ಬ್ರೇಕಿಂಗ್ ನ್ಯೂಸ್
08-09-21 12:50 pm Filmbeat: Manjunatha C ಸಿನಿಮಾ
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಟ್ವೀಟ್ರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಕ್ಷಯ್ ಕುಮಾರ್, ''ಆಕೆ ನನ್ನ ಬೇರಾಗಿದ್ದಳು. ನಾನು ಇಂದು ತಡೆದುಕೊಳ್ಳಲಾಗದಷ್ಟು ದುಃಖದಲ್ಲಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಭಾ ಭಾಟಿಯಾ ಇಂದು ಮುಂಜಾನೆ ಶಾಂತವಾಗಿ ಈ ಲೋಕವನ್ನು ಬಿಟ್ಟು ಹೋಗಿದ್ದಾಳೆ. ಆಕೆ ಬೇರೆ ಲೋಕದಲ್ಲಿ ನನ್ನ ತಂದೆಯನ್ನು ಸೇರಿಕೊಂಡಿದ್ದಾಳೆ. ಕಠಿಣ ಸಮಯದಲ್ಲಿ ನನ್ನ ಕುಟುಂಬದ ಪರವಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ, ಓಂ ಶಾಂತಿ'' ಎಂದಿದ್ದಾರೆ.

ಮಂಗಳವಾರ ಟ್ವೀಟ್ ಮಾಡಿದ್ದ ಅಕ್ಷಯ್ ಕುಮಾರ್, ''ನನ್ನ ತಾಯಿಯ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ನೋಡಿ ಮನಸ್ಸು ತುಂಬಿ ಬಂದಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ಬಹಳ ಕಠಿಣ ಸಮಯ. ನಿಮ್ಮ ಪ್ರತಿಯೊಬ್ಬರ ಪ್ರಾರ್ಥನೆ ನಮಗೆ ಸಹಕಾರಿ ಆಗಲಿದೆ'' ಎಂದಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ, ಅಕ್ಷಯ್ ತಾಯಿ ಇಂದು ಬೆಳಿಗ್ಗೆ ಅಸುನೀಗಿದ್ದಾರೆ.
ಸೆಪ್ಟೆಂಬರ್ 5 ರಂದೇ ಅಕ್ಷಯ್ ಕುಮಾರ್ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮುಂಬೈನ ಹೀರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಆರೋಗ್ಯ ಕ್ಷೀಣಿಸಿದ ವಿಷಯ ತಿಳಿದ ಕೂಡಲೇ ಬ್ರಿಟನ್ನಲ್ಲಿನ ಚಿತ್ರೀಕರಣ ಅರ್ಧಕ್ಕೆ ಕೈಬಿಟ್ಟು ಸೆಪ್ಟೆಂಬರ್ 6ರಂದು ಭಾರತಕ್ಕೆ ವಾಪಸ್ಸಾಗಿದ್ದರು ಅಕ್ಷಯ್. ಬ್ರಿಟನ್ನಲ್ಲಿ 'ಸಿಂಡ್ರೆಲಾ' ಸಿನಿಮಾದ ಶೂಟಿಂಗ್ನಲ್ಲಿ ಅಕ್ಷಯ್ ಕುಮಾರ್ ತೊಡಿಗಿಸಿಕೊಂಡಿದ್ದರು. ಅಕ್ಷಯ್ ಕುಮಾರ್ ತಂದೆ ಹರಿ ಓಮ್ ಭಾಟಿಯಾ ಸೈನ್ಯಾಧಿಕಾರಿ ಆಗಿದ್ದರು, ತಾಯಿ ಅರುಣಾ ಭಾಟಿಯಾ ಗೃಹಿಣಿ ಆಗಿದ್ದರು. ನಂತರ ನಿರ್ಮಾಪಕಿಯಾಗಿಯೂ ಬದಲಾದರು. ಹರಿ ಓಂ ಪ್ರೊಡಕ್ಷನ್ ಹೌಸ್ನ ಪಾಲುದಾರೆ ಆಗಿದ್ದ ಅವರು, ಪ್ರೊಡಕ್ಷನ್ ಹೌಸ್ ಮೂಲಕ 'ಸಿಂಗ್ ಈಸ್ ಕಿಂಗ್', 'ಓಹ್ ಮೈ ಗಾಡ್', 'ಹಾಲಿಡೇ', 'ಏರ್ಲಿಫ್ಟ್', 'ರುಸ್ತುಂ', 'ನಾಮ್ ಶಬಾನಾ', 'ಟಾಯ್ಲೆಟ್', 'ಚುಂಬಕ್' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
She was my core. And today I feel an unbearable pain at the very core of my existence. My maa Smt Aruna Bhatia peacefully left this world today morning and got reunited with my dad in the other world. I respect your prayers as I and my family go through this period. Om Shanti 🙏🏻
— Akshay Kumar (@akshaykumar) September 8, 2021
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am