ಬ್ರೇಕಿಂಗ್ ನ್ಯೂಸ್
06-02-22 02:39 pm Source: Vijayakarnataka ಸಿನಿಮಾ
'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಅಭಿನಯದ ಕೊನೇ ಸಿನಿಮಾ 'ಜೇಮ್ಸ್' ಬಗ್ಗೆ ಅಭಿಮಾನಿಗಳು ಇನ್ನಿಲ್ಲದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾರ್ಚ್ 17ರ ಅಪ್ಪು ಜನ್ಮದಿನದಂದು ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜನವರಿ 26ರಂದು ಚಿತ್ರದ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ 'ಜೇಮ್ಸ್' ತಂಡ. ಈವರೆಗೂ 'ಜೇಮ್ಸ್' ಚಿತ್ರದ ಯಾವುದೇ ಟೀಸರ್ ಅಥವಾ ಟ್ರೇಲರ್ ರಿಲೀಸ್ ಆಗಿಲ್ಲ. ಇದೀಗ ಚಿತ್ರತಂಡ 'ಜೇಮ್ಸ್' ಚಿತ್ರದ ಮೊದಲ ಅಧಿಕೃತ ಟೀಸರ್ ರಿಲೀಸ್ ಮಾಡಲು ಮುಂದಾಗಿದೆ.
ಫೆ.11ಕ್ಕೆ 'ಜೇಮ್ಸ್' ಟೀಸರ್
'ಜೇಮ್ಸ್' ಸಿನಿಮಾದ ಟೀಸರ್ ರಿಲೀಸ್ಗೆ ಸಂಬಂಧಿಸಿದಂತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಟ್ವೀಟ್ ಮಾಡಿದ್ದು, 'ಫೆಬ್ರವರಿ 11 ರಂದು ಬೆಳಿಗ್ಗೆ 11.11 ಗಂಟೆಗೆ 'ಜೇಮ್ಸ್' ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ' ಎಂದಿದ್ದಾರೆ. ಪಿಆರ್ಕೆ ಆಡಿಯೋದಲ್ಲಿ ಈ ಟೀಸರ್ ರಿಲೀಸ್ ಆಗಲಿದ್ದು, ಚೇತನ್ ಕುಮಾರ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಈ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದರು. ಆದರೆ, ಡಬ್ ಮಾಡಿರಲಿಲ್ಲ. ಅದಕ್ಕೂ ಮೊದಲೇ ಅವರು ನಿಧನರಾಗಿದ್ದು ದುರಾದೃಷ್ಟಕರ. ಅವರ ನಿಧನದ ದುಃಖದಿಂದ ಕನ್ನಡಿಗರು ಇನ್ನೂ ಕೂಡ ಹೊರಬಂದಿಲ್ಲ. ಅಂದಹಾಗೆ, 'ಜೇಮ್ಸ್' ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಪುನೀತ್ ರಾಜ್ಕುಮಾರ್ಗೆ ಶಿವಣ್ಣ ಧ್ವನಿ
'ಜೇಮ್ಸ್'ಗೆ ಅಪ್ಪು ಡಬ್ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಅಪ್ಪುಗೆ ಶಿವರಾಜ್ಕುಮಾರ್ ಧ್ವನಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ್ದ ಶಿವಣ್ಣ, 'ಅಪ್ಪು ಮುಖ ನೋಡಿಕೊಂಡು ಡಬ್ ಮಾಡೋದು ಬಹಳ ಕಷ್ಟ. ಅಣ್ಣನಾಗಿ ಅದು ಬಹಳ ಕಷ್ಟ ಆಗಿತ್ತು. ಎಲ್ಲರೂ ಸೇರಿ ಕೇಳಿದಾಗ, ನಾನು ಮಾಡಲ್ಲ ಅಂತ ಹೇಗೆ ಹೇಳಲಿ? ಹಾಗಾಗಿ, ಪ್ರಯತ್ನ ಮಾಡಿದೆ. ಎರಡೂವರೆ ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದೇನೆ. ಅವನ ವಾಯ್ಸ್ ಜೊತೆಗೆ ಮ್ಯಾಚ್ ಮಾಡೋದಕ್ಕೆ ಬಹಳ ಕಷ್ಟ. ಆದರೂ ಏನೋ ಒಂದು ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗಬಹುದು ಅಂತ ಅಂದುಕೊಂಡಿದ್ದೇನೆ. ಇನ್ನೊಬ್ಬ ನಟನ ಒಳಗೆ ನುಗ್ಗುವುದು ಸಾಮಾನ್ಯದ ಕೆಲಸ ಅಲ್ಲ, ಬಹಳ ಕಷ್ಟ. ನನ್ನ ಸಿನಿಮಾದ ಡಬ್ಬಿಂಗ್ ನಾನು ಸುಲಭವಾಗಿ ಮಾಡಿಬಿಡಬಹುದು. ಬೇರೆ ನಟರಿಗೆ ಧ್ವನಿ ನೀಡುವುದು ಡಬ್ಬಿಂಗ್ ಕಲಾವಿದರಿಗೆ ಬಹಳ ಸುಲಭ' ಎಂದು ಹೇಳಿದ್ದರು.
'ಜೇಮ್ಸ್ನಲ್ಲಿ ನಟಿಸಿದ್ದು ಗಿಮಿಕ್ ಅಲ್ಲ, ಅಪ್ಪು ಸಿನಿಮಾಗೆ ಪ್ರಮೋಷನ್ ಮಾಡೋ ಯೋಗ್ಯತೆ ಯಾರಿಗೆ ಇದೆ'- ರಾಘಣ್ಣ
ಮಾರ್ಚ್ 17ರಂದು 'ಜೇಮ್ಸ್' ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ರೆಡಿ ಆಗುತ್ತಿದೆ. ಮಾರ್ಚ್ನಲ್ಲಿ ಬಿಗ್ ಬಜೆಟ್ ಸಿನಿಮಾಗಳಾದ ಆರ್ಆರ್ಆರ್, ರಾಧೆ ಶ್ಯಾಮ್ ಕೂಡ ತೆರೆಗೆ ಬರುತ್ತಿವೆ. 'ಜೇಮ್ಸ್'ಗಾಗಿ ಆ ಸಿನಿಮಾಗಳ ರಿಲೀಸ್ ಡೇಟ್ ಬದಲಾಗಿವೆ. ಮಾರ್ಚ್ 18ರಂದು ತೆರೆಗೆ ಬರಬೇಕಿದ್ದ 'ಆರ್ಆರ್ಆರ್' ಸಿನಿಮಾವು ಈಗ ಮಾರ್ಚ್ 25ಕ್ಕೆ ರಿಲೀಸ್ ಆಗಲಿದೆ.
ಪುನೀತ್ಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ? ರಾಘಣ್ಣ ಬಿಚ್ಚಿಟ್ಟ ಸಂಗತಿಗಳನ್ನ ಕೇಳಿದ್ರೆ ನಿಮಗೂ ಹಾಗೇ ಅನಿಸದೆ ಇರದು!
ಫೆಬ್ರವರಿ 11 ರಂದು ಬೆಳಿಗ್ಗೆ 11.11 ಕ್ಕೆ ಜೇಮ್ಸ್ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ.
— Ashwini Puneeth Rajkumar (@ashwinipuneet) February 5, 2022
James Official Teaser will be releasing on 11th February at 11.11 AM.@PRKAudio @PriyaAnand #KishorePathikonda @BahaddurChethan @actorsrikanth @realsarathkumar @charanrajmr2701 #BoloBoloJames pic.twitter.com/D04VXGUsI4
Puneeth Rajkumar Priya Anand Starrer James Movie First Official Teaser Will Release On February 11th.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm