ಬ್ರೇಕಿಂಗ್ ನ್ಯೂಸ್
10-06-21 10:45 am Shruthi, Filmbeat ಸಿನಿಮಾ
ಭಾರತದ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಹೊರಹೊಮ್ಮಿರುವ ನಟಿ, ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಬೆನ್ನಲ್ಲೇ ಸಿನಿಮಾ ಆಫರ್ ಗಳು ಕೂಡ ಜಾಸ್ತಿ ಆಗಿದೆ.
ಇದೀಗ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಅವಕಾಶ ಒದಗಿ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಪೌರಾಣಿಕ ಚಿತ್ರಗಳಲ್ಲಿ ನಟಿಸಲು ಅನೇಕ ಕಲಾವಿದರು ತುದಿಗಾಲಿನಲ್ಲಿ ನಿಂತಿರುತ್ತಾರೆ, ಅನೇಕ ನಟಿಯರ ದೊಡ್ಡ ಕನಸಾಗಿರುತ್ತೆ. ಈಗ ಅಂಥ ದೊಡ್ಡ ಅವಕಾಶ ರಿಯಾಗೆ ಒದಗಿಬಂದಿದೆ. ಮಹಾಭಾರತ ಚಿತ್ರದಲ್ಲಿ ನಟಿಸಲು ರಿಯಾಗೆ ಆಫರ್ ಮಾಡಲಾಗಿದೆ. ಮುಂದೆ ಓದಿ.. ಈ ಅಪ್ಲಿಕೇಶನ್ಗಳನ್ನು ಬಳಸಿದರೆ ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಾಗಲಿದೆ!
ದ್ರೌಪದಿ ಪಾತ್ರಕ್ಕೆ ರಿಯಾಗೆ ಆಫರ್
ಈಗಾಗಲೇ ಮಹಾಭಾರತ ಮತ್ತು ರಾಮಾಯಣದ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ ಮತ್ತು ಬರುತ್ತಿವೆ. ಮಹಾಭಾರತ ಆಧರಿಸಿ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಲು ರಿಯಾ ಚಕ್ರವರ್ತಿಗೆ ಆಫರ್ ಮಾಡಲಾಗಿದೆಯಂತೆ. ದ್ರೌಪದಿ ಪಾತ್ರಕ್ಕಾಗಿ ಚಿತ್ರತಂಡ ರಿಯಾ ಜೊತೆ ಮಾತುಕತೆ ನಡೆಸುತ್ತಿದೆಯಂತೆ.
ದೊಡ್ಡ ಮಟ್ಟದಲ್ಲಿ ಬರ್ತಿದೆ ಮಹಾಭಾರತ
ಈಗಾಗಲೇ ಸ್ಕ್ರಿಪ್ಟ್ ಅನ್ನು ಸಹ ರಿಯಾಗೆ ಕಳುಹಿಸಲಾಗಿದ್ದು, ಸ್ಕ್ರಿಪ್ಟ್ ಓದುವಲ್ಲಿ ರಿಯಾ ಬ್ಯುಸಿಯಾಗಿದ್ದಾರಂತೆ. ಮೂಲಗಳ ಪ್ರಕಾರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆಯಂತೆ. ಮಹಾಭಾರತ ಮತ್ತು ದ್ರೌಪದಿ ಪಾತ್ರವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ರಿಯಾ ನಟಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.
ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ ರಿಯಾ
ರಿಯಾ ಚಕ್ರವರ್ತಿ ಸದ್ಯ ಹಳೆಯ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಸಿಂಗ್ ಸಾವಿನ ವಿಚಾರವಾಗಿ ನಡೆದ ತನಿಖೆಯಲ್ಲಿ ಜೈಲು ವಾಸ ಅನುಭವಿಸಿ ಬಂದಿರುವ ರಿಯಾ ಸದ್ಯ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಕೊರೊನಾ ಸಂಕಷ್ಟದಲ್ಲಿರೋರ ಸಹಾಯಕ್ಕೆ ರಿಯಾ ಧಾವಿಸಿದ್ದರು.
ಚೆಹ್ರೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ
ಇನ್ನು ರಿಯಾ ಸದ್ಯ ಅಮಿತಾಬ್ ಮತ್ತು ಇಮ್ರಾನ್ ಹಶ್ಮಿ ಜೊತೆ ನಟಿಸಿದ್ದ ಚೆಹ್ರೆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಆಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ.
(Kannada Copy of Filmbeat Kannada)
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm