ಬ್ರೇಕಿಂಗ್ ನ್ಯೂಸ್
14-01-22 09:44 pm HK Desk news ದೇಶ - ವಿದೇಶ
ನವದೆಹಲಿ, ಜ.14 : ದುಬೈ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಬಂದು ಕೆಲವೇ ಕ್ಷಣಗಳ ಅಂತರದಲ್ಲಿ ಅವಘಡದಿಂದ ತಪ್ಪಿದ ಘಟನೆ ನಡೆದಿದ್ದು ನೂರಾರು ಜನರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ದುಬೈಯಿಂದ ಹೈದರಾಬಾದ್ಗೆ ಒಂದು ಎಮಿರೇಟ್ಸ್ ವಿಮಾನ ಭಾನುವಾರ ರಾತ್ರಿ 9.45ಕ್ಕೆ ನಿರ್ಗಮಿಸಲಿದ್ದರೆ, ಬೆಂಗಳೂರಿಗೆ ಹೊರಟಿದ್ದ ಇನ್ನೊಂದು ವಿಮಾನ ಕೂಡ ಅದೇ ಸಮಯಕ್ಕೆ ಹಾರಾಟ ನಡೆಸಲು ಸಿದ್ಧವಾಗಿತ್ತು. ಐದು ನಿಮಿಷಗಳ ಅಂತರದಲ್ಲಿ ಈ ಎರಡೂ ವಿಮಾನಗಳು ಹಾರಾಟ ನಡೆಸಬೇಕಿತ್ತು.
ಆದರೆ ಎರಡೂ ವಿಮಾನಗಳು ಒಂದೇ ರನ್-ವೇ (30ಆರ್) ನಲ್ಲಿದ್ದವು. ಹೈದರಾಬಾದ್ಗೆ ಹೊರಟಿದ್ದ ವಿಮಾನವು ಟೇಕ್-ಆಫ್ಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಅದೇ ದಿಕ್ಕಿನಲ್ಲಿ ಭಾರೀ ವೇಗದಲ್ಲಿ ಇನ್ನೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ಕೂಡಲೇ ಎಟಿಸಿಯಿಂದ ಟೇಕ್-ಆಫ್ ಮಾಡದಂತೆ ಹೈದರಾಬಾದ್ಗೆ ಹೊರಟಿದ್ದ ವಿಮಾನಕ್ಕೆ ಸೂಚನೆ ಲಭಿಸಿತು. ತಕ್ಷಣ ವಿಮಾನದ ವೇಗ ಕಡಿಮೆಗೊಳಿಸಿ, ಟ್ಯಾಕ್ಸಿವೇ ಎನ್4 ಮೂಲಕ ದೂರ ಸರಿದಿತ್ತು.
ಬೆಂಗಳೂರಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ನಂತರ ಮೊದಲು ಟೇಕ್ ಆಫ್ ಮಾಡಿದರೆ ಹೈದರಾಬಾದ್ಗೆ ಹೊರಟ ವಿಮಾನ ಐದು ನಿಮಿಷದ ನಂತರ ನಿರ್ಗಮಿಸಿದೆ. ಈ ಲೋಪ ಸಾಕಷ್ಟು ಚರ್ಚೆಗೀಡಾಗಿದ್ದು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
A massive collision between two India-bound Emirates planes that were scheduled to take off at a difference of five minutes was averted at Dubai airport saving hundreds of lives on Sunday. According to reports, the possible collision started while both flights, taking off from the Dubai airport, came on one runway.
03-03-26 08:25 pm
HK News Staffer
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 03:10 pm
HK News Staffer
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆ ಚತುಷ್ಪಥ ಅಭ...
02-03-26 10:06 pm
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm