ಬ್ರೇಕಿಂಗ್ ನ್ಯೂಸ್
17-03-21 03:21 pm Source: FILMIBEAT ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊರೊನಾ ಆತಂಕದ ಕಾರಣ ಅಪ್ಪು ಈ ಬಾರಿಯೂ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ.
ಪುನೀತ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅಪ್ಪು, ತನ್ನ ತಂದೆಯ ಬಗ್ಗೆ ಬರೆದಿರುವ ಅದ್ಭುತ ಸಾಲುಗಳನ್ನು ಇಲ್ಲಿ ಮೆಲುಕು ಹಾಕೋಣ. ಹ್ಯಾಪಿ ಬರ್ತಡೇ ಪುನೀತ್ ರಾಜ್ ಕುಮಾರ್: ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪ್ರಕೃತಿ ಎನ್. ಬನವಾಸಿ ಇಬ್ಬರು ಸೇರಿ ಬರೆದಿರುವ ಡಾ.ರಾಜ್ ಕುಮಾರ್ ಅವರ 'ವ್ಯಕ್ತಿಯ ಹಿಂದಿನ ವ್ಯಕ್ತಿತ್ವ' ಪುಸ್ತಕದ 'ನಾ ಕಂಡ ಅಪ್ಪಾಜಿ' ಆಧ್ಯಾಯದ ಕೆಲವು ಸುಂದರ ಸಾಲುಗಳನ್ನು ಆಯ್ದುಕೊಳ್ಳಲಾಗಿದೆ. ಮುಂದೆ ಓದಿ...
ತಂದೆಯನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ದೊರೆದಿದೆ
ಅಪ್ಪು ತಂದೆಯ ಬಗ್ಗೆ ವಿವರಿಸಿದ ಭಾವುಕ ಸಾಲುಗಳು, ಅಪ್ಪಾಜಿ ಅವರ ಜೊತೆ ಹೊರಾಂಗಣ ಚಿತ್ರೀಕರಣಕ್ಕೆ ಹೋಗುತ್ತಿದ್ದದ್ದು ನನಗಿರುವ ಮೊದಲ ನೆನಪುಗಳು. ನನ್ನನ್ನು ಮನೆಯಲ್ಲಿ ಬಿಟ್ಟು ಹೋಗಲು ನಾನು ತುಂಬಾ ಚಿಕ್ಕವನಾಗಿದ್ದರಿಂದ ಅಮ್ಮ ಹಾಗೂ ಅಪ್ಪಾಜಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ಚಿತ್ರೀಕರಣ ಸೆಟ್ ನಲ್ಲಿ ಇರುವುದು ನನಗೆ ಚಿಕ್ಕ ವಯಸ್ಸಿನಿಂದನೆ ಅಭ್ಯಾಸವಾಗಿ ಹೋಗಿತ್ತು. ಇದರಿಂದಾಗಿ ನನ್ನ ತಂದೆಯನ್ನು ಅನೇಕ ಸಂದರ್ಭಗಳಲ್ಲಿ ಬಹಳ ಹತ್ತಿರದಿಂದ ನೋಡುವ ಅವಕಾಶ ದೊರೆಯಿತು.
ಒಂದು ವರ್ಷದವರಾಗಿದ್ದಾಗನೆ ನಟನೆ ನಾನು
ಕೇವಲ ಒಂದು ವರ್ಷದವನಾಗಿದ್ದಾಗಲೇ ನನ್ನ ಮೊದಲ ಚಿತ್ರ ಪ್ರೇಮದ ಕಾಣಿಕೆಯಲ್ಲಿ ನಟಿಸಿದೆ ಎಂದು ಹೇಳಲಾಗಿದೆ. ನನಗೆ ಯಾರದಾದರೂ ಕಣ್ಣು ತಾಗುತ್ತದೆ ಎಂಬ ಭಯದಿಂದ ನನ್ನ ಅಜ್ಜಿಗೆ ನಾನು ಪಾತ್ರ ಮಾಡುವುದು ಇಷ್ಟ ಇರಲಿಲ್ಲ. ಆದರೆ ಪರದೆ ಮೇಲೆ ನೋಡಿ ತುಂಬಾ ಖುಷಿ ಪಟ್ಟರು.
ಚಿತ್ರೀಕರಣ ಸೆಟ್ನಲ್ಲಿ ನಡೆದ ಘಟನೆ
ತುಂಬಾ ಚಿಕ್ಕವನಿದ್ದಾಗ, ಬಹುಶಃ 5 ವರ್ಷದವನಿದ್ದಾಗ ನನಗೆ ತಪ್ಪು ಸರಿಗಳ ಪರಿವಿರಲಿಲ್ಲ. ನನಗೆ ಚೆನ್ನಾಗಿ ನೆನಪಿದೆ, ಚಿತ್ರೀಕರಣ ಸೆಟ್ನಲ್ಲಿ ಒಂದು ದಿನ ನಾನು ಇನ್ನೊಬ್ಬ ಹುಡುಗನ ಮೇಲೆ ಬಹುಶಃ ನನ್ನ ಸೋದರ ಸಂಬಂಧಿ ಮೇಲೆ ಕೂಗಾಡಿದೆ. ನಿಖರವಾಗಿ ಗೊತ್ತಿಲ್ಲ. ನನ್ನ ಜೊತೆ ನೀನು ಆಡದಿದ್ದರೆ ನಿನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಲ್ಲ ಎಂಬ ಅರ್ಥ ಬರುವ ಹಾಗೆ ಏನೋ ಹೇಳಿದ್ದೆ. ಅಪ್ಪಾಜಿಗೆ ಸಿಕ್ಕಾಪಟ್ಟೆ ಕೋಪ ಬಂದು ನನ್ನ ಎಚ್ಚರಿಸಿದರು. ಮೊದಲ ಬೆಚ್ಚಿಬಿದ್ದರೂ ಅಮೇಲೆ ಜೋರಾಗಿ ಕಣ್ಣೀರು ಸುರಿಸುತ್ತಾ ಜೋರಾಗಿ ಅಳಲು ಶುರು ಮಾಡಿದೆ. ಬಳಿಕ ಅವರು ಇತರರು ನನ್ನನ್ನು ಅವಲಂಬಿಸಿದ್ದಾರೆ ಎಂದು ಅಂದುಕೊಳ್ಳುವುದು ತಪ್ಪು ಎಂದು ಹೇಳಿದರು. ಎಲ್ಲರೂ ತಮ್ಮ ಜೀವನ ನಡೆಸಲು ಯೋಗ್ಯರಾಗಿದ್ದು, ಅವರು ಎಲ್ಲಿಗೆ ಬೇಕೊ ಅಲ್ಲಿಗೆ ಹೋಗಲು ಸಮರ್ಥರಾಗಿರುತ್ತಾರೆ. ಯಾರ ಮೇಲಾದರೂ ಹಕ್ಕು ಚಲಾಯಿಸುವುದನ್ನು ಸಹಿಸಲಾಗುವುದಿಲ್ಲವೆಂದೂ ಹೇಳಿದರು. ಆ ಸಮಯದಲ್ಲಿ ಹೇಳಿಕೊಡಬೇಕಾಗಿದ್ದ ಪಾಠ ಅದು ಅಂತ ನನಗೆ ಇಂದು ಅನ್ನಿಸುತ್ತದೆ.
ಪುನೀತ್ ಹುಟ್ಟುಹಬ್ಬ: ಅಪ್ಪುಗೆ ಶುಭಕೋರಿದ ಕಿಚ್ಚ-ದಚ್ಚು
ಈ 2 ವಿಷಯಗಳಿಗೆ ಅಪ್ಪಾಜಿಗೆ ಅಭಿನಂದಿಸಬೇಕು
ಅವರ ಕೊನೆಯ ಮಗನಾಗಿ ನಾನು ಅಪ್ಪಾಜಿಯವರೊಡನೆ ಒಂದು ವಿಶೇಷ ಬಾಂಧವ್ಯ ಹೊಂದಿದ್ದೆ. ಅವರು ಸರಳ ಸತ್ಯಗಳನ್ನು ಅರ್ಥ ಮಾಡಿಕೊಂಡಿದ್ದ ರೀತಿ. ಇದರ ಪರಿಣಾಮದಿಂದ ನಾವು ಹೆಜ್ಜೆ ಇಡುವಾಗ ಎಚ್ಚರವಹಿಸೋದು ಖಂಡಿತವಾಯಿತು. ಅಪ್ಪಾಜಿಯನ್ನು ಎರಡು ವಿಷಯಗಳಿಗೆ ಅಭಿನಂದಿಸಬೇಕು. ಸ್ಪಷ್ಟವಾಗಿ ಗ್ರಹಿಸುವ ಶಕ್ತಿಗಾಗಿ ಹಾಗೂ ತಮಗೆ ಅರ್ಥವಾದದ್ದನ್ನು ಹಿಂಜರಿಯದೆ ರೂಢಿಸಿಕೊಳ್ಳುವ ಅವರ ಸಾಮರ್ಥ್ಯಕ್ಕಾಗಿ.
ಅಪ್ಪಾಜಿ ಅವರ ಕೆಲವು ಗುಣಗಳ ಬಗ್ಗೆ ಅಪ್ಪು ಹೇಳಿದ್ದೇನು?
ಅವರ ಕೆಲವು ಗುಣಗಳ ಬಗ್ಗೆ ಹೇಳುವುದಾದರೆ ಅವರು ಯಾರ ಬಗ್ಗೆಯೂ ಅಸೂಯೆಪಡ್ತಿರ್ಲಿಲ್ಲ. ಆತಂಕಪಡ್ತಿರ್ಲಿಲ್ಲ. ಯಾವಾಗಲೂ ಸಂತೋಷವಾಗಿ ಇರುತ್ತಿದ್ರು. ಯಾವುದರಿಂದನೂ ವಿಚಲಿತಗೊಳ್ಳುತ್ತಿರಲಿಲ್ಲ ಹಾಗೂ ಎಲ್ಲರನ್ನೂ ಸಮನಾಗಿ ಕಾಣ್ತಾ ಇದ್ರು. ಇವೆಲ್ಲವನ್ನು ಅದ್ಭುತವಾದ ಅನುಕರಣೆ ಮಾಡಲು ಕಷ್ಟವಾದ ಸದ್ಗುಣಗಳು.
ಹೆಸರಿಟ್ಟು ಕರೆಯದೆ 'ಕಂದಾ' ಎಂದೇ ಕರೆಯುತ್ತಿದ್ದರು
ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಅವರು 'ಬೆಟ್ಟು ತೋರಿ ನುಗ್ಗು ಮುಂದೆ' ಎಂದು ಸೂಚಿಸುತ್ತಿರುವ ಭಾವಚಿತ್ರವನ್ನು ನೋಡುತ್ತೇನೆ. ಅವರ ಬಗ್ಗೆ ನಾನು ಅತ್ಯಂತ ವಾತ್ಸಲ್ಯದಿಂದ ನೆನಪಿಸಿಕೊಳ್ಳುವ ವಿಷಯವೆಂದರೆ ಅವರು ನನ್ನನ್ನು ಹೆಸರಿಟ್ಟು ಕರೆಯದೆ ಕಂದಾ ಎಂದೇ ಕರೆಯುತ್ತಿದ್ದರು. ನನ್ನ ಮೇಲೆ ಅವರಿಗಿದ್ದ ಅಪಾರ ಮಮತೆಯನ್ನು ಇದು ಸೂಚಿಸುತ್ತಿತ್ತು. ನಾನು ಅವರೊಂದಿಗೆ ಕಳೆದ ಪ್ರತಿ ದಿನ, ಪ್ರತಿ ಕ್ಷಣ ನನ್ನ ಬದುಕಿಗೆ ಒಂದು ವಿಶೇಷ ಅರ್ಥ ನೀಡಿದೆ ಇನ್ನೂ ಇನ್ನೂ ನೀಡುತ್ತಿದೆ. ಅವರನ್ನು ತಂದೆಯಾಗಿ ನೋಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಬರೆದಿದ್ದಾರೆ.
This News Article Is A Copy Of FILMIBEAT
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am