ಬ್ರೇಕಿಂಗ್ ನ್ಯೂಸ್
16-09-21 03:06 pm Filmbeat: Manjunatha C ಸಿನಿಮಾ
ಬಂದೂಕು ತೋರಿಸಿ ಬಾಲಿವುಡ್ ನಟಿಯ ಬಳಿ ಹಣ ದೋಚಿದ ಪ್ರಕರಣ ದೆಹಲಿಯಲ್ಲಿ ನಡೆದಿದೆ. 'ಗರಂ ಮಸಾಲಾ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಖಿತಾ ರಾವಲ್ ನಿನ್ನೆ ದೆಹಲಿಯಲ್ಲಿ ತನ್ನ ಚಿಕ್ಕಮ್ಮನ ಮನೆಗೆ ಹೋಗುವ ದಾರಿಯಲ್ಲಿ ನಾಲ್ವರು ದರೋಡೆಕೋರರು ಬಂದೂಕು ತೋರಿಸಿ ನಟಿಯ ಬಳಿ ಹಣ, ಒಡೆವೆಗಳನ್ನು ದೋಚಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರಿಸಿರುವ ನಟಿ ನಿಖಿಲಾ ರಾವಲ್, ''ನಿನ್ನೆ ರಾತ್ರಿ ನಾನು ದೆಹಲಿಯಲ್ಲಿ ನನ್ನ ಚಿಕ್ಕಮ್ಮನ ಮನೆಗೆ ವಾಪಸ್ಸಾಗುತ್ತಿದ್ದಾಗ ಇನ್ನೋವಾ ಕಾರೊಂದು ಅಡ್ಡ ಬಂತು ಅದರಿಂದ ಇಳಿದ ನಾಲ್ವರು ಮುಸುಕುಧಾರಿಗಳು ಬಂದೂಕು ತೋರಿಸಿ ಹೆದರಿಸಿ ನನ್ನ ಬಳಿ ಇದ್ದ ಉಂಗುರ, ವಜ್ರದ ಪೆಂಡೆಂಟ್ ಹೊಂದಿದ್ದ ಚಿನ್ನದ ಸರ, ಪರ್ಸಿನಲ್ಲಿದ್ದ ಹಣ ಎಲ್ಲವನ್ನೂ ದೋಚಿಕೊಂಡು ಹೋದರು'' ಎಂದಿದ್ದಾರೆ.
''ಆ ಹತ್ತು ನಿಮಿಷ ನನಗೆ ವಿಪರೀತ ಭಯವಾಗಿತ್ತು, ಅವರು ನನ್ನನ್ನು ಕೊಂದು ಬಿಡುತ್ತಾರೆ ಎನಿಸಿತ್ತು. ನನ್ನನ್ನು ಹೊತ್ತುಯ್ದು ಅತ್ಯಾಚಾರ ಮಾಡಿಬಿಟ್ಟರೆ ಎಂದೂ ಭಯವಾಯ್ತು. ಹಾಗಾಗಿ ನನ್ನಲ್ಲಿ ಇದ್ದ ಎಲ್ಲವನ್ನೂ ಅವರಿಗೆ ಕೊಟ್ಟುಬಿಟ್ಟೆ. ಇವೆಂಟ್ ಒಂದಕ್ಕೆ ಅಡ್ವಾನ್ಸ್ ಪಡೆದು ವಾಪಸ್ ಬರುತ್ತಿದ್ದೆ. ಹಾಗಾಗಿ ನನ್ನಲ್ಲಿ ಹೆಚ್ಚಿಗೆ ಹಣ ಇತ್ತು'' ಎಂದಿದ್ದಾರೆ ನಿಖಿತಾ. ''ನಾನು ಬಹಳ ಭಯಗೊಂಡಿದ್ದೆ. ಅದೆಷ್ಟು ಭಯವಾಗಿತ್ತೆಂದರೆ ನಾನು ಮನೆಗೆ ಬಂದವಳೆ ವಾರ್ಡ್ ರೋಬ್ ಸೇರಿಕೊಂಡು ಬಿಟ್ಟೆ. ಅಷ್ಟೋಂದು ಭಯ ನನ್ನನ್ನು ಆವರಿಸಿತ್ತು. ನನಗೆ ಅಲ್ಲಿ ಇರಲು ಸಹ ಭಯವಾಯ್ತು ಹಾಗಾಗಿ ಬೆಳಿಗ್ಗೆ ಮೊದಲ ಫ್ಲೈಟ್ ಹಿಡಿದು ಮುಂಬೈಗೆ ವಾಪಸ್ಸಾದೆ. ಇಲ್ಲಿಂದ ವಕೀಲರನ್ನು ಸಂಪರ್ಕಿಸಿ ಅವರಿಂದ ದೂರು ಕೊಡಿಸಿದೆ'' ಎಂದಿದ್ದಾರೆ ನಿಖಿತಾ ರಾವಲ್.
ಒಡೆವೆ, ಹಣ ಎಲ್ಲವೂ ಸೇರಿ ಸುಮಾರ ಏಳು ಲಕ್ಷ ಮೌಲ್ಯದ ವಸ್ತುಗಳನ್ನು ದರೋಡೆಕೋರರು ದೋಚಿದ್ದಾರೆ ಎಂದು ನಟಿ ಹೇಳಿದ್ದಾರೆ. ಎಫ್ಐಆರ್ ದಾಖಲಿಸಲು ಸ್ವತಃ ಸಂತ್ರಸ್ತ ವ್ಯಕ್ತಿ ಇರಬೇಕೆಂದು ಪೊಲೀಸರು ಹೇಳಿರುವ ಕಾರಣ ಮತ್ತೆ ದೆಹಲಿಗೆ ಹೋಗಿ ದೂರು ನೀಡಿ ಬರುವೆ ಎಂದು ಸಹ ನಿಖಿತಾ ಹೇಳಿದ್ದಾರೆ. ನಿಖಿತಾ ಪ್ರಸ್ತುತ, 'ರೋಟಿ ಕಪಡಾ ಔರ್ ರೊಮ್ಯಾನ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅರ್ಷದ್ ವಾರ್ಸಿ ಮತ್ತು ಚಂಕಿ ಪಾಂಡೆ ಸಹ ಇದ್ದಾರೆ.
ಕೆಲವು ದಿನಗಳ ಹಿಂದಷ್ಟೆ 'ನಮಸ್ತೆ ಲಂಡನ್' ಸಿನಿಮಾದ ನಟಿ ಅಲಂಕೃತಾ ಸಹಾಯ್ ಚಂಢೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇದ್ದಾಗ ನುಗ್ಗಿದ ದರೋಡೆಕೋರರು ನಟಿಗೆ ಹೊಡೆದು, ಚಾಕು ತೋರಿಸಿ ಬೆದರಿಸಿ ಮನೆಯಲ್ಲಿದ್ದ ಹಣ, ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣದ ಬಗ್ಗೆ ನಟಿ ಅಲಂಕೃತಾ ಸೆಕ್ಟರ್ 26 ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನು ಕೆಲವು ದಿನಗಳ ಹಿಂದಷ್ಟೆ ನಟಿಯ ಮನೆಗೆ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
11-07-25 08:55 pm
Mangalore Correspondent
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
11-07-25 10:10 pm
HK News Desk
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm