ಬ್ರೇಕಿಂಗ್ ನ್ಯೂಸ್
29-08-22 12:47 pm HK News Desk ಸಿನಿಮಾ
ವೂಟ್ ಸೆಲೆಕ್ಟ್ ಹಲವಾರು ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ತನ್ನ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಟಿವಿ ಪರದೆಯಲ್ಲಿ ಪ್ರದರ್ಶಿಸುವ ಮೂಲಕ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದಲ್ಲಿ ಮನೆ ಮಾತಾಗಿದೆ. ಇದೀಗ ಕನ್ನಡಿಗರಿಗೆ ಒಂದು ಉತ್ತಮ ವೀಕೆಂಡ್ ಮಜಾವನ್ನು ಅನುಭವಿಸಲು ಅವಕಾಶವನ್ನು ಒದಗಿಸುತ್ತಿದೆ. ಚಿತ್ರಪ್ರೇಕ್ಷಕರ ಮನ ಗೆದ್ದಿರುವ 777 ಚಾರ್ಲಿ, ನಗೆಗಡಲಲ್ಲಿ ತೇಲಿಸುವ ಪೆಟ್ರೋಮ್ಯಾಕ್ಸ್ ಮತ್ತು ಹರಿಕಥೆಯಲ್ಲ ಗಿರಿಕಥೆ, ಬೈರಾಗಿ:- ಈ ನಾಲ್ಕು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಿದೆ.
777 ಚಾರ್ಲಿ
ಖ್ಯಾತ ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ಧರ್ಮನ ಸಂಬಂಧದ ಬಗ್ಗೆ ಸುಂದರವಾಗಿ ಹೆಣೆದಿರುವ ಚಿತ್ರವಾಗಿದೆ. ತನ್ನ ನೆಚ್ಚಿನ ನಾಯಿಯ ಜೊತೆಯಲ್ಲಿ ನಾಯಕ ನಟನ ಹೃದಯಾಂತರಾಳದ ಸಂಬಂಧವನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ವಿಶೇಷ ಬಂಧವನ್ನು ವಿವರಿಸುವಂತಹ ಪ್ರೀತಿ, ಪ್ರೇಮ ಮತ್ತು ತಿಳುವಳಿಕೆಯನ್ನು ಹಂಚಿಕೊಳ್ಳಲು ಹಾಗೂ ವ್ಯಕ್ತಪಡಿಸುವ ಅನನ್ಯ ಸಂಬಂಧದ ಬಗ್ಗೆ ಈ ಚಿತ್ರ ಹೇಳುತ್ತಾ ಹೋಗುತ್ತದೆ. ಪ್ರಾಪಂಚಿಕದ ಜೀವನದ ಸುತ್ತ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ನಾಯಕ ನಟ ಒಂಟಿತನಕ್ಕೆ ಬಲಿಯಾಗುತ್ತಾನೆ. ತನ್ನ ಸ್ಟೋಯಿಕ್, ಏಕಾಂಗಿ ಅಸ್ತಿತ್ವದ ಕತ್ತಲೆಗೆ ತಳ್ಳಲ್ಪಟ್ಟಾಗ ಆತನಿಗೆ ಪ್ರೀತಿ ಪ್ರೇಮವನ್ನು ತೋರಿಸುವ ಚಾರ್ಲಿ ಕೂಡಿಕೊಳ್ಳುತ್ತದೆ. ಈ ಮೂಲಕ ಆತನಿಗೆ ಏಕಾಂತದ ಪ್ರಜ್ಞೆ ದೂರವಾಗುತ್ತದೆ. ಚಾರ್ಲಿ ಮತ್ತು ನಾಯಕ ನಟನ ಅನುಸರಣೆಗಳಿಂದ ಭಾವನೆಗಳಿಗೆ ಒಪ್ಪುವಂತಹ ಕಥೆಯಲ್ಲಿ ಬಂಧ ಮತ್ತು ವಿಶೇಷ ಸಂಬಂಧವನ್ನು ಚಿತ್ರಿಸಲಾಗಿದೆ. ವೀಕ್ಷಕರ ಹೃದಯಾಂತರಾಳದಲ್ಲಿ ಸೇರಿಕೊಂಡಿರುವ ವೂಟ್ ಸೆಲೆಕ್ಟ್ ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಮಾಡಲಾಗುತ್ತಿರುವ ಈ ಚಿತ್ರವು ರಕ್ಷಿತ್ ಶೆಟ್ಟಿ ಮತ್ತು ಆರಾಧ್ಯ ಚಾರ್ಲಿಯ ಅಭಿನಯವನ್ನು ಪ್ರೇಕ್ಷಕರ ಮುಂದಿಡುತ್ತಿದೆ.
ಬೈರಾಗಿ
ಬೈರಾಗಿಯ ಕಥೆಯು ತನ್ನ ಮೌಲ್ಯಗಳು ಮತ್ತು ತತ್ತ್ವಗಳಿಗೆ ಖ್ಯಾತರಾಗಿರುವ ಕಲಾವಿದ ಹುಲಿ ಶಿವನ ಸುತ್ತ ಹೆಣೆದಿರುವ ಚಿತ್ರವಾಗಿದೆ. ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಲು ಈ ಕಲಾವಿದ ಹೆದರುವುದಿಲ್ಲ. ತನ್ನ ಕೋಪವನ್ನು ನಿಯಂತ್ರಣ ಮಾಡಲು ತನ್ನ ಪ್ರೀತಿಯ ಅಜ್ಜನಿಂದ ನಿರಂತರವಾಗಿ ಸಲಹೆ ಪಡೆಯುವ ಬಲವಾದ, ಅಲ್ಪ-ಸ್ವಭಾವದ ವ್ಯಕ್ತಿಯಾಗಿ ಬೆಳೆಯುವ ಶಿವನ ಪ್ರಯಾಣದ ಚಿತ್ರಣವನ್ನು ಈ ಚಿತ್ರ ತೆರೆದಿಡುತ್ತದೆ. ಅಜ್ಜನ ಮರಣದ ನಂತರ ಶಿವನು ಹೊಸ ಪಟ್ಟಣಕ್ಕೆ ಹೋಗುತ್ತಾನೆ. ಅಲ್ಲಿ ನಡೆದ ಒಂದು ಕೆಟ್ಟ ಘಟನೆಯು ಆತನಿಗೆ ಬಲು ಕೋಪ ಬರುವಂತೆ ಮಾಡುತ್ತದೆ. ಈ ಕೋಪವು ತೀವ್ರ ಪರಿಣಾಮವನ್ನು ಉಂಟು ಮಾಡುತರ್ತದೆ. ಇದರಲ್ಲಿ ಭಾವನೆಗಳು, ಆ್ಯಕ್ಷನ್ ಮತ್ತು ಮನೋರಂಜನೆಯ ಪ್ಯಾಕೇಜ್ ಇರುವುದರಿಂದ ಬೈರಾಗಿ ಒಂದು ನೋಡಲೇಬೇಕಾದ ಚಿತ್ರ ಎನಿಸುತ್ತದೆ. ವಿಶೇಷವಾಗಿ ಈ ಚಿತ್ರ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಪೆಟ್ರೋಮ್ಯಾಕ್ಸ್
ಈ ಚಿತ್ರವನ್ನು ವಿಜಯ ಪ್ರಸಾದ್ ಅವರು ಬರೆದು ನಿರ್ದೇಶಿಸಿದ್ದಾರೆ. ಇದೊಂದು ವಯಸ್ಕ ಕಾಮಿಡಿ ಚಿತ್ರವಾಗಿದ್ದು, ಕೌಟುಂಬಿಕ ಮೌಲ್ಯ ಮತ್ತು ಸಂಬಂಧಗಳನ್ನು ಅಂಶಗಳ ಬ್ಲೆಂಡ್ ಗಳನ್ನು ಒಳಗೊಂಡಿದೆ. ಇದು ಸಂಪೂರ್ಣ ವಯಸ್ಕ ಕಾಮೆಡಿ ಶೋ ಆಗಿದ್ದು, ಕುಟುಂಬದ ಮೌಲ್ಯಗಳು ಮತ್ತು ಸಂಬಂಧಗಳ ಮೌಲ್ಯಗಳನ್ನು ಎತ್ತಿಹಿಡಿಯುವ ಅಂಶಗಳನ್ನು ಒಳಗೊಂಡಿರುವ ಈ ಸಿನೆಮಾ ``ಬೆಳಕು ಮತ್ತು ಜೀವನ’’ದ ರೀತಿಯಲ್ಲಿದೆ. ಪೆಟ್ರೋಮ್ಯಾಕ್ಸ್ ಚಿತ್ರವು ನಾಲ್ವರು ಅನಾಥರ ಜೀವನದ ಮೇಲೆ ಕೇಂದ್ರೀಕೃತವಾಗಿದೆ. ಬಾಲ್ಯದಿಂದಲೂ ಅನಾಥಾಶ್ರಮದಲ್ಲಿ ಬೆಳೆದ ಈ ನಾಲ್ವರು ಪೋಷಕರಿಂದ ಕಾಳಜಿ ಮತ್ತು ಸಹಾನುಭೂತಿಯನ್ನು ಪಡೆಯಲು ಹಾತೊರೆಯುತ್ತಾರೆ. ಎಲ್ಲರೂ ಸೇರಿ ಮನೆಗಳನ್ನು ಹುಡುಕಲು ಆರಂಭಿಸುತ್ತಾರೆ, ಏಕಾಂಗಿ ಜೀವನದ ಪ್ರಯೋಗಗಳು ಮತ್ತು ಕ್ಲೇಶಗಳನ್ನು ಬಿಂಬಿಸುವ ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ವಿವರಿಸುತ್ತದೆ. ಸಂಪೂರ್ಣ ಮನರಂಜನೆಯನ್ನು ನೀಡುವ ಈ ಚಿತ್ರ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಲಿದೆ.
ಹರಿಕಥೆ ಅಲ್ಲ ಗಿರಿಕಥೆ
ಇನ್ನು ವೃಷಭ್ ಶೆಟ್ಟಿ ನಟನೆಯ ಮತ್ತೊಂದು ಕಾಮಿಡಿ ಚಿತ್ರ `ಹರಿಕಥೆ ಅಲ್ಲ ಗಿರಿಕಥೆ’ ಸಹ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಲಿದೆ. ಇದು ನಾನ್ ಸ್ಟಾಪ್ ಮನೋರಂಜನೆಯನ್ನು ನೀಡುವ ಚಿತ್ರವಾಗಿದೆ. ತಮಾಷೆಯ ಕಚಗುಳಿ ಇಡುವ ಈ ಚಿತ್ರ ಮೂವರು ವ್ಯಕ್ತಿಗಳು ತಮ್ಮ ವ್ಯವಹಾರವನ್ನು ದೊಡ್ಡದಾಗಿ ಬೆಳೆಸುವ ಗುರಿಯನ್ನು ಇಟ್ಟುಕೊಂಡಿರುತ್ತಾರೆ. ಇವರು ಕಣ್ಮರೆಯಾಗಿ ಅನುಭವಿಸುವ ಚಿತ್ರಣದ ಮೇಲೆ ಹೆಣೆದಿರುವ ಚಿತ್ರ ಇದಾಗಿದ್ದು, ಸಂಪೂರ್ಣ ಹಾಸ್ಯಭರಿತವಾದ ಚಿತ್ರವಾಗಿದೆ.
Add these blockbusters, streaming exclusively on Voot Select to your weekend watchlist!
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm