Dhananjays Uttarakaanda Movie First Look Released.
">ಬ್ರೇಕಿಂಗ್ ನ್ಯೂಸ್
24-08-22 03:03 pm Source: Vijayakarnataka ಸಿನಿಮಾ
ಸ್ಯಾಂಡಲ್ವುಡ್ನಲ್ಲಿ ಸಖತ್ ಬ್ಯುಸಿ ಇರುವ ನಟರಲ್ಲಿ 'ಡಾಲಿ' ಧನಂಜಯ್ ಕೂಡ ಒಬ್ಬರು. ಅವರ ಸಿನಿಮಾಗಳು ಮೂರ್ನಾಲ್ಕು ಸಿನಿಮಾಗಳು ಶೂಟಿಂಗ್ ಮುಗಿಸಿ, ರಿಲೀಸ್ಗೆ ಸಿದ್ಧವಾಗಿವೆ. ಈ ತಮಿಳು, ತೆಲುಗಿನಲ್ಲೂ 'ಡಾಲಿ' ಓಡಾಟ ಜೋರಾಗಿದೆ. ಇದರ ಮಧ್ಯೆ ಸಾಲು ಸಾಲು ಸಿನಿಮಾಗಳ ಶೂಟಿಂಗ್ ಕೂಡ ಬಿರುಸಿನಿಂದ ಸಾಗಿದೆ. ಇದೀಗ 'ಡಾಲಿ' ಧನಂಜಯ್ ಹುಟ್ಟುಹಬ್ಬಕ್ಕೆ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಅದೇ 'ಉತ್ತರಕಾಂಡ'! 'ಕೆಜಿಎಫ್' ನಿರ್ಮಾಪಕ, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಅರ್ಪಿಸಿರುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ 'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಡಾಲಿ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ.
'ದಯವಿಟ್ಟು ಗಮನಿಸಿ', 'ರತ್ನನ ಪ್ರಪಂಚ'ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ 'ಉತ್ತರಕಾಂಡ' ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ನಾಯಕ ಯಾರು ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಚಿತ್ರದ ನಾಯಕರಾಗಿ ಧನಂಜಯ ಅಭಿನಯಿಸುತ್ತಿರುವುದು ಈಗ ಪಕ್ಕಾ ಆಗಿದೆ. ಧನಂಜಯ್ ಹುಟ್ಟುಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯು ಈ ಸುದ್ದಿಯನ್ನು ಹಂಚಿಕೊಂಡು, ಧನಂಜಯ್ಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.
ಕೆ. ಆರ್. ಜಿ ಸ್ಟುಡಿಯೋಸ್ ಜೊತೆಗೆ ಧನು ಸಿನಿಮಾ
ಈ ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಧನಂಜಯ ಹೀರೋ ಆಗಿದ್ದ 'ರತ್ನನ್ ಪ್ರಪಂಚ' ಚಿತ್ರ ಮೂಡಿಬಂದಿತ್ತು. ಇದೇ ಬ್ಯಾನರ್ನಲ್ಲಿ ಈಗ 'ಹೊಯ್ಸಳ' ಚಿತ್ರ ಸಹ ಬರುತ್ತಿದ್ದು, ಮೂರನೇ ಚಿತ್ರವಾಗಿ 'ಉತ್ತರಕಾಂಡ' ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿನ ಧನಂಜಯ್ ಅವರ ಫಸ್ಟ್ ಲುಕ್ ಭಯ ಹುಟ್ಟಿಸುವಂತಿದೆ. ಅವರ ಲುಕ್ ಇಲ್ಲಿ ಮತ್ತಷ್ಟು ರಗಡ್ ಆಗಿದೆ. 'ಉತ್ತರಕಾಂಡ' ಮೂಲಕ ಮತ್ತೊಮ್ಮೆ ಧನಂಜಯ್ ಅವರ ಜೊತೆಗೆ ರೋಹಿತ್ ಪದಕಿ ಕೈಜೋಡಿಸಿದ್ದಾರೆ.
ಜನವರಿಯಿಂದ ಶೂಟಿಂಗ್ ಆರಂಭ
'ಉತ್ತರ ಕಾಂಡ' ಚಿತ್ರವು ಉತ್ತರ ಕರ್ನಾಟಕದ ಗ್ಯಾಂಗ್ಸ್ಟರ್ ಕಥೆ ಆಧರಿಸಿದೆ. ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. 'ಹೊಯ್ಸಳ' ಚಿತ್ರದ ನಂತರ, ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್ ತಿಳಿಸಿದ್ದಾರೆ. ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸ್ವಾಮಿ ಛಾಯಾಗ್ರಹಣವಿದೆ. ದೀಪು ಎಸ್. ಕುಮಾರ್ ಸಂಕಲನ ಮಾಡುತ್ತಿದ್ದು, ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.
ಸಾಲು ಸಾಲು ಸಿನಿಮಾಗಳು ರಿಲೀಸ್ಗೆ ರೆಡಿ
ಸದ್ಯ ಧನಂಜಯ್ ನಟನೆಯ ಮಾನ್ಸೂನ್ ರಾಗ, ಓನ್ಸ್ ಅಪನ್ ಎ ಟೈಮ್ ಇನ್ ಜಮಾಲಿಗುಡ್ಡ, ತೋತಾಪುರಿ, ಹೆಡ್ ಬುಷ್ ಸಿನಿಮಾಗಳು ರಿಲೀಸ್ಗೆ ರೆಡಿ ಆಗಿವೆ. ಇದರ ಜೊತೆಗೆ ಒಂದಷ್ಟು ಸಿನಿಮಾಗಳು ಶೂಟಿಂಗ್ ಕೂಡ ನಡೆಯುತ್ತಿದೆ.
Dhananjays Uttarakaanda Movie First Look Released.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm