ಬ್ರೇಕಿಂಗ್ ನ್ಯೂಸ್
31-10-22 02:31 pm Source: Vijayakarnataka ಸಿನಿಮಾ
ನಟಿ ಸಮಂತಾ ಅವರು ಅಭಿಮಾನಿಗಳು ಖುಷಿಪಡುವಂತಹ ಸುದ್ದಿಯೊಂದು ಈಚೆಗಷ್ಟೇ ಕೇಳಿಬಂದಿತ್ತು. ಅದೇನೆಂದರೆ, ಅವರ ಮುಂದಿನ 'ಯಶೋದಾ' ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಸಿನಿಮಾದ ಟ್ರೇಲರ್ ಎಲ್ಲರಿಗೂ ಇಷ್ಟವಾಗಿತ್ತು. ಒಳ್ಳೆಯ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿತ್ತು. ಆದರೆ ಈಗ ಅವರ ಅಭಿಮಾನಿಗಳು ಬೇಸರಗೊಳ್ಳುವಂತಹ ಸುದ್ದಿಯೊಂದು ಕೇಳಿಬಂದಿದೆ. ಅದೇನೆಂದರೆ, ಸಮಂತಾ ಅವರು ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರ ಹೆಸರು ಮಯೋಸೈಟಿಸ್! ಈ ಬಗ್ಗೆ ಸ್ವತಃ ಸಮಂತಾ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಸಮಂತಾ ಹೇಳಿದ್ದೇನು?
'ಯಶೋದಾ' ಸಿನಿಮಾದ ಟ್ರೇಲರ್ ಹಿಟ್ ಆಗಿದ್ದರ ಹಿನ್ನೆಲೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿರುವ ಸಮಂತಾ, 'ನಮ್ಮ ಯಶೋದಾ ಚಿತ್ರದ ಟ್ರೇಲರ್ಗೆ ನೀವು ನೀಡಿದಂತಹ ಪ್ರತಿಕ್ರಿಯೆ ನೋಡಿ ಬಹಳ ಖುಷಿ ಆಗಿದೆ. ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನನಗೆ ನಿಮ್ಮ ಪ್ರೀತಿ ನೀಡಿದೆ. ಕೆಲ ತಿಂಗಳ ಹಿಂದೆಯಷ್ಟೇ ನನಗೆ ಮಯೋಸೈಟಿಸ್ (Myositis) ಎಂಬ ಕಾಯಿಲೆ ಇರುವುದು ಗೊತ್ತಾಯಿತು. ಇದರಿಂದ ವಾಸಿಯಾದ ಮೇಲೆಯೇ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ನಾನು ಅಂದುಕೊಂಡಿದ್ದೆ. ಆದರೆ ಈ ಸಮಸ್ಯೆ ವಾಸಿಯಾಗಲು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ.. ಆದರೆ ಶೀಘ್ರದಲ್ಲೇ ನಾನು ಸಂಪೂರ್ಣವಾಗಿ ಇದರಿಂದ ಗುಣವಾಗುವೆ ಎಂದು ವೈದ್ಯರು ನನಗೆ ಭರವಸೆ ನೀಡಿದ್ದಾರೆ' ಎಂದು ಸಮಂತಾ ಹೇಳಿಕೊಂಡಿದ್ದಾರೆ.
'ನನ್ನ ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಇದ್ದವು. ಇದನ್ನು ನನ್ನಿಂದ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳೂ ಕೂಡ ಕಳೆದು ಹೋಗಿವೆ. ಈಗ ಈ ಸಮಸ್ಯೆಯಿಂದ ಬೇಗನೇ ಚೇತರಿಸಿಕೊಳ್ಳುತ್ತೇನೆ ಎಂದು ಅನಿಸುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ.. ಈ ಕಠಿಣ ಸಮಯ ಕೂಡ ಕಳೆದು ಹೋಗುತ್ತದೆ..' ಎಂದು ಸಮಂತಾ ಹೇಳಿಕೊಂಡಿದ್ದಾರೆ. ಮಯೋಸೈಟಿಸ್ನಿಂದ ಆಯಾಸ, ಸ್ನಾಯು ನೋವು, ಉಸಿರಾಟದ ಸಮಸ್ಯೆ, ತಿನ್ನಲು ಮತ್ತು ಕುಡಿಯಲು ತೊಂದರೆ ಆಗುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.
— Samantha (@Samanthaprabhu2) October 29, 2022
ಬೇಗ ಹುಷಾರಾಗಿ ಎಂದು ಸಿನಿತಾರೆಯರು
ನಟ ಚಿರಂಜೀವಿ ಅವರು ಸಮಂತಾಗೆ ಒಂದು ಪತ್ರ ಬರೆದಿದ್ದು, 'ನೀವು ಅದ್ಭುತವಾದ ಹುಡುಗಿ.. ನೀನು ಇದರಿಂದ ಆಚೆ ಬರುವೆ.. ನಿನಗೆ ಆ ಶಕ್ತಿ ಇದೆ..' ಎಂದು ಹೇಳಿದ್ದಾರೆ. ಇನ್ನು, ಜೂನಿಯರ್ ಎನ್ಟಿಆರ್, ರಾಮ್ ಪೋತಿನೇನಿ, ಸಾಯಿ ಪಲ್ಲವಿ, ಅಡಿವಿ ಶೇಷ್, ಸಾಯೇಷಾ, ಸಂದೀಪ್ ಕಿಶನ್, ಸಾಯಿ ಧರಮ್ ತೇಜ್, ದುಲ್ಖಾರ್ ಸಲ್ಮಾನ್, ಸುಶಾಂತ್ ಸೇರಿದಂತೆ ಅನೇಕರು ಸಮಂತಾಗೆ ಬೇಗ ಗುಣವಾಗುವಂತೆ ಹಾರೈಸಿದ್ದಾರೆ.
Wishing you speedy recovery!!@Samanthaprabhu2 pic.twitter.com/ZWGUv767VD
— Chiranjeevi Konidela (@KChiruTweets) October 30, 2022
ಅಕ್ಟೋಬರ್ 27ರಂದು ಸಮಂತಾ ನಟನೆಯ 'ಯಶೋದಾ' ಚಿತ್ರದ 5 ಭಾಷೆಗಳ ಟ್ರೇಲರ್ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡದ ಅವತರಣಿಕೆಯನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದರೆ, ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಹಿಂದಿಯಲ್ಲಿ ವರುಣ್ ಧವನ್ ಬಿಡುಗಡೆ ಮಾಡಿದ್ದಾರೆ. ಹರಿ-ಹರೀಶ್ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರವು ನವೆಂಬರ್ 11ಕ್ಕೆ ತೆರೆಗೆ ಬರಲಿದೆ.
Yashoda Movie Actress Samantha Reveals She Has Been Diagnosed With An Autoimmune Condition Called Myositis.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm