ಬ್ರೇಕಿಂಗ್ ನ್ಯೂಸ್
01-03-22 11:01 pm HK Desk news ದೇಶ - ವಿದೇಶ
ಕೀವ್, ಮಾ 1: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಟಿವಿ ಟವರ್ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ಇದರಿಂದ ಉಕ್ರೇನಿಯಿನ್ ಯಾವುದೇ ಸುದ್ದಿ ವಾಹಿನಿಗಳು ಪ್ರಸಾರವಾಗುವುದಿಲ್ಲ ಎಂದು ತಿಳಿದು ಬಂದಿದೆ.
ಈ ಹಿಂದೆ ರಷ್ಯಾವು ಕೀವ್ನ ಭದ್ರತಾ ಸೇವೆಯ ಹೆಚ್ಕ್ಯುಗೆ 'ಹೆಚ್ಚಿನ-ನಿಖರ ಶಸ್ತ್ರಾಸ್ತ್ರ'ಗಳೊಂದಿಗೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಸಮೀಪದಲ್ಲಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿತ್ತು.
ರಷ್ಯಾ ನಾಗರಿಕರು ಮತ್ತು ಸೇನೆಯ ಮೇಲೆ ಉಕ್ರೇನ್ ಪ್ರತಿದಾಳಿ ನಡೆಸಿರುವುದರ ಬಗ್ಗೆ ಅಂಕಿ-ಸಂಖ್ಯೆಗಳನ್ನು ನೀಡುತ್ತಿದ್ದ ಹಿನ್ನೆಲೆ ಅದನ್ನು ನಿಗ್ರಹಿಸಿಲು ರಷ್ಯಾ ಮುಂದಾಗಿತ್ತು. ಅದಕ್ಕಾಗಿಯೇ ಉಕ್ರೇನಿಯನ್ ರಾಜಧಾನಿಯಲ್ಲಿನ 'ಸೆಂಟರ್ ಫಾರ್ ಇನ್ಫಾರ್ಮೇಶನ್ ಅಂಡ್ ಸೈಕಲಾಜಿಕಲ್ ಆಪರೇಷನ್ಸ್' ವಿರುದ್ಧ ದಾಳಿ ನಡೆಸಿರುವುದಾಗಿ ರಷ್ಯಾ ಎಚ್ಚರಿಕೆ ನೀಡಿತ್ತು.
ಮೊದಲೇ ಎಚ್ಚರಿಕೆ ನೀಡಿದ್ದ ರಷ್ಯಾ:
ಕೀವ್ನ ಮಧ್ಯಭಾಗದಲ್ಲಿರುವ ಪ್ರಧಾನ ಕಛೇರಿಯ ಸಮೀಪವಿರುವ ಸಂವಹನ ಗೋಪುರಗಳಿಗೆ ಸಮೀಪದಲ್ಲಿ ವಾಸಿಸುವ ನಿವಾಸಿಗಳು ತಮ್ಮ ಸುರಕ್ಷತೆಗಾಗಿ ಸ್ಥಳಾಂತರಿಸುವಂತೆ ಮಾಸ್ಕೋ ಎಚ್ಚರಿಕೆಯನ್ನು ನೀಡಿತ್ತು.
ಇದರ ಮಧ್ಯೆ, ಯುಎಸ್ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಸೋಮವಾರ ತೆಗೆದ ಉಪಗ್ರಹ ಚಿತ್ರಗಳಲ್ಲಿ ರಷ್ಯಾದ 64-ಕಿಲೋಮೀಟರ್ (40-ಮೈಲಿ) ಉದ್ದದ ಮಿಲಿಟರಿ ಬೆಂಗಾವಲು ಪಡೆ ಉಕ್ರೇನ್ನ ರಾಜಧಾನಿ ಕೀವ್ ಕಡೆಗೆ ಹೋಗುತ್ತಿರುವುದನ್ನು ತೋರಿಸಿದೆ. ರಷ್ಯಾದ ಮಿಲಿಟರಿ ಬೆಂಗಾವಲು ಪಡೆ ಕೀವ್ನ ಉತ್ತರದಿಂದ ಮುನ್ನಡೆಯುತ್ತಿದೆ. ಈ ಹಿಂದೆ ವರದಿ ಮಾಡಿದ್ದಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಚಿತ್ರಗಳು ಬಹಿರಂಗಪಡಿಸಿವೆ.
ಇತ್ತೀಚಿನ ನವೀಕರಣದ ಪ್ರಕಾರ, ಬೆಂಗಾವಲು ಪಡೆ ಕೀವ್ನ ಮಧ್ಯಭಾಗದಿಂದ 17 ಮೈಲಿಗಳು (25 ಕಿಲೋಮೀಟರ್) ದೂರದಲ್ಲಿದ್ದು, ಬೃಹತ್ ಬೆಂಗಾವಲು ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್ಗಳು, ಫಿರಂಗಿ ಮತ್ತು ಬೆಂಬಲ ವಾಹನಗಳನ್ನು ಒಳಗೊಂಡಿತ್ತು.
The war between Ukraine and Russia marks the sixth day. In the meantime, Russia bombed a TV tower in Ukraine's capital, Kiev. It is understood that no news channels are broadcast by the Ukrainian.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am