ಬ್ರೇಕಿಂಗ್ ನ್ಯೂಸ್
07-09-22 12:51 pm Source: Vijayakarnataka ಸಿನಿಮಾ
ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್ 1' ಸಿನಿಮಾವು ಇದೆ ಸೆ.30ರಂದು ಅದ್ದೂರಿಯಾಗಿ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ಅದಕ್ಕಾಗಿ ಸೆ.6ರಂದು ಅದ್ದೂರಿ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 'ಸೂಪರ್ ಸ್ಟಾರ್' ರಜನಿಕಾಂತ್ ಮತ್ತು ಕಮಲ್ ಹಾಸನ್ ಕೂಡ ಆಗಮಿಸಿದ್ದರು. ಈ ವೇಳೆ ಒಂದು ಇಂಟರೆಸ್ಟಿಂಗ್ ವಿಚಾರವನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರಿಗೂ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ನಟಿಸುವ ಆಸೆ ಇತ್ತಂತೆ. ಆದರೆ ಅದು ಈಡೇರದೇ ಇರಲು ಮಣಿರತ್ನಂ ಕಾರಣ ಎಂಬ ವಿಚಾರ ಬಹಿರಂಗವಾಗಿದೆ.
ನಾನು ನಟಿಸಬೇಕು ಎಂದುಕೊಂಡಿದ್ದೆ...
'ನಾನು ಕೂಡ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಭಾಗವಾಗಬೇಕು ಎಂದುಕೊಂಡಿದ್ದೆ. ಮಣಿರತ್ನಂ ಅವರಿಗೆ ಪೆರಿಯಾ ಪಳುವೆಟ್ಟರೈಯಾರ್ ಪಾತ್ರವನ್ನು ನನಗೆ ಕೊಡುವಂತೆ ಕೇಳಿದ್ದೆ. ನಾನು ಅತಿಥಿ ಪಾತ್ರವನ್ನು ಮಾಡುವೆ ಎಂದಿದ್ದೆ. ಅದಕ್ಕೆ ಮಣಿರತ್ನಂ, 'ನಿಮ್ಮ ಅಭಿಮಾನಿಗಳಿಂದ ನನಗೆ ಛಿಮಾರಿ ಹಾಕಿಸಬೇಕೆಂದು ನಿರ್ಧರಿಸಿದ್ದೀರಾ..' ಎಂದು ಕೇಳಿದರು. ಬೇರೆ ಯಾರಾದರೂ ಆಗಿದ್ದರೆ, ನಾನು ಕೇಳಿದ ಕೂಡ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ಮಣಿ ಆ ರೀತಿ ಮಾಡಲಿಲ್ಲ. ಅದು ಮಣಿರತ್ನಂ ಅಂದ್ರೆ..' ಎಂದು ಹೊಗಳಿದ್ದಾರ ರಜನಿಕಾಂತ್. ಅಂದಹಾಗೆ, 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ಪೆರಿಯಾ ಪಳುವೆಟ್ಟರೈಯಾರ್ ಪಾತ್ರವನ್ನು ಆರ್. ಶರತ್ಕುಮಾರ್ ಮಾಡಿದ್ದಾರೆ.

ಅರುಲ್ಮೋಳಿ ವರ್ಮನ್ ಪಾತ್ರವನ್ನು ಕಮಲ್ ಮಾಡಬೇಕು
ಈ ಚಿತ್ರದ ಪಾತ್ರಗಳ ಬಗ್ಗೆ ಮಾತನಾಡಿರುವ ರಜನಿಕಾಂತ್, 'ನಾನು ಮೊದಲ ಬಾರಿಗೆ ಈ ಕಥೆಯನ್ನು ಓದಿದಾಗ, ಅರುಲ್ಮೋಳಿ ವರ್ಮನ್ ಪಾತ್ರವನ್ನು ಕಮಲ್ ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆ. ಕುಂದವೈ ಪಾತ್ರವನ್ನು ಶ್ರೀದೇವಿ, ಆದಿತ್ಯ ಕರಿಕಾಲನ್ ಪಾತ್ರವನ್ನು ವಿಜಯ್ಕಾಂತ್, ಪಳುವೆಟ್ಟರೈಯಾರ್ ಪಾತ್ರವನ್ನು ಸತ್ಯರಾಜ್ ಮಾಡಿದರೆ ಚೆನ್ನಾಗಿರುತ್ತದೆ ಅಂತ ಅಂದುಕೊಂಡಿದ್ದೆ. ಒಮ್ಮೆ ಮ್ಯಾಗಜೀನ್ವೊಂದರಲ್ಲಿ ಸಂದರ್ಶನ ನೀಡಿದ್ದ ಜೆ. ಜಯಲಲಿತಾ ಅವರು, ವಂದಿಯಾದೇವನ್ ಪಾತ್ರವನ್ನು ರಜನಿಕಾಂತ್ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದರು. ನಾನು ಆಗ ತುಂಬ ಖುಷಿ ಪಟ್ಟಿದ್ದೆ. ಆಗ ನಾನು ಆ ಪುಸ್ತಕವನ್ನು ಓದಿದ್ದೆ. ನಂತರ ನಾನು ಕಲ್ಕಿ ಅವರ ಮನೆಗೆ ಹೋಗಿ, ಅವರ ಪಾದಗಳಿಗೆ ನಮಸ್ಕಾರ ಮಾಡಿದ್ದೆ. ಎಂಥ ಅದ್ಭುತ ಕಥೆ ಇದು! 'ಪೊನ್ನಿಯಿನ್ ಸೆಲ್ವನ್' ಎಂದರೆ ಬರೀ ಅರುಣ್ಮೋಳಿ ವರ್ಮನ್ ಮಾತ್ರವಲ್ಲ, ನಂದಿನಿ ಕೂಡ. ಪೊನ್ನಿಯಿನ್ ಸೆಲ್ವಿ ಕೂಡ.. ಎಂಥ ಪಾತ್ರಗಳು! ಅಂಥ ಪಾತ್ರಗಳನ್ನು ಈಗ ಯಾರಿಂದಲೂ ಬರೆಯಲು ಸಾಧ್ಯವಿಲ್ಲ. ಆ ಪಾತ್ರವೇ ಪಡೆಯಪ್ಪ ಸಿನಿಮಾದಲ್ಲಿ ರಮ್ಯಾಕೃಷ್ಣ ನಟಿಸಿದ್ದ ನೀಲಾಂಬರಿ ಪಾತ್ರಕ್ಕೆ ಸ್ಪೂರ್ತಿ ಆಗಿತ್ತು' ಎಂದು ರಜನಿಕಾಂತ್ ಹೇಳಿದ್ದಾರೆ.

ಯಾರು ಯಾವ ಪಾತ್ರ ಮಾಡಿದ್ದಾರೆ?
'ಪೊನ್ನಿಯಿನ್ ಸೆಲ್ವನ್ 1' ಚಿತ್ರದಲ್ಲಿ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ವಿಕ್ರಮ್ ನಟಿಸಿದ್ದಾರೆ. ಅರುಲ್ಮೋಳಿ ವರ್ಮನ್ (ಪೊನ್ನಿಯಿನ್ ಸೆಲ್ವನ್ / ರಾಜ ರಾಜ ಚೋಳ) ಪಾತ್ರದಲ್ಲಿ 'ಜಯಂ' ರವಿ, ವಲ್ಲವರಾಯನ್ ವಂದಿಯಾದೇವನ್ ಪಾತ್ರವನ್ನು ಕಾರ್ತಿ, ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಐಶ್ವರ್ಯಾ ರೈ ಬಚ್ಚನ್, ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಷಾ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಬರೆದಿರುವ 'ಪೊನ್ನಿಯಿನ್ ಸೆಲ್ವನ್' ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿರುವ ಚಿತ್ರ 'ಪೊನ್ನಿಯಿನ್ ಸೆಲ್ವನ್ 1'. 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆಯೇ ಈ ಚಿತ್ರ. ಸುಮಾರು 500 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ತಮಿಳು, ಹಿಂದಿ, ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತೆರೆಕಾಣಲಿದ್ದು, ಅನೇಕ ಅನುಭವಿ ಕಲಾವಿದರು ಬಣ್ಣ ಹಚ್ಚಿದ್ದಾರೆ.
Super Star Rajinikanth Talks About Mani Ratnams Ponniyin Selvan.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm