಜರ್ಮನ್‌, ರಷ್ಯನ್‌ ಮತ್ತು ಮ್ಯಾಂಡರಿನ್‌ ಭಾಷೆಗೆ ಡಬ್‌ ಆಗುತ್ತಿದೆ. ಈ ಚಿತ್ರದಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌, ನಿರೂಪ್‌ ಭಂಡಾರಿ, ನೀತಾ ಅಶೋಕ್‌, ವಾಸುಕಿ ವೈಭವ್‌ ನಟಿಸಿದ್ದಾರೆ.

ಹಿಂದಿಯಲ್ಲಿ ಸಲ್ಮಾನ್ ಖಾನ್

ಹಿಂದಿಯಲ್ಲಿ ಸಲ್ಮಾನ್ ಖಾನ್

ತಮಿಳಿನಲ್ಲಿ ಸಿಂಬು

VikrantRona (@VikrantRona) / Twitter

ತೆಲುಗಿನಲ್ಲಿ 'ಮೆಗಾಸ್ಟಾರ್' ಚಿರಂಜೀವಿ

MEGA Update From Kiccha Sudeep's Vikrant Rona! | Telugu Filmnagar

ಮಲಯಾಳಂನಲ್ಲಿ ಮೋಹನ್‌ಲಾಲ್

Good News: Chiranjeevi, Mohanlal and Simbu to launch release date teaser of  Kichcha Sudeepa's 'Vikrant Rona' | IWMBuzz

Indian Movie Superstar Announce Kiccha Sudeep Starrer Vikrant Rona Movie Release Date.