ಬ್ರೇಕಿಂಗ್ ನ್ಯೂಸ್
01-02-22 01:27 pm HK Desk news ದೇಶ - ವಿದೇಶ
ನವದೆಹಲಿ, ಫೆ 01: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, 19 ಕೆಜಿಯ ಪ್ರತೀ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ.
ಎಲ್ಪಿಜಿ ಸಿಲಿಂಡರ್ಗಳ ನವೀಕೃತ ಬೆಲೆಯನ್ನು ತೈಲು ಮಾರುಕಟ್ಟೆ ಕಂಪನಿಗಳು (OMCs)ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,907 ರೂಪಾಯಿ ಆಗಿದೆ.
ಡಿಸೆಂಬರ್ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನಿರಾಳತೆ ಮೂಡಿಸಿದೆ.
ಡಿಸೆಂಬರ್ 1ರಂದು 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆಯಾಗಿತ್ತು. ಅಲ್ಲಿಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2101 ರೂಪಾಯಿ ಆಗಿತ್ತು. ಡಿಸೆಂಬರ್ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2101 ರೂಪಾಯಿ ಆಗಿದ್ದು ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿತ್ತು. 2012-13ರಲ್ಲಿ 2,200ರೂ.ಗೆ ತಲುಪಿದ ಮೇಲೆ ಅಷ್ಟೆಲ್ಲ ಏರಿಕೆಯಾಗಿರಲಿಲ್ಲ.
ಆದರೆ ಜನವರಿ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 102.50 ರೂಪಾಯಿ ಕಡಿತಗೊಳಿಸಿದರೂ, ಸಿಲಿಂಡರ್ ಬೆಲೆ 2 ಸಾವಿರ ರೂಪಾಯಿ ಮೇಲ್ಪಟ್ಟೇ ಇತ್ತು. ಇನ್ನು ಸಬ್ಸಿಡಿ ರಹಿತ (14.KG) ಇಂಡೇನ್ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 899.50 ರೂಪಾಯಿ ಇದೆ. ಮುಂಬೈನಲ್ಲಿ ಈ ಬೆಲೆ ದೆಹಲಿಯಲ್ಲದ್ದಷ್ಟೇ ಇದ್ದರೆ, ಕೋಲ್ಕತ್ತದಲ್ಲಿ 14 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 926 ರೂಪಾಯಿ ಇದೆ ಎಂದು ತಿಳಿದುಬಂದಿದೆ.
LPG Cylinder Rates- Hours ahead of Union Budget 2022, when Finance Minister Nirmala Sitharaman is ready for presenting the paperless budget in the parliament today. In a big relief to all, the prices of LPG Cylinders have been slashed.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am