ಬ್ರೇಕಿಂಗ್ ನ್ಯೂಸ್
08-11-22 03:14 pm Source: Vijayakarnataka ಸಿನಿಮಾ
ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ 'ಕಂಬ್ಳಿಹುಳ' ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾ ನವೆಂಬರ್ 4ರಂದು ತೆರೆಕಂಡಿತ್ತು. ಇದೀಗ ಚಿತ್ರವನ್ನು ಮೆಚ್ಚಿಕೊಂಡಿರುವ ಸೆಲೆಬ್ರಿಟಿಗಳು, ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮಲೆನಾಡಿನ ಪ್ರೇಮಕಥೆಯೊಂದನ್ನು ತೆರೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟ ನವ ನಿರ್ದೇಶಕ ನವನ್ ಶ್ರೀನಿವಾಸ್ ಪ್ರರಿಶ್ರಮಕ್ಕೆ ಎಲ್ಲರೂ ಬಹುಪರಾಕ್ ಹೇಳುತ್ತಿದ್ದಾರೆ. ಜಯತೀರ್ಥ, ಧನಂಜಯ, ಯೋಗರಾಜ್ ಭಟ್ ಸೇರಿದಂತೆ ಅನೇಕರು ಚಿತ್ರತಂಡದ ಬೆಂಬಲ ನಿಂತಿದ್ದಾರೆ. ಜೊತೆಗೆ ಇದೀಗ ನಿರ್ದೇಶಕ ಸಿಂಪಲ್ ಸುನಿ ಅವರು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು, ಪ್ರೇಕ್ಷಕರಿಗೆ ಹೊಸ ಆಫರ್ವೊಂದನ್ನು ನೀಡಿದ್ದಾರೆ.
ಸಿನಿಮಾ ನೋಡಿ ಪೋಸ್ಟ್ ಹಾಕಿದ ಸುನಿ
ನಿರ್ದೇಶಕ ಸಿಂಪಲ್ ಸುನಿ ‘ಕಂಬ್ಳಿಹುಳ’ ಸಿನಿಮಾ ನೋಡಿ ಫಿಧಾ ಆಗಿದ್ದಾರೆ. ಸಿನಿಮಾವನ್ನು ನೋಡಿ ಹಾಡಿ ಹೊಗಳಿದ್ದಾರೆ. ಇಡೀ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದರ ಜೊತೆಗೆ 'ಕಂಬ್ಳಿಹುಳ' ಸಿನಿಮಾ ನೋಡಿ ಬರುವವರಿಗೆ ಆಫರ್ ಕೂಡ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಿಂಪಲ್ ಸುನಿ ಮನಸ್ಸಿಗೆ ಹಿಡಿಸಿದೆ. ಅಷ್ಟಕ್ಕೂ ಅವರು ನೀಡಿರುವ ಆಫರ್ ಏನು? 'ಕಂಬ್ಳಿಹುಳ ಸಿನಿಮಾ ಸೆಕೆಂಡ್ ಹಾಫ್ ಮುಗಿಸಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು, ಸಿನಿಮಾ ಚೆನ್ನಾಗಿಲ್ಲ ಅಂದ್ರೆ, ಅವರು ತೆಗೆದುಕೊಂಡ ಟಿಕೆಟ್ನ ಅರ್ಧಹಣವನ್ನು ವಾಪಸ್ ನೀಡುವುದಾಗಿ ಸುನಿ ಹೇಳಿದ್ದಾರೆ. ಈ ಆಫರ್ ಮುಂದಿನ ಮೂರು ದಿನಗಳು ಮಾತ್ರ ಲಭ್ಯವಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕೊಂಡಿದ್ದಾರೆ. ಸಿನಿಮಾ ಮೇಲೆ ಸಿಂಪಲ್ ಸುನಿ ತೋರಿಸಿರುವ ಪ್ರೀತಿ ಕಂಡು ಚಿತ್ರತಂಡ ಕೂಡ ಸಂತಸಗೊಂಡಿದೆ.
'ನನ್ನ ನಿರ್ದೇಶನ ತಂಡದ ಹುಡುಗರು ಈ ಚಿತ್ರ ನೋಡಿ, ನಾನು ನೋಡಲೇಬೇಕೆಂದರು. ಮೊದಲರ್ಧ ನೋಡುವಾಗ ಕನ್ಫ್ಯೂಸ್ ಆದರೂ ಸೆಕೆಂಡ್ ಹಾಫ್ನ ಚಿತ್ರಕಥೆಯಲ್ಲಿ ಒಂದೊಂದು ಶಾಟ್ಸ್ ಕೂಡ ಕನೆಕ್ಟ್ ಆಯಿತು. ಎದೆಭಾರ ಭಾವನೆಗಳ ತೊಳಲಾಟ, ಕೊನೆಗೆ ಪಾತ್ರಗಳ ಕ್ಲೋಸರ್ ಅದ್ಭುತವಾಗಿತ್ತು. ಒಂದೊಳ್ಳೆ ಚಿತ್ರ ನೋಡಿದ ಸಂತೃಪ್ತಿ ನಿಮ್ಮನ್ನು ತಲುಪಲಿ.. ಚಿತ್ರ ನೋಡಿ ಹಾರೈಸಿ' ಎಂದು ಸುನಿ ಹೇಳಿದ್ದಾರೆ.
'ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಈಗಾಗಲೇ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಳ್ಳುತ್ತಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದರಲ್ಲೇ ಅರ್ಥ ಮಾಡಿಕೊಳ್ಳಬೇಕು ಸಿನಿಮಾ ಅದೆಷ್ಟು ಚೆನ್ನಾಗಿದೆ ಅನ್ನೋದು. ಚಿತ್ರದ ಬಗೆಗೆ ಎಲ್ಲರೂ ತೋರಿಸುತ್ತಿರುವ ಪ್ರೀತಿ, ಸಪೋರ್ಟ್ ಕಂಡು ಸಂತಸವಾಗಿದೆ' ಎಂದು ಸಿನಿಮಾ ತಂಡ ಹೇಳಿಕೊಂಡಿದೆ.
'ಕಂಬ್ಳಿಹುಳ' ಸಿನಿಮಾಕ್ಕೆ ಹೊಸ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕಿರುಚಿತ್ರಗಳನ್ನು ಮಾಡಿ ಜನಪ್ರಿಯರಾಗಿದ್ದ ನವನ್, ಈಗ ಪೂರ್ಣಪ್ರಮಾಣದ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ ಮಾಡಿದ್ದಾರೆ. ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಅವರು ಸಂಕಲನ ನಿಭಾಯಿಸಿದ್ದಾರೆ. ‘ಕಂಬ್ಳಿಹುಳ’ ಚಿತ್ರಕ್ಕೆ ಶಿವ ಪ್ರಸಾದ್ ಸಂಗೀತ ನಿರ್ದೇಶನವಿದೆ. ಈ ಚಿತ್ರದ 'ಜಾರಿಬಿದ್ದರೂ..' ಹಾಡು ಸಖತ್ ಹಿಟ್ ಆಗಿದೆ.
Director Simple Suni Says If You Dont Like Kamblihula Movie I Will Give Back Ticket Price Amount.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm