'ಸಲಾರ್' ಸಿನಿಮಾ ತಂಡ ಸೇರಿಕೊಂಡ 'ರತ್ನನ್ ಪ್ರಪಂಚ'ದ ಉಡಾಳ್ ಬಾಬು ಪ್ರಮೋದ್

19-11-22 12:08 pm       Source: Vijayakarnataka   ಸಿನಿಮಾ

ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಟ ಪ್ರಮೋದ್ ಅವರು ‘ಗೀತಾ ಬ್ಯಾಂಗಲ್‌ ಸ್ಟೋರ್ಸ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು.

ರತ್ನನ್‌ ಪ್ರಪಂಚ ಸಿನಿಮಾದಲ್ಲಿ ಉಡಾಳ್‌ ಬಾಬು ಪಾತ್ರದಲ್ಲಿ ನಟಿಸಿದ್ದ ಪ್ರಮೋದ್‌ ಸದ್ಯ ಸ್ಯಾಂಡಲ್‌ವುಡ್‌ನ ಬಿಝಿ ನಟರಲ್ಲಿ ಒಬ್ಬರು. ಈ ಪಾತ್ರ ಪ್ರಮೋದ್‌ ಅವರಿಗೆ ಬಿಗ್‌ ಬಜೆಟ್‌ ಸಿನಿಮಾವಾದ ‘ಸಲಾರ್‌’ ಚಿತ್ರದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಹೌದು, ಪ್ರಮೋದ್‌ ಈಗ ‘ಸಲಾರ್‌’ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್‌ ‘ಗೀತಾ ಬ್ಯಾಂಗಲ್‌ ಸ್ಟೋರ್ಸ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿಅದ್ಭುತವಾದ ಪಾತ್ರದಲ್ಲಿ ನಟಿಸಿದ್ದರು. ಈಗ ಅವರು ‘ಸಲಾರ್‌’ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Salaar: Prashanth Neel Brings Some Changes On Table To Make Prabhas'  Actioner More Powerful Than KGF Chapter 2?

‘ರತ್ನನ್‌ ಪ್ರಪಂಚ ಸಿನಿಮಾ ನೋಡಿ ಪ್ರಶಾಂತ್‌ ನೀಲ್‌ ಅವರು ಕರೆ ಮಾಡಿದ್ದರು. ನನ್ನ ನಟನೆಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಜತೆಗೆ ‘ಸಲಾರ್‌’ ಸಿನಿಮಾದಲ್ಲಿ ಒಂದು ಪಾತ್ರವಿದೆ ಎಂದು ಹೇಳಿದ್ದರು. ಇದಾಗಿ ಎಷ್ಟೋ ದಿನಗಳ ನಂತರ ಫೋಟೊ ಶೂಟ್‌ ಮುಗಿಸಿದೆ. ನನ್ನ ಪಾತ್ರದ ಬಗ್ಗೆ ಹೇಳಲಾಗುವುದಿಲ್ಲ, ಆದರೆ ಬಹಳ ವಿಭಿನ್ನವಾಗಿರುವ ಪಾತ್ರವದು. ನನ್ನ ನಟನೆ ಕಂಡು ನೀಲ್‌ ಅವರು ಖುಷಿಯಿಂದ ಬಹಳ ಚೆನ್ನಾಗಿ ನಟಿಸುತ್ತಿದ್ದೀರಾ ಎಂದರು. ಅಷ್ಟು ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಅದರಲ್ಲೂನನ್ನ ನಟನೆಯನ್ನು ಅವರು ಹೊಗಳುವುದೆಂದರೆ ನನಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ ಎನಿಸಿತು’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ನಟ ಪ್ರಮೋದ್‌.

Pramod to play a pivotal role in Prashanth Neel-Prabhas's Salaar?- Cinema  express

‘ಸಲಾರ್‌ ಜತೆಗೆ ನಾನು ನಾಯಕನಾಗಿರುವ ‘ಬಾಂಡ್‌ ರವಿ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ರಿಲೀಸ್‌ ದಿನಾಂಕವನ್ನು ಅನೌನ್ಸ್‌ ಮಾಡಲಿದ್ದೇವೆ. ಇದೊಂದು ಬಹಳ ಒಳ್ಳೆಯ ಕಥೆ ಇರುವಂತಹ ಪಾತ್ರ. ನಿರ್ದೇಶಕ ಪ್ರಜ್ವಲ್‌ ಅವರು ಕಥೆ ಬರೆದುಕೊಂಡಿರುವ ರೀತಿ, ಅದನ್ನು ತೆರೆಮೇಲೆ ತಂದಿರುವುದು ಎಲ್ಲವೂ ವಿಶೇಷವಾಗಿವೆ. ಕಥೆ ಕೇಳುವಾಗ ನನಗೆ ಏನು ಫೀಲ್‌ ಆಯಿತೋ ಅದು ಪ್ರೇಕ್ಷಕರಿಗೂ ಆಗುತ್ತದೆ ಎಂಬುದು ನನ್ನ ಅಚಲವಾದ ನಂಬಿಕೆ’ ಎನ್ನುವುದು ಪ್ರಮೋದ್‌ ಅವರ ಮಾತು.

‘ಸಲಾರ್‌’ನಲ್ಲಿ ಪ್ರಭಾಸ್‌ ಮತ್ತು ಪೃಥ್ವಿರಾಜ್‌ ಅವರ ಜತೆಯೇ ಇರುವಂತಹ ಪಾತ್ರದಲ್ಲಿ ಪ್ರಮೋದ್‌ ನಟಿಸಿದ್ದಾರೆ. ‘ರತ್ನನ್‌ ಪ್ರಪಂಚ’ ರೀತಿ ‘ಸಲಾರ್‌’ನಲ್ಲಿಯೂ ಅವರು ನಿರಂತರವಾಗಿ ಮಾತನಾಡುತ್ತಿರುತ್ತಾರಂತೆ. ಪ್ರಮೋದ್‌ ಅವರ ನಟನೆಯನ್ನು ಕಂಡು ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಪಾತ್ರವನ್ನು ಕೊಂಚ ವಿಸ್ತರಣೆ ಮಾಡಿದ್ದಾರಂತೆ. ಒಂದಷ್ಟು ಹೆಚ್ಚಿನ ಸಂಭಾಷಣೆಗಳನ್ನು ಬರೆದುಕೊಂಡಿದ್ದಾರಂತೆ.

Actor Pramod Joins Prashanth Neel And Prabhas Salaar Movie Team.