ಬ್ರೇಕಿಂಗ್ ನ್ಯೂಸ್
11-03-22 03:25 pm HK Desk news ದೇಶ - ವಿದೇಶ
ನವದೆಹಲಿ, ಮಾ.11 : ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ. ಜನರ ನಿರ್ಣಯವನ್ನು ತೋರಿಸುತ್ತದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಗೆ, ಉತ್ತರ ಭಾರತದಲ್ಲಿ ರಾಜಕೀಯ ತಂತ್ರಗಾರ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ತಿರುಗೇಟು ನೀಡಿದ್ದಾರೆ.
2024ರಲ್ಲಿ ಯಾರು ಗೆಲ್ಲುತ್ತಾರೆಂದು ಆ ಸಂದರ್ಭ ಹೋರಾಟದಲ್ಲಿ ನಿರ್ಧರಿತವಾಗುತ್ತದೆ. ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಅದನ್ನು ಹೇಳಲಾಗುವುದಿಲ್ಲ. ಸಾಹೇಬರು ಇದರ ಹಿಂದಿನ ತಂತ್ರಗಾರಿಕೆ ತಿಳ್ಕೊಂಡಿದ್ದಾರೆ. ಈ ಫಲಿತಾಂಶ ಮುಂದಿಟ್ಟುಕೊಂಡು ಎದುರಾಳಿಯನ್ನು ಮಾನಸಿಕವಾಗಿ ಹಿಮ್ಮೆಟ್ಟಿಸುವ ತಂತ್ರಕ್ಕೆ ಬಲಿಯಾಗಬಾರದು. ಸುಳ್ಳಿನ ಮಾತುಗಳಿಗೆ ಯಾರೂ ಬಲಿ ಬೀಳದಿರಿ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
ಮಾ.10ರಂದು ಹೊರಬಿದ್ದ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಭಾಷಣ ಮಾಡಿದ್ದರು. 2019ರಲ್ಲಿ ನಾವು ಚುನಾವಣೆ ಜಯಿಸಿದಾಗ, ಅದಕ್ಕೆ 2017ರ ಉತ್ತರ ಪ್ರದೇಶದ ಗೆಲುವು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದರು. 2022ರ ಗೆಲುವನ್ನು ಕೂಡ, 2024ರ ಚುನಾವಣೆಯ ದಿಕ್ಸೂಚಿ ಮತ್ತು ಈ ಫಲಿತಾಂಶವೇ ಲೋಕಸಭೆಯ ಚುನಾವಣೆಯನ್ನು ನಿರ್ಧರಿಸುತ್ತದೆ ಎಂದು ತಜ್ಞರು ಹೇಳುತ್ತಾರೆಂದು ಭಾವಿಸುತ್ತೇನೆ ಎಂದು ಮೋದಿ ಹೇಳಿದ್ದರು.
ಇದಕ್ಕೆ ಕೌಂಟರ್ ಆಗಿ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್, ರಾಜ್ಯಗಳ ಚುನಾವಣೆ ಇಟ್ಟುಕೊಂಡು ಲೋಕಸಭೆ ಫಲಿತಾಂಶವನ್ನು ನಿರೀಕ್ಷಿಸುವಂತಿಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ 403 ಕ್ಷೇತ್ರಗಳಲ್ಲಿ 273, ಮಣಿಪುರದ 60ರಲ್ಲಿ 32, ಉತ್ತರಾಖಂಡದ 70ರಲ್ಲಿ 43, ಗೋವಾದಲ್ಲಿ 40 ಸದಸ್ಯ ಸ್ಥಾನಗಳಲ್ಲಿ 20ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಪಾಲಿಗೆ ದೊಡ್ಡ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಪಂಚ ರಾಜ್ಯಗಳಲ್ಲಿ ಪಂಜಾಬ್ ನಲ್ಲಿ ಮಾತ್ರ 117 ಸ್ಥಾನಗಳಲ್ಲಿ ಆಪ್ ಅಭ್ಯರ್ಥಿಗಳು 95 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದಾರೆ.
Prashant Kishor hit out at Prime Minister Narendra Modi for his comment on 2022's election "deciding" the outcome of the 2024 Lok Sabha polls. The political strategist said the "battle for India will be fought and decided in 2024, not in any state elections."
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am