ಬ್ರೇಕಿಂಗ್ ನ್ಯೂಸ್
20-12-22 03:23 pm Source: Vijayakarnataka ಸಿನಿಮಾ
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮುಖ್ಯಭೂಮಿಕೆಯಲ್ಲಿದ್ದ 'ಲೈಗರ್' ಸಿನಿಮಾವನ್ನು ನಿರ್ದೇಶಿಸಿದ್ದರು ಪೂರಿ ಜಗನ್ನಾಥ್. ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು ಕೂಡ. ಆದರೆ 'ಲೈಗರ್' ಹೀನಾಯ ಸೋಲು ಕಂಡಿತ್ತು. ನಿರ್ದೇಶನದ ಜೊತೆಗೆ ಸಿನಿಮಾಗೆ ಹಣವನ್ನೂ ಹಾಕಿದ್ದ ಪೂರಿ ಜಗನ್ನಾಥ್ ಆರ್ಥಿಕವಾಗಿಯೂ ದೊಡ್ಡ ನಷ್ಟ ಕಂಡರು. ಸದ್ಯ ಅವರ ಮುಂದಿನ ಸಿನಿಮಾ ಬಗ್ಗೆ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಬಾರಿ ಅವರು ಬಾಲಿವುಡ್ನ ಸೂಪರ್ ಸ್ಟಾರ್ ನಟನ ಮೇಲೆ ಕಣ್ಣಿಟ್ಟಿದ್ದಾರಂತೆ! ಹೌದು, ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಪೂರಿ ಜಗನ್ನಾಥ್ ಕಥೆ ಹೇಳಿದ್ದಾರೆ ಎನ್ನಲಾಗಿದೆ.
ಗ್ರೀನ್ ಸಿಗ್ನಲ್ ಕೊಡ್ತಾರಾ ಭಾಯ್?
ಸಲ್ಮಾನ್ಗೆ ಪೂರಿ ಜಗನ್ನಾಥ್ ಕಥೆ ಹೇಳಿದ್ದು, ಅವರು ಕೂಡ ಪಾಸಿಟಿವ್ ಆಗಿ ರೆಸ್ಪಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಕೂಡ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಂದಹಾಗೆ, ಪೂರಿ ಜಗನ್ನಾಥ್ ನಿರ್ದೇಶನದ 'ಪೊಕಿರಿ' ಸಿನಿಮಾವನ್ನು ಹಿಂದಿಯಲ್ಲಿ 'ವಾಂಟೆಡ್' ಹೆಸರಿನಲ್ಲಿ ಸಲ್ಮಾನ್ ಖಾನ್ ಅವರು ರಿಮೇಕ್ ಮಾಡಿದ್ದರು. ಆಗಿನಿಂದಲೂ ಸಲ್ಮಾನ್ ಖಾನ್ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಬರಲಿದ ಎಂಬ ಮಾತು ಕೇಳಿಬರುತ್ತಲೇ ಇತ್ತು. ಆದರೆ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ.
ಇನ್ನು, ಈಚೆಗೆ ಬಂದಿದ್ದ ಚಿರಂಜೀವಿ ನಟನೆಯ 'ಗಾಡ್ಫಾದರ್' ಸಿನಿಮಾದಲ್ಲಿ ಪತ್ರಕರ್ತನ ಪಾತ್ರದಲ್ಲಿ ಪೂರಿ ಜಗನ್ನಾಥ್ ಕಾಣಿಸಿಕೊಂಡಿದ್ದರೆ, ಅತಿಥಿ ಪಾತ್ರಕ್ಕೆ ಸಲ್ಮಾನ್ ಖಾನ್ ಅವರು ಬಣ್ಣ ಹಚ್ಚಿದ್ದರು. ಇದೀಗ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ಲರ್ ಆಗಿದ್ದಾರೆ. ಒಂದು ವೇಳೆ ಪೂರಿ ಜಗನ್ನಾಥ್ಗೆ ಸಲ್ಮಾನ್ ಕಾಲ್ಶೀಟ್ ನೀಡಿದ್ದೇ ಆದರೆ, ಲೈಗರ್ ಸೋಲಿನಿಂದ ಕಂಗೆಟ್ಟಿರುವ ಪೂರಿ ಜಗನ್ನಾಥ್ಗೆ ಇದರಿಂದ ಸಾಕಷ್ಟು ಅನುಕೂಲವಾಗುವುದಂತೂ ಖಚಿತ.
ದೊಡ್ಡ ಹೊಡೆತ ಕೊಟ್ಟ ಲೈಗರ್
ಬಾಲಿವುಡ್ ನಿರ್ಮಾಪಕರ ಜೊತೆ ಸೇರಿ ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ 'ಲೈಗರ್' ಸಿನಿಮಾದ ಮೇಲೆ 125 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದರು. ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಸಿನಿಮಾವನ್ನು ತೆರೆಗೆ ತಂದಿದ್ದರು. ಬಾಕ್ಸರ್ ಮೈಕ್ ಟೈಸನ್ ಈ ಸಿನಿಮಾದಲ್ಲಿ ನಟಿಸಿದ್ದು ಮತ್ತೊಂದು ವಿಶೇಷ. ಅದ್ದೂರಿಯಾಗಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲನ್ನು ಕಂಡಿತು. ವಿತರಕರನ್ನು ಕೂಡ ಸೋಲಿನ ಸುಳಿಗೆ ಸಿಲುಕಿಸಿತ್ತು. ಪೂರಿ ಜಗನ್ನಾಥ್ ವಿರುದ್ಧ ವಿತರಕರು ತಿರುಗಿಬಿದ್ದರು.
ಮತ್ತೊಂದೆಡೆ ಸಿನಿಮಾಗೆ ಹೂಡಿಕೆ ಮಾಡಿರುವ ಹಣದ ಕುರಿತು ಜಾರಿ ನಿರ್ದೇಶನಾಲಯದಿಂದಲೂ ಪೂರಿ ಜಗನ್ನಾಥ್ ಮತ್ತಿತರರಿಗೆ ನೋಟಿಸ್ ಕೂಡ ನೀಡಲಾಯ್ತು. ಈ ಸಂಬಂಧ ಇಡಿ ಅಧಿಕಾರಿಗಳ ಮುಂದೆಯೂ ಪೂರಿ ಜಗನ್ನಾಥ್ ಹಾಜರಾಗಿದ್ದರು. ಒಟ್ಟಾರೆ 'ಲೈಗರ್' ಸಿನಿಮಾದಿಂದಾಗಿ ಸಾಕಷ್ಟು ತೊಂದರೆಗಳಿಗೆ ಪೂರಿ ಜಗನ್ನಾಥ್ ಸಿಲುಕಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಸಲ್ಮಾನ್ ಜೊತೆ ಅವರು ಸಿನಿಮಾ ಮಾಡಿ ಗೆಲ್ಲಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.
Liger Director Puri Jagannadh Planning Big Movie With Bollywood Actor Salman Khan.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm