ಬ್ರೇಕಿಂಗ್ ನ್ಯೂಸ್
27-07-21 04:28 pm Headline Karnataka News Network ಸಿನಿಮಾ
ಮುಂಬೈ; ಅಶ್ಲೀಲ ಸಿನಿಮಾ ತಯಾರಿ ಆರೋಪವನ್ನು ಹೊತ್ತಿರುವ ಉದ್ಯಮಿ ರಾಜ್ಕುಂದ್ರಾ ಅವರ ಮನೆ ಮೇಲೆ ಮುಂಬೈನ ಅಪರಾಧ ತಡೆ ವಿಭಾಗದ ಪೊಲೀಸರು ದಾಳಿ ಮಾಡಿದಾಗ ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ಕುಂದ್ರಾ ಜತೆಗೆ ಜಗಳ ತೆಗೆದು, ಕಿರುಚಾಡಿ, ಅತ್ತು ಗೋಳಾಡಿದ್ದರೆಂದು ಪೊಲೀಸ್ ಮೂಲಗಳು ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸುವಾಗ ತನ್ನ ಗಂಡನ ಮೇಲಿರುವ ಆರೋಪ ಕೇಳಿ ದಿಗ್ಭ್ರಾಂತರಾದ ಶಿಲ್ಪಾ ಶೆಟ್ಟಿ, ಪತಿ ಹೀಗೆಲ್ಲಾ ಮಾಡುತ್ತಿದ್ದರೆಂದು ನನಗೆ ಗೊತ್ತೇ ಇರಲಿಲ್ಲ. ಇದ್ಯಾವುದರ ಬಗ್ಗೆಯೂ ನನಗೆ ಅರಿವಿಲ್ಲ ಎಂದು ಹೇಳಿ ದುಃಖ ತೋಡಿಕೊಂಡಿದ್ದರಂತೆ. ಅಲ್ಲದೇ ಆ ಬಗ್ಗೆ ಗಂಡನೊಂದಿಗೆ ತಕರಾರು ತೆಗೆದು ಕಣ್ಣೀರಿಟ್ಟ ಅವರನ್ನು ಸಮಾಧಾನ ಮಾಡಲು ಪೊಲೀಸರೇ ಮುಂದಾಗಬೇಕಾಯಿತು ಎನ್ನುವ ವಿಚಾರವೂ ಬಯಲಾಗಿದೆ.
ರಾಜ್ಕುಂದ್ರಾ ನೀಲಿ ಚಿತ್ರ ತಯಾರಿಸುವ ಜಾಲದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಕಾರಣಕ್ಕೆ ಮುಂಬೈ ಪೊಲೀಸರು ಕಳೆದ ವಾರ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಪೊಲೀಸರ ವಶದಲ್ಲೇ ಇರುವ ರಾಜ್ಕುಂದ್ರಾ ಮೇಲೆ ಹಲವರು ಗಂಭೀರ ಆರೋಪವನ್ನೂ ಎಸಗುತ್ತಿದ್ದಾರೆ. ಹಾಟ್ಶಾಟ್ಸ್ ಎಂಬ ಆ್ಯಪ್ ಮೂಲಕ ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಹಂಚಿಕೆಯನ್ನು ಮಾಡುತ್ತಿದ್ದ ರಾಜ್ಕುಂದ್ರಾ ಅನೇಕರನ್ನು ಈ ದಂಧೆಗೆ ನೂಕುವ ಯತ್ನ ಮಾಡಿದ್ದರು ಎಂಬ ಆಪಾದನೆಯೂ ಇದೆ.
ಆದರೆ, ಈ ವಿಚಾರವಾಗಿ ಪೊಲೀಸರು ಮುಂಬೈನಲ್ಲಿರುವ ರಾಜ್ಕುಂದ್ರಾ ನಿವಾಸದ ಮೇಲೆ ದಾಳಿ ಮಾಡಿದ ನಂತರವಷ್ಟೇ ಅವರ ಪತ್ನಿ ಶಿಲ್ಪಾ ಶೆಟ್ಟಿಗೆ ವಿಷಯ ಗೊತ್ತಾಗಿದೆಯಂತೆ. ಪೊಲೀಸ್ ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಲ್ಪಾ ಅನ್ಯಮನಸ್ಕರಾಗಿ, ಬೇಸರಗೊಂಡು ಕುಳಿತಿದ್ದರಂತೆ. ಬಳಿಕ ರಾಜ್ಕುಂದ್ರಾ ಜತೆಗೆ ಜಗಳ ತೆಗೆದ ಅವರು ಈ ರೀತಿ ಮಾಡುವ ಅವಶ್ಯಕತೆಯಾದರೂ ಏನಿತ್ತು. ಇಂತಹ ದಂಧೆ ನಿಮಗೆ ಬೇಕಿತ್ತಾ ಎಂದು ಕಿಡಿಕಾರಿದ್ದಾರಂತೆ.
ಜಗಳದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದ್ದು, ಗಂಡನ ಮೇಲಿನ ಗಂಭೀರ ಆರೋಪ ಕೇಳಿ ಜರ್ಜರಿತರಾಗಿದ್ದರಂತೆ. ಬಳಿಕ ಅವರಿಬ್ಬರ ಜಗಳವನ್ನು ನಿಲ್ಲಿಸಲು ಮಧ್ಯೆ ಪ್ರವೇಶಿಸಿದ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಸಮಾಧಾನಗೊಳಿಸಿದರಂತೆ. ಬಳಿಕ ಪೊಲೀಸರೊಂದಿಗೂ ಕಣ್ಣೀರಿಡುತ್ತಲೇ ಮಾತನಾಡಿ ನನಗೆ ಪತಿಯ ಈ ವ್ಯವಹಾರದ ಬಗ್ಗೆ ತಿಳಿದೇ ಇಲ್ಲ. ಆ್ಯಪ್ ಬಗ್ಗೆಯೂ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರಂತೆ.
ಇಷ್ಟೆಲ್ಲಾ ಸಿಕ್ಕ ಮೇಲೂ ನಿಮಗಿದು ಬೇಕಿತ್ತಾ?
ಇದು ನಮ್ಮ ಕುಟುಂಬದ ಮರ್ಯಾದೆ ತೆಗೆಯುವುದಷ್ಟೇ ಅಲ್ಲ. ಎಷ್ಟೆಲ್ಲಾ ಆರ್ಥಿಕ ಹೊಡೆತವನ್ನೂ ನೀಡುತ್ತದೆ. ಎಷ್ಟೋ ಒಪ್ಪಂದಗಳು ಈ ಕಾರಣಕ್ಕೆ ಮುರಿದು ಬೀಳಲಿವೆ. ಈಗಾಗಲೇ ಒಂದು ಹಂತಕ್ಕೆ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ಮೇಲೆ ಇಂಥಾ ಕೆಲಸದ ಅವಶ್ಯಕತೆಯಾದರೂ ಏನಿತ್ತು ಎಂದು ಪತಿ ರಾಜ್ಕುಂದ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ರಾಜ್ಕುಂದ್ರಾ ಅವರಿಗೆ ಬಂಧನದ ಭೀತಿ ಕೆಲ ತಿಂಗಳ ಹಿಂದೆಯೇ ಎದುರಾಗಿದ್ದು, ಉಳಿದ ಒಂಬತ್ತು ಜನರು ಮಾರ್ಚ್ ತಿಂಗಳಿನಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ತಮ್ಮ ಫೋನ್ ಬದಲಾಯಿಸಿ, ಯಾವುದೇ ಮಾಹಿತಿ ಸಿಗದಂತೆ ನೋಡಿಕೊಳ್ಳಲು ಯತ್ನಿಸಿದ್ದರಂತೆ. ಆದರೆ, ಪೊಲೀಸರು ಹಳೆಯ ಫೋನ್ ಎಲ್ಲಿ ಎಂದು ಕೇಳಿದಾಗ ಅದನ್ನು ಎಸೆದರುವುದಾಗಿ ತಿಳಿಸಿದ್ದು, ಇದೀಗ ಪೊಲೀಸರು ಪ್ರಮುಖ ಸಾಕ್ಷ್ಯಗಳು ಇದೆ ಎನ್ನಲಾದ ಹಳೇ ಫೋನ್ ಹುಡುಕಾಟ ಶುರುಮಾಡಿದ್ದಾರಂತೆ.
ರಾಜ್ ಬ್ಯಾಂಕ್ ಎಕೌಂಟ್ ಸೀಜ್;
ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳ ನಿರ್ದೇಶನದ ಮೇರೆಗೆ ರಾಜ್ಕುಂದ್ರಾ ಅವರ ಉತ್ತರ ಪ್ರದೇಶದ SBIನಲ್ಲಿ ಹೊಂದಿದ 2 ಖಾತೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ
ಈ ವೇಳೆ ಈ ಎರಡೂ ಖಾತೆಗಳಲ್ಲಿ ಕೋಟ್ಯಂತರ ರು. ಠೇವಣಿ ಮಾಡಲಾಗಿರುವುದು ಕಂಡುಬಂದಿದೆ. ಜೊತೆಗೆ ರಾಜ್ಕುಂದ್ರಾ ಅವರ ಚಿತ್ರ ನಿರ್ಮಾಣ ಕಂಪನಿಯನ್ನು ಅರವಿಂದ್ ಶ್ರೀವಾಸ್ತವ ಅವರು ನಡೆಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕುಂದ್ರಾ ಅವರ ಖಾತೆಯಿಂದ ಅರವಿಂದ್ ಅವರ ಪತ್ನಿ ಹರ್ಷಿತಾ ಅವರ ಖಾತೆಗೆ ಹಣ ಜಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದೆರಡು ವರ್ಷಗಳಿಂದ ತಮ್ಮ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದ ಅರವಿಂದ್, ಪ್ರತೀ ತಿಂಗಳು ಖರ್ಚಿಗೆ ಹಣ ನೀಡುತ್ತಿದ್ದ. ಆದರೆ ಆತನ ಯಾವುದೇ ಚಟುವಟಿಕೆಗಳ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಅರವಿಂದ್ ಅವರ ತಂದೆ ಎನ್.ಪಿ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಎರಡು ಬ್ಯಾಂಕ್ ಖಾತೆಗಳಲ್ಲಿ ಹಲವು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.
Actor Shilpa Shetty Cries during crime branch visit to the house says didn't know husbands blue film business. Raj Kundra's case has become the matter of attention for the entire India. He being a celebrity by the virtue of marrying Shilpa Shetty pulled the attention of many with the alleged pornography case.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm