ಬ್ರೇಕಿಂಗ್ ನ್ಯೂಸ್
09-08-21 12:36 pm Source: News 18 Kannada ಸಿನಿಮಾ
57 ಕ್ಯಾಮೆರಾಗಳು, 20 ಸ್ಪರ್ಧಿಗಳು ಸ್ಪರ್ಧಿಗಳು, ಐದು ದ್ವಾರಗಳು... 120 ದಿನಗಳ ಭರ್ಜರಿ ಪ್ರಯಾಣ ಈಗ ಕೊನೆಯಾಗಿದೆ. 17 ವಾರಗಳ ಕಾಲ ನಡೆದ 72 ದಿನಗಳ ಮೊದಲ ಇನ್ನಿಂಗ್ಸ್ ಹಾಗೂ 48 ದಿನಗಳ ಸೆಕೆಂಡ್ ಇನ್ನಿಂಗ್ಸ್ ಜರ್ನಿಗೆ ಅದ್ದೂರಿಗೆ ತೆರೆ ಎಳೆಯಲಾಗಿದೆ. ರಿಯಾಲಿಟಿ ಶೋಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ರ (Bigg Boss Kannada Season 8) ಕಾರ್ಯಕ್ರಮ ಮತ್ತೆ ಆರಂಭವಾಯಿತು. ಕೊರೋನಾ ಎರಡನೇ ಅಲೆಯಿಂದಾಗಿ ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆಯುತ್ತೋ ಅಥವಾ ಇಲ್ಲವೋ ಅನ್ನೋ ಪ್ರಶ್ನೆ ಕಾಡುತ್ತಿದ್ದರೂ ಎಲ್ಲರ ಪರಿಶ್ರಮದಿಂದ ಇಂದು ಈ ಜರ್ನಿ ಕೊನೆಯಗೂ ಗುರಿ ಮುಟ್ಟಿದೆ. ಮೊದಲಿಗೆ ಟಾಪ್ 3ಯಲ್ಲಿದ್ದ ದಿವ್ಯಾ ಉರುಡುಗ ಅವರು ಈ ಸೀಸನ್ನ ಕೊನೆಯ ಎಲಿಮಿನೇಷನ್ನಲ್ಲಿ ಎವಿಕ್ಟ್ ಆಗಿ ಮನೆಯಿಂದ ಹೊರ ಬಂದರು. ಇಂದು ನಡೆದ ಫಿನಾಲೆಯಲ್ಲಿ 11 ಲಕ್ಷದ 61 ಸಾವಿರದ 205 ಮತಗಳನ್ನು ಪಡೆದು 3ನೇ ಸ್ಥಾನ ಪಡೆದು ದಿವ್ಯಾ ಉರುಡುಗ ಆಟದಿಂದ ಹೊರ ಬಂದರು.
ಎಂದಿನಂತೆ ನಿರೂಪಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಇಬ್ಬರು ಫೈನಲಿಸ್ಟ್ಗಳಾದ ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ ಅವರನ್ನು ವೇದಿಕೆಗೆ ಕರೆ ತಂದರು. ಕಿಚ್ಚನ ಜೊತೆ ಇಬ್ಬರೂ ಫೈನಲಿಸ್ಟ್ಗಳು ವೇದಿಕೆ ಕಾಲಿಡುತ್ತಿದ್ದಂತೆಯೇ ನೆರೆದಿದ್ದವರಲ್ಲಿ ಕಾತರ ಹೆಚ್ಚಾಯಿತು. ವಿನ್ನರ್ ಯಾರೆಂದು ಹೇಳುವ ಮೊದಲು ಸುದೀಪ್ ಅವರು ಇತರೆ ಸ್ಪರ್ಧಿಗಳನ್ನು ಯಾರು ಜಯಗಳಿಸಬೇಕೆಂಬುದು ನಿಮ್ಮ ಇಷ್ಟ ಎನ್ನುತ್ತಾರೆ. ಆಗ ಶಮಂತ್ ಹಾಗೂ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಮಂಜು ಅವರೇ ಗೆಲ್ಲಬೇಕು ಎಂದು. ಅದರಲ್ಲೂ ಮಂಜು ಅವರಿಗೆ ಹೆಜ್ಜೆ ಹೆಜ್ಜೆಗೂ ನಿಂದಿಸಿ, ಚುಚ್ಚು ಮಾತುಗಳನ್ನಾಡಿದ ಚಕ್ರವರ್ತಿ ಹಾಗೂ ಪ್ರಶಾಂತ್ ಅವರೂ ಮಂಜು ಗೆಲ್ಲಬೇಕು ಎಂದರು.
120 ದಿನಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಬಿಗ್ ಬಾಸ್ ಸೀಸನ್ 8ರ ಫಿನಾಲೆ ನಡೆದಿದ್ದು, ಅಂತಿಮವಾಗಿ ಹಳ್ಳಿ ಹುಡುಗ ಮಂಜು ಪಾವಗಡ ವಿಜೇತರಾಗಿ ಟ್ರೋಫಿ ಕೈಯಲ್ಲಿ ಹಿಡಿದಿದ್ದಾರೆ. ಕೊನೆಯವರೆಗೂ ಟಫ್ ಫೈಟ್ ಕೊಟ್ಟ ಬೈಕರ್ ಅರವಿಂದ್ ಕೆ. ಪಿ ಅವರು ರನ್ನರ್ ಅಪ್ ಆಗಿದ್ದಾರೆ. ವಿಜೇತರ ಹೆಸರನ್ನು ಪ್ರಕಟಿಸುವ ಮೊದಲು ಯಾರು ಯಾವ ಕಡೆ ನಿಲ್ಲಬೇಕು ಎಂದು ಟಾಸ್ ಮಾಡುವ ಮೂಲಕ ಫೈನಲಿಸ್ಟ್ಗಳಿಗೆ ಆಯ್ಕೆ ಮಾಡುವ ಅವಕಾಶ ನೀಡಲಾಗಿದ್ದು ವಿಶೇಷ.
ಗೆಲುವನ್ನು ಮಜಾ ಭಾರತಕ್ಕೆ ಸಮರ್ಪಿಸಿದ ಮಂಜು
ಮಂಜು ಪಾವಗಡ ಇಂದು ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಿಲ್ಲಲು ಕಾರಣ ಮಜಾ ಭಾರತ. ಅದಕ್ಕೆ ತನ್ನ ಈ ಗೆಲುವನ್ನು ಮಜಾ ಭಾರತಕ್ಕೆ ಸಮರ್ಪಿಸಿದ್ದಾರೆ ಮಂಜು.ಇನ್ನು ಬಿಗ್ ಬಾಸ್ ಸೀಸನ್ 8ರ ವಿನ್ನರ್ ಟ್ರೋಫಿಯನ್ನು ಮಂಜು ಹಿಡಿದರೆ, ಸುದೀಪ್ ಅವರು ತಾವು ತೊಟ್ಟಿದ್ದ ಜಾಕರಟ್ ಅನ್ನು ಅರವಿಂದ್ ಅವರಿಗೆ ತೊಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಇದು ನಾನು ಅರವಿಂದ್ಗೆ ಕೊಡುತ್ತಿರುವ ಟ್ರೋಫಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಸುದೀಪ್.
ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೆ ಎಲ್ಲರನ್ನೂ ನಗಿಸುತ್ತಾ, ರಂಜಿಸುತ್ತಾ ಇದ್ದ ಮಂಜು ಪಾವಗಡ ಕೊನೆಗೂ ವೀಕ್ಷಕರ ಮನ ಗೆದಿದ್ದಾರೆ. ಈ ಸೀಸನ್ನಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮಂಜು ಪಾವಗಡ ಸೀಸನ್ 8ರ ವಿನ್ನರ್ ಆಗಿದ್ದಾರೆ. ಮಂಜು ಅವರು 45 ಲಕ್ಷ 3 ಸಾವಿರದ 492 ಮತಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಅರವಿಂದ್ ಕೆ.ಪಿ ಅವರು 43 ಲಕ್ಷದ 35 ಸಾವಿರದ 957 ಮತಗಳನ್ನು ಪಡೆದು ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ನಲ್ಲಿ ಮಂಜು ವಿಜಯ ಮಾಲೆ ಧರಿಸುವ ಮೂಲಕ 53 ಲಕ್ಷ ಬಹುಮಾನ ಗೆದ್ದರೆ, ಅರವಿಂದ್ ಕೆ ಪಿ ಅವರು ರನ್ನರ್ ಅಪ್ ಆಗುವ ಮೂಲಕ 11 ಲಕ್ಷ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿ ಕೊನೆಯ ವಾರ ಕೊಟ್ಟಿದ್ದ ಟಾಸ್ಕ್ನಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ 2 ಲಕ್ಷ ನಗದು ಬಹುಮಾನ ಸಹ ಪಡೆದುಕೊಂಡಿದ್ದಾರೆ.
(Kannada Copy of News 18 Kannada)
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm