ಬ್ರೇಕಿಂಗ್ ನ್ಯೂಸ್
10-10-22 02:29 pm Source: Vijayakarnataka ಸಿನಿಮಾ
'ಕೆಜಿಎಫ್' ಸಿನಿಮಾ ನಂತರದಲ್ಲಿ ಪರಭಾಷೆಯ ಚಿತ್ರರಂಗವು ಕನ್ನಡದತ್ತ ತಿರುಗಿ ನೋಡಲು ಶುರುಮಾಡಿತು. ಈಗಂತೂ ಒಂದಾದ ಮೇಲೆ ಒಂದರಂತೆ ಕಂಟೆಂಟ್ ಆಧಾರಿತ ಚಿತ್ರಗಳು ಬರಲು ಆರಂಭಿಸಿವೆ. ಕರ್ನಾಟಕ ನೆಲದಲ್ಲಿ ಬೆಂಗಳೂರಿನಲ್ಲಿ ನಡೆದ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ( 67th Parle Filmfare Awards South 2022 ) ಕನ್ನಡ ಚಿತ್ರರಂಗದ ಬಗ್ಗೆ ತೆಲುಗು ನಟ ನಾನಿ ( Nani ) ಮಾತನಾಡಿದ್ದಾರೆ.
ನಾನಿ ಕನ್ನಡ ಚಿತ್ರರಂಗದ ಬಗ್ಗೆ ಆಡಿರುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ನಾನಿ ಏನು ಮಾತನಾಡಿಬರಬಹುದು ಎಂಬ ಕುತೂಹಲ ಕೆಲವರಿಗೆ ಇರಬಹುದು
"ಯಪ್ಪಾ.. ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತಿದ್ದೀರಪ್ಪ.. ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತ ಮಾತನಾಡುತ್ತಿದೆ. ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಕೇಳಿದೆ, ಸಖತ್ ಆಗಿದ್ದೆಯಂತೆ. ಎಲ್ಲಿ ಹೋದರೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ. ತುಂಬ ಹೆಮ್ಮೆಯಾಗುತ್ತಿದೆ" ಎಂದು ನಾನಿ ಹೇಳಿದ್ದಾರೆ.
ಷಬ್ ಶೆಟ್ಟಿ ನಿರ್ದೇಶನದ, ನಟನೆಯ 'ಕಾಂತಾರ' ಸಿನಿಮಾ ರಿಲೀಸ್ ಆಗಿ ವಾರಗಳೇ ಉರುಳಿದರೂ ಕೂಡ ವೀಕೆಂಡ್ನಲ್ಲಿ ಕೂಡ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಸಿಕ್ಕ ಅಮೋಘವಾದ ಪ್ರತಿಕ್ರಿಯೆ ಕಂಡು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಪರಭಾಷೆಯಲ್ಲಿ ಕೂಡ ಈ ಸಿನಿಮಾ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದೆ.
'ಕೆಜಿಎಫ್ 2', '777 ಚಾರ್ಲಿ', 'ಕಾಂತಾರ', 'ಗರುಡ ಗಮನ ವೃಷಭ ವಾಹನ' ಸಿನಿಮಾಗಳು ದೊಡ್ಡ ಮಟ್ಟದ ಮೆಚ್ಚುಗೆ ಪಡೆದಿವೆ. ಕನ್ನಡದ ನಟರಿಗೆ ಪರಭಾಷೆಯಲ್ಲಿಯೂ ಕೂಡ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿಯಾಗಿದೆ. ಕೆಜಿಎಫ್ ಸಿನಿಮಾ ಮೂಲಕ ನಟ ರಾಕಿಂಗ್ ಸ್ಟಾರ್ ಯಶ್ ಅವರು ನ್ಯಾಶನಲ್ ಸ್ಟಾರ್ ಆಗಿ ಹೊರಹೊಮ್ಮಿದರು, ಪ್ರಶಾಂತ್ ನೀಲ್ ಅವರು ದಕ್ಷಿಣ ಭಾರತದ ಮೇರು ನಟರ ಜೊತೆ ಕೆಲಸ ಮಾಡುವ ಅವಕಾಶ ಪಡೆದರು. ಇನ್ನು ಹೊಂಬಾಳೆ ಫಿಲ್ಮ್ಸ್ ಭಾರತ ಚಿತ್ರರಂಗದ ದಿಗ್ಗಜ ನಟರ ಜೊತೆ ಸಿನಿಮಾ ಮಾಡಲು ತಯಾರಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಕೆಜಿಎಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಯಶ್ ಅವರ ಮುಂದೆ ತೆಲುಗು ನಿರ್ಮಾಪಕ ದಿಲ್ರಾಜು ಮಾತನಾಡಿ, "ಕನ್ನಡ ಚಿತ್ರರಂಗ ಚಿಕ್ಕದು, ಅಲ್ಲಿ ಕಡಿಮೆ ಬಜೆಟ್ನಲ್ಲಿ ತಯಾರಾಗುವ ಸಿನಿಮಾಗಳು ಹಣ ಕೂಡ ಮಾಡೋದಿಲ್ಲ ಎಂದು ನಾವು ತಿಳಿದಿದ್ದೆವು. ಆದರೆ ಯಶ್, ಪ್ರಶಾಂತ್ ನೀಲ್ ಅವರ ಕೆಜಿಎಫ್ ತಂಡ ಮಾತ್ರ ಎಲ್ಲ ಚಿತ್ರರಂಗಗಳು ಕೂಡ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತು" ಎಂದು ಹೇಳಿದ್ದರು. ಅದಕ್ಕೆ ಉತ್ತರ ನೀಡಿದ್ದ ಯಶ್ ಅವರು, "ದಿಲ್ರಾಜು ಅವರು ನಮ್ಮ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಚಿತ್ರರಂಗದವರು ತುಂಬ ಕಷ್ಟಪಡುತ್ತಿದ್ದಾರೆ, ಅದ್ಭುತ ಸಿನಿಮಾ ಕೂಡ ಮಾಡುತ್ತಿದ್ದಾರೆ. ಸಿನಿಮಾ ಮಾಡಿದ್ದಾರೆ ಕೂಡ. ನಮ್ಮ ಸಿನಿಮಾಗಳು 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿದೆ. ಇದು ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಉತ್ತರ ನೀಡಿದ್ದರು.
ಕೆಜಿಎಫ್ ನಂತರ ಕನ್ನಡ ಚಿತ್ರರಂಗದತ್ತ ಎಲ್ಲರೂ ತಿರುಗಿ ನೋಡುತ್ತಿದ್ದಾರೆ ಎಂಬ ಮಾತು ಬಂದಾಗ ಉತ್ತರ ನೀಡಿದ್ದ ಕಿಚ್ಚ ಸುದೀಪ್, "ದೇವಸ್ಥಾನದ ಬಗ್ಗೆ ನಿಮಗೆ ತಡವಾಗಿ ಗೊತ್ತಾಗಿದೆ" ಎಂದು ಕನ್ನಡ ಚಿತ್ರರಂಗವನ್ನು ದೇವಸ್ಥಾನಕ್ಕೆ ಹೋಲಿಸಿ ಉತ್ತರ ನೀಡಿದ್ದರು.
67th Parle Filmfare Awards South 2022 Nani Appreciate Kannada Movies.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm