ಬ್ರೇಕಿಂಗ್ ನ್ಯೂಸ್
07-03-22 12:01 pm HK Desk news ದೇಶ - ವಿದೇಶ
ನವದೆಹಲಿ, ಮಾ.7: ಯುದ್ಧ ನಿಲ್ಲಿಸುವಂತೆ ವಿಶ್ವ ರಾಷ್ಟ್ರಗಳ ಒತ್ತಾಯ, ಒತ್ತಡದ ಮಧ್ಯೆಯೂ ರಷ್ಯಾ, ಯುಕ್ರೇನ್ ಮೇಲಿನ ದಾಳಿಯನ್ನು ಮುಂದುವರಿಸಿದೆ. ಬಹುತೇಕ ದಕ್ಷಿಣ ಯುಕ್ರೇನಿನ ಪ್ರಮುಖ ನಗರಗಳನ್ನು ರಷ್ಯಾ ಈಗಾಗ್ಲೇ ಕಬ್ಚಾ ಮಾಡಿಕೊಂಡಿದ್ದು, ಉತ್ತರ ಮತ್ತು ಪೂರ್ವ ಯುಕ್ರೇನ್ ಮೇಲೆ ದಾಳಿ ಆರಂಭಿಸಿದೆ. ಯುದ್ಧ 12ನೇ ದಿನ ಪೂರೈಸಿದ್ದು ಒಂದೂವರೆ ಮಿಲಿಯನ್ ಜನರು ಜಮ್ಮ ವಾಸದ ನೆಲೆಯನ್ನು ಬಿಟ್ಟು ದಿಕ್ಕಾಪಾಲಾಗಿದ್ದಾರೆ.
ಇದೇ ವೇಳೆ, ಯುಕ್ರೇನಿಗೆ ನೆರವು ನೀಡುತ್ತಿರುವ ಆಸುಪಾಸಿನ ರಾಷ್ಟ್ರಗಳಿಗೂ ರಷ್ಯಾ ಮಿಲಿಟರಿ ಬೆದರಿಕೆ ಒಡ್ಡಿದೆ. ಯುಕ್ರೇನಿನ ಯುದ್ಧ ವಿಮಾನಗಳಿಗೆ ಆಶ್ರಯ ನೀಡಿದಲ್ಲಿ ಆ ರಾಷ್ಟ್ರಗಳನ್ನು ವೈರಿಯಾಗಿ ಪರಿಗಣಿಸಿ ದಾಳಿ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ಭಾನುವಾರ ವಿನಿಟ್ಸಿಯಾ ನಗರದ ಏರ್ಪೋರ್ಟ್ ಮೇಲೆ ಎಂಟು ಮಿಸೈಲ್ ಗಳನ್ನು ಎಸೆದು ತೀವ್ರ ದಾಳಿ ನಡೆಸಿದ್ದು, ವಿಮಾನ ನಿಲ್ದಾಣವನ್ನು ಪೂರ್ತಿಯಾಗಿ ಪುಡಿಗಟ್ಟಿದೆ. ಸೋಮವಾರ ಬೆಳಗ್ಗೆ ಮಿಕೊಲೊವ್ ನಗರದ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದ್ದು ಹಲವಾರು ಮಂದಿ ಸಾವಿಗೀಡಾಗಿದ್ದಾರೆ.
ಇದೇ ವೇಳೆ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ಪಡೆಗಳಿಗೆ ಎಚ್ಚರಿಕೆ ರವಾನಿಸಿದ್ದು, ನಾವು ಸಾವಿರಾರು ಜನರ ಸಾವು- ನೋವಿಗೆ ಕಾರಣವಾದ ಘಟನೆಯನ್ನು ಹಾಗೇ ಮರೆತು ಬಿಡುವುದಿಲ್ಲ. ಇದಕ್ಕೆ ರಷ್ಯಾ ಪಡೆಗಳಿಗೆ ತಕ್ಕ ಉತ್ತರ ನೀಡಲಿದ್ದೇವೆ. ಘಟನೆಗಳನ್ನು ಮರೆಯುವ ಬದಲು ತೀರ್ಪಿನ ದಿನ ಬರಲಿದೆ ಎಂದು ಹೇಳಿದ್ದಾರೆ. ಇದರ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಇಂದು (ಸೋಮವಾರ) ಯುಕ್ರೇನ್ ಅಧ್ಯಕ್ಷ ಮತ್ತು ರಷ್ಯಾ ಅಧ್ಯಕ್ಷರ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಲಿದ್ದಾರೆ. ಭಾರತೀಯ ಸ್ಥಳಾಂತರ ಕಾರ್ಯ ಮತ್ತು ಯುದ್ಧ ಸ್ಥಿತಿಯಿಂದಾಗಿ ಜಗತ್ತಿಗೆ ಎದುರಾಗಿರುವ ಆಪತ್ತಿನ ಬಗ್ಗೆ ಮೋದಿ ಇಬ್ಬರು ನಾಯxಕರಲ್ಲಿಯೂ ಮನವರಿಕೆ ಮಾಡಲಿದ್ದಾರೆ.
ಇದಲ್ಲದೆ, ಯುಕ್ರೇನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ತೆರವು ಕಾರ್ಯ ಅಂತಿಮ ಘಟ್ಟ ತಲುಪಿದೆ ಎನ್ನಲಾಗುತ್ತಿದೆ. ಆದರೆ, ಉತ್ತರ ಪೂರ್ವ ಯುಕ್ರೇನಿನ ಪ್ರಮುಖ ನಗರ ಸುಮಿ ಎಂಬಲ್ಲಿ 700 ರಷ್ಟು ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಅವರನ್ನು ತೆರವು ಮಾಡುವುದು ಕಷ್ಟಕರವಾಗಿದೆ ಎನ್ನುವ ಮಾಹಿತಿಗಳಿವೆ. ಅವರನ್ನು ಪಶ್ಚಿಮ ಗಡಿಭಾಗಕ್ಕೆ ರೈಲಿನ ಮೂಲಕ ಕರೆತರಲು ಪ್ರಯತ್ನ ನಡೆದಿದೆ. ಆದರೆ, ಉತ್ತರ ಪೂರ್ವದಿಂದ ಪಶ್ಚಿಮದ ಗಡಿಯ ರೊಮೇನಿಯಾ ಅಥವಾ ಪೋಲಂಡಿಗೆ ಕರೆತರಲು ರೈಲುಗಳಿಲ್ಲದೆ ಭಾರತದ ರಾಯಭಾರ ಕಚೇರಿ ಹರಸಾಹಸ ನಡೆಸುತ್ತಿದೆ.
Prime Minister Narendra Modi is scheduled to hold telephonic conversations with Ukraine’s President Volodymyr Zelenskyy and Russian President Vladimir Putin today, sources said. Prime Minister Narendra Modi is scheduled to hold telephonic conversations with Ukraine’s President Volodymyr Zelenskyy and Russian President Vladimir Putin today, sources said.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am