ಬ್ರೇಕಿಂಗ್ ನ್ಯೂಸ್
02-11-22 12:38 pm Source: Vijayakarnataka ಸಿನಿಮಾ
ಈ ವರ್ಷ ಕನ್ನಡದ ಹಲವು ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನು ಎತ್ತಿ ಹಿಡಿದಿವೆ.ಭಾರತೀಯ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ಪರಿಣಾಮಕಾರಿ ಸಿನಿಮಾಗಳನ್ನು ಮಾಡುವುದಿಲ್ಲ ಎಂಬ ಅಭಿಪ್ರಾಯವಿತ್ತು. ಆಗಾಗ ಎಲ್ಲರೂ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೆಲ ನಿರ್ದೇಶಕರು ಮಾಡುತ್ತಿದ್ದರಾದರೂ ಮಲಯಾಳಂ, ತಮಿಳು ಚಿತ್ರರಂಗಗಳಿಗಿಂತಲೂ ಕೊನೆ ಎಂಬ ಭಾವನೆ ಇತ್ತೀಚೆಗೆ ಸೃಷ್ಟಿಯಾಗಿತ್ತು.ಅಲ್ಲದೆ ಕನ್ನಡ ಸಿನಿಮಾಗಳೆಂದರೆ ಬಾಲಿವುಡ್ ಮಂದಿ ಮೂಗು ಮುರಿಯುತ್ತಿದ್ದರು. ಇಲ್ಲಿಅದ್ಭುತ ಕಲಾವಿದರಿದ್ದಾರೆ, ಆದರೆ ಕಥೆಗಳಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಈ ವರ್ಷ ಆ ಅಭಿಪ್ರಾಯ ಭಾಗಶಃ ಬದಲಾಗಿದೆ. ಕನ್ನಡದಲ್ಲಿಯೂ ಅದ್ಭುತ ಕಥೆಗಳಿವೆ, ಇಡೀ ದೇಶ ಮೆಚ್ಚುವಂತಹ ಸಿನಿಮಾಗಳನ್ನು ಈ ನೆಲದ ನಿರ್ದೇಶಕರು ಮಾಡುತ್ತಾರೆ ಎನ್ನುತ್ತಿದ್ದಾರೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಮಂದಿ.
ಆರಂಭವೇ ಅದ್ಭುತ
2022ರ ಆರಂಭದಿಂದಲೂ ನಾಲ್ಕೈದು ಸಿನಿಮಾಗಳು ಮಾಡಿದ ಮೋಡಿ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ. ‘ಲವ್ ಮಾಕ್ಟೇಲ್-2’ ಸಿನಿಮಾ ಭರ್ಜರಿ ಯಶಸ್ವಿಯಾಯಿತು. ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಸಿನಿಮಾವನ್ನು ಈಗಾಗಲೇ ತೆಲುಗು, ತಮಿಳು, ಹಿಂದಿಗೆ ರಿಮೇಕ್ ಹಕ್ಕುಗಳು ಮಾರಾಟವಾಗಿವೆ. ಆಮೇಲೆ ಬಂದ ಸುನಾಮಿಯೆಂದರೆ ‘ಕೆಜಿಎಫ್ ಚಾಪ್ಟರ್-2’ ಕನ್ನಡದ ಹೀರೊ, ಕನ್ನಡದ ನಿರ್ಮಾಣ ಸಂಸ್ಥೆ, ಕನ್ನಡದ ನಿರ್ದೇಶಕ, ಕನ್ನಡದ ತಂತ್ರಜ್ಞರು ಕೆಲಸ ಮಾಡಿದ್ದ ಈ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದು ಸಾರ್ವಕಾಲಿಕ ದಾಖಲೆ. ಭಾರತದ ಎಲ್ಲಾ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಯಿತು. ವಿಶ್ವದ ಬೇರೆ ಬೇರೆ ದೇಶಗಳಲ್ಲಿಯೂ ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನ ಕಂಡಿತು. ಎಲ್ಲಾಕಡೆಯೂ ಕನ್ನಡದ ಭಾವುಟವನ್ನು ಕೆಜಿಎಫ್ ತಂಡ ರಾರಾಜಿಸುವಂತೆ ಮಾಡಿ ಕನ್ನಡಿಗರ ಹೆಮ್ಮ ಪಡುವಂತೆ ಆಯಿತು.
‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಯಶಸ್ಸಿನ ನಂತರ ಒಂದಷ್ಟು ಸಿನಿಮಾಗಳು ಬಿಡುಗಡೆಯಾದವು. ರಕ್ಷಿತ್ ಶೆಟ್ಟಿಯವರ ‘777 ಚಾರ್ಲಿ’ ಸಿನಿಮಾದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗ ಗಮನ ಸೆಳೆಯಿತು. ಈ ಸಿನಿಮಾ ಎಲ್ಲಾ ಭಾಷೆಗಳಲ್ಲಿಯೂ ಬಿಡುಗಡೆಯಾಗಿ ಗಮನ ಸೆಳೆಯಿತು. ಹಲವು ಚಿತ್ರರಂಗಗಳ ಸ್ಟಾರ್ಗಳು ಈ ಸಿನಿಮಾವನ್ನು ಮೆಚ್ಚಿಕೊಂಡರು. ನಟ ರಕ್ಷಿತ್ ಶೆಟ್ಟಿಯವರೇ ಅನೌನ್ಸ್ ಮಾಡಿಕೊಂಡಂತೆ ಚಾರ್ಲಿ ನೂರು ಕೋಟಿ ರೂಪಾಯಿ ಗಳಿಕೆ ಮಾಡಿತು. ಇದಾದ ಮೇಲೆ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಬಿಡುಗಡೆಯಾಯಿತು. ಈ ಸಿನಿಮಾ ಎಲ್ಲಾಭಾಷೆಯಲ್ಲಿಯೂ ದೊಡ್ಡ ಹೈಪ್ ಸೃಷ್ಟಿ ಮಾಡಿಕೊಂಡಿತ್ತು. ಸಲ್ಮಾನ್ ಖಾನ್ ಹಿಂದಿಯಲ್ಲಿಇದನ್ನು ವಿತರಣೆ ಮಾಡಿದರು. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡಿ ಗಮನ ಸೆಳೆಯಿತು.
ಕಾಂತಾರದ ಸಂಚಲನ
‘ಕಾಂತಾರ’ ಸಿನಿಮಾ ಮತ್ತೊಮ್ಮೆ ಕನ್ನಡ ಚಿತ್ರರಂಗದತ್ತ ಎಲ್ಲರೂ ಅಚ್ಚರಿಯಿಂದ ನೋಡುವಂತೆ ಮಾಡಿತು. ಇದೊಂದು ಪ್ರಾದೇಶಿಕ ಕಥೆ, ಇದನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿತ್ತು. ಅದರಂತೆ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆ ನಂತರ ಜನ ಈ ಸಿನಿಮಾಗೆ ತೋರಿಸಿದ ಪ್ರತಿಕ್ರಿಯೆ ಕಂಡು ನಿರ್ಮಾಣ ಸಂಸ್ಥೆ ಇದನ್ನು ಎಲ್ಲಾ ಭಾಷೆಗಳಿಗೂ ವಿಸ್ತರಣೆ ಮಾಡಿತು. ಇದರಿಂದ ಪ್ರತಿ ಭಾಷೆಯಲ್ಲಿಯೂ ಸಿನಿಮಾ ಸೂಪರ್ ಹಿಟ್ ಆಗುವುದಲ್ಲದೆ, ಹಿಂದಿ ಭಾಷೆಯಿಂದ ಏನಿಲ್ಲವೆಂದರೂ 50 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಮಾಡುತ್ತದೆ ಎನ್ನಲಾಗುತ್ತಿದೆ. ತಮಿಳು, ತೆಲುಗು, ಮಲಯಾಳಂನಲ್ಲಿಯೂ ಸಿನಿಮಾ ಸೂಪರ್ ಹಿಟ್ ಆಗಿದೆ.
ತೆಲುಗು, ತಮಿಳು, ಹಿಂದಿಯ ನಿರ್ಮಾಪಕರು, ನಿರ್ದೇಶಕರು ಒಳ್ಳೆ ಕಥೆ ಇದ್ದರೆ ಕನ್ನಡದಲ್ಲಿ ಸಿಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ನಮ್ಮ ಸಿನಿಮಾಗಳು ಸದ್ದು ಮಾಡುತ್ತಿವೆ. ಒಂದು ಕಾಲದಲ್ಲಿಪರಭಾಷಾ ಸಿನಿಮಾಗಳಿಗೆ ಚಿತ್ರಮಂದಿರಗಳನ್ನು ಹೆಚ್ಚಾಗಿ ಕೊಟ್ಟಿದ್ದಾರೆ. ನಮ್ಮ ಸಿನಿಮಾಗೆ ಚಿತ್ರಮಂದಿರಗಳಿಲ್ಲ ಎಂಬ ಮಾತಿತ್ತು. ಈಗ ಎಲ್ಲಾ ಕಡೆಯೂ ಕನ್ನಡ ಸಿನಿಮಾಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಿದೆ. ಕನ್ನಡ ರಾಜ್ಯೋತ್ಸವದ ಸಮಯದಲ್ಲಿಇಂತಹದ್ದೊಂದು ಖುಷಿಯ ವಿಚಾರ ಕನ್ನಡ ಸಿನಿ ಪ್ರೇಕ್ಷಕರಿಗೆ ಹೆಮ್ಮೆಯ ವಿಷಯ.
Kannada Super Hit Movies 2022 List 777 Charlie Kgf 2 Kantara Movie.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm