ಬ್ರೇಕಿಂಗ್ ನ್ಯೂಸ್
15-12-22 01:18 pm Source: Vijayakarnataka ಸಿನಿಮಾ
ನಟ 'ಲೂಸ್ ಮಾದ' ಯೋಗಿ ಈಚೆಗಷ್ಟೇ 'ಹೆಡ್ ಬುಷ್' ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದರು. ಇದೀಗ ಅವರು ಮತ್ತೊಂದು ಡಿಫರೆಂಟ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಶೀರ್ಷಿಕೆಯಿದಲೇ ಈ ಸಿನಿಮಾ ಗಮನಸೆಳೆಯುತ್ತಿದೆ. ಅಂದಹಾಗೆ, ಈ ಸಿನಿಮಾಗೆ 'ನಾನು, ಅದು ಮತ್ತು ಸರೋಜ' ಎಂದು ಟೈಟಲ್ ಇಡಲಾಗಿದೆ. ಕಂಟೆಂಟ್ ಒರಿಯಂಟೆಡ್ ಸಿನಿಮಾವಾಗಿದ್ದು, ಸದ್ಯ ಟ್ರೇಲರ್ ಲಾಂಚ್ ಮಾಡಲಾಗಿದ್ದು, ಇದೇ ಡಿ.30ಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದೆ.
'ನಾನು, ಅದು ಮತ್ತು ಸರೋಜ' ಬಗ್ಗೆ ಲೂಸ್ ಮಾದ ಹೇಳಿದ್ದೇನು?
ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ 'ಲೂಸ್ ಮಾದ' ಯೋಗಿ, 'ನನಗೆ ಈ ಸಿನಿಮಾದ ಕಥೆಯನ್ನು ನಿರ್ದೇಶಕ ವಿನಯ್ ಹೇಳಿದಾಗ ತುಂಬಾ ಇಷ್ಟವಾಯಿತು. ತಮಿಳಿನಲ್ಲಿ ನಟ ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆ ಇತ್ತು. ನಾನು ಒಂದೇ ತರಹದ ಸಿನಿಮಾ ಮಾಡುವುದಕ್ಕಿಂತ ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಈ ವರ್ಷದ ಕೊನೆಗೆ ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರ ಪ್ರೋತ್ಸಾಹ ನಮ್ಮ ಸಿನಿಮಾಗೆ ಬೇಕು' ಎಂದರು ಹೇಳಿದರು.
'ನಾನು, ಅದು ಮತ್ತು ಸರೋಜ' ಸಿನಿಮಾದಲ್ಲಿ ನಾಯಕಿಯಾಗಿ ನಟಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಂಡಿದ್ದಾರೆ. 'ಈ ಸಿನಿಮಾದಲ್ಲಿ ನನ್ನದು ಲೈಂಗಿಕ ಕಾರ್ಯಕರ್ತೆಯ ಪಾತ್ರ. ಸಾಮಾನ್ಯವಾಗಿ ಬೇರೆ ನಟಿಯರು ಈ ಪಾತ್ರ ಮಾಡಲು ಮುಜುಗರ ಪಡುತ್ತಾರೆ. ಅದೇ ರೀತಿ ನನಗೂ ಈ ಪಾತ್ರ ಮಾಡುವುದಕ್ಕೆ ಮೊದಲು ಸ್ವಲ್ಪ ಮುಜಗರ ಎನಿಸಿತು. ಆದರೆ ಪಾತ್ರವನ್ನು ಪಾತ್ರ ಎಂದು ತಿಳಿದು, ನಟಿಸಿದೆ. ಈ ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ. ಸಹಕಾರ ನೀಡಿದ ತಂಡಕ್ಕೆ ಧನ್ಯವಾದ' ಎಂದರು ನಟಿ ಅಪೂರ್ವ ಭಾರದ್ವಾಜ್ ಹೇಳುತ್ತಾರೆ.
ಈ ಹಿಂದೆ 'ಮಡಮಕ್ಕಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿನಯ್ ಪ್ರೀತಮ್ ಈಗ ನಾನು, ಅದು ಮತ್ತು ಸರೋಜ' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 'ನಾನು ಈ ಹಿಂದೆ 'ಮಡಮಕ್ಕಿ' ಚಿತ್ರವನ್ನು ನಿರ್ದೇಶಿಸಿದ್ದೆ. ಇದು ನನ್ನ ಎರಡನೇ ಚಿತ್ರ. 'ನಾನು, ಅದು ಮತ್ತು ಸರೋಜ' ಚಿತ್ರದ ಕಥೆ ಮೂರು ಪ್ರಮುಖ ಪಾತ್ರಗಳ ಸುತ್ತ ಸಾಗುತ್ತದೆ. ಲೂಸ್ ಮಾದ ಯೋಗಿ, ಹಿರಿಯ ನಟ ದತ್ತಣ್ಣ ಹಾಗೂ ಅಪೂರ್ವ ಭಾರದ್ವಾಜ್ ಆ ಮೂರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಎಂಬುದು ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ. ಅದೇನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ನಿರ್ಮಾಪಕಿ ಪೂಜಾ ವಸಂತಕುಮಾರ್ ಅವರಿಗೆ ಹಾಗೂ ಇಡೀ ನನ್ನ ತಂಡಕ್ಕೆ ಧನ್ಯವಾದ' ಎಂದರು ನಿರ್ದೇಶಕ ವಿನಯ್ ಪ್ರೀತಮ್.
ಲೂಸ್ ಮಾದ ಯೋಗಿ, ಹಿರಿಯ ನಟ ದತ್ತಣ್ಣ, ಅಪೂರ್ವ ಭಾರದ್ವಾಜ್ ಜೊತೆಗೆ ಸಂದೀಪ್, ಕುರಿ ಬಾಂಡ್ ರಂಗ, ಪ್ರವೀಣ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾಗೆ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೂಜಾ ವಸಂತಕುಮಾರ್ ಅವರು ಈ ಸಿನಿಮಾಗೆ ಹಣ ಹಾಕಿದ್ದಾರೆ.
Loose Mada Yogi Dattanna Apoorva Bharadwaj Starrer Nanu Adu Mattu Saroja Movie Trailer Released.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm