ತಮಿಳು ನಾಡಿನ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ಖ್ಯಾತ ನಟಿ ಕತ್ರಿನಾ ಕೈಫ್

23-12-20 11:05 am       Source: FILMIBEAT Shruthi Gk   ಸಿನಿಮಾ

ಬಾಲಿವುಡ್ ನ ಸ್ಟಾರ್ ಕತ್ರಿನಾ ಕೈಫ್ ಸಿನಿಮಾಗಳ ಜೊತೆಗೆ ಈಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೋರಾಡುತ್ತಿದ್ದಾರೆ.

ಬಾಲಿವುಡ್ ನ ಸ್ಟಾರ್ ಕತ್ರಿನಾ ಕೈಫ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಈಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಹೋರಾಡುತ್ತಿದ್ದಾರೆ.

ಮಕ್ಕಳ ಶಿಕ್ಷಣಕ್ಕಾಗಿ ಕತ್ರಿನಾ ದೇಣಿಗೆ ಕೇಳುತ್ತಿದ್ದಾರೆ. ಎಲ್ಲರೂ ಮುಂದೆ ಬಂದು ತಮ್ಮ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕತ್ರಿನಾ ಕೈಫ್ ತಾಯಿ ತಮಿಳು ನಾಡಿನ ಮಧುರೈನಲ್ಲಿ ಶಾಲೆಯೊಂದನ್ನು ಕಟ್ಟಿಸಿದ್ದಾರೆ. ನಾಲ್ಕನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿದ್ದು, ಸುಮಾರು 200 ಮಕ್ಕಳು ಕಲಿಯುತ್ತಿದ್ದಾರೆ

ಹೆಚ್ಚಿನ ತರಗತಿಗಳನ್ನು ಆರಂಭಿಸಬೇಕು ಎಂಬ ಉದ್ದೇಶದೊಂದಿಗೆ ಕತ್ರಿನಾ ತನ್ನ ತಾಯಿ ಜೊತೆ ಕೈಜೋಡಿಸಿ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ಕತ್ರಿನಾ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಶಾಲೆಯ ಸ್ಥಿತಿಗತಿ ಹೇಗಿದೆೆ ಎನ್ನುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

'ತನ್ನ ತಾಯಿ ಕಟ್ಟಿಸಿದ ಈ ಶಾಲೆಯ ವಿಷಯವನ್ನು ನಿಮಗೆ ತಿಳಿಸಲು ಹೆಮ್ಮೆ ಎನಿಸುತ್ತಿದೆ. ಮಧಿರೈನಲ್ಲಿ ಇವರು ಈ ಮೌಂಟೇನ್ ವೀವ್ ಶಾಲೆಯ 2015ರಿಂದ ಅವಕಾಶ ವಂಚಿತ ಮಕ್ಕಳ ಉತ್ತಮ ಗುಣಮಟ್ಟದ ಇಂಗ್ಲಿಷ್ ಮೀಡಿಯಂ ಶಿಕ್ಷಣ ನೀಡುತ್ತಿದೆ. ನಾವೆಲ್ಲರೂ ನಮ್ಮ ಕೈಲಾದ ಸಹಾಯ ಮಾಡೋಣ. ಆ ಮೂಲಕ ಇನ್ನಷ್ಟು ಮಕ್ಕಳಿಗೆ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ' ಎಂದಿದ್ದಾರೆ. ಇನ್ನು ಕತ್ರಿನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಬಹು ಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇನ್ನೇನು ಬಿಡುಗಡೆಯಾಗಿದೆ. ಚಿತ್ರಕ್ಕೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಇನ್ನು ಫೋನ್ ಭೂತ್ ಎನ್ನುವ ಸಿನಿಮಾದಲ್ಲಿ ಕತ್ರಿನಾ ಕಾಣಿಸಿಕೊಳ್ಳುತ್ತಿದ್ದಾರೆ.

This News Article is a Copy of FILMIBEAT