ಬ್ರೇಕಿಂಗ್ ನ್ಯೂಸ್
10-01-22 06:06 pm HK Desk news ದೇಶ - ವಿದೇಶ
ನ್ಯೂಯಾರ್ಕ್, ಜ.10 : ಅಪಾರ್ಟ್ಮೆಂಟ್ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಒಂಬತ್ತು ಮಕ್ಕಳು ಸೇರಿದಂತೆ 19 ಮಂದಿ ಸಜೀವ ದಹನವಾದ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.
60ಕ್ಕೂ ಹೆಚ್ಚು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಈ ಪೈಕಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮೃತರಲ್ಲಿ ಬಹುತೇಕರು ತೀವ್ರ ಹೊಗೆಯಿಂದ ಉಸಿರುಗಟ್ಟಿ ಜೀವ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಈಸ್ಟ್ ನ್ಯೂಯಾರ್ಕ್ ನಗರದ 181ನೇ ಬೀದಿಯಲ್ಲಿ 19 ಮಹಡಿ ಹೊಂದಿದ್ದ ಬ್ರಾನೆಕ್ಸ್ ಟ್ವಿನ್ ಪಾರ್ಕ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಬೆಂಕಿ ಕಾಣಿಸಿದ್ದು ಶಮನಗೊಳಿಸಲು 200ಕ್ಕೂ ಹೆಚ್ಚು ಮಂದಿ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸಿದ್ದಾಗಿ ಎಫ್ ಡಿಎನ್ವೈ ವಿವರಿಸಿದೆ. ಪ್ರತಿ ಮಹಡಿಯಲ್ಲೂ ಜನ ಉಸಿರುಕಟ್ಟಿ ಬಿದ್ದಿರುವುದನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕೆಲವರು ಹೃದಯ ಸ್ತಂಭನದಿಂದ ಸಾವು ಕಂಡಿದ್ದರು.
1990ರಲ್ಲಿ ಹ್ಯಾಪಿ ಲ್ಯಾಂಡ್ ಸೋಶಿಯಲ್ ಕ್ಲಬ್ನಲ್ಲಿ 87 ಮಂದಿಯನ್ನು ಬಲಿ ಪಡೆದ ಭೀಕರ ದುರಂತದ ತೀವ್ರತೆಗೆ ಈ ಘಟನೆಯನ್ನು ಹೋಲಿಸಲಾಗಿದೆ. ಮಾಜಿ ಪ್ರೇಯಸಿಯ ಜತೆ ವಾಗ್ವಾದಕ್ಕೆ ಇಳಿದ ವ್ಯಕ್ತಿಯೊಬ್ಬ ಕಟ್ಟಡಕ್ಕೆ ಬೆಂಕಿ ಹಚ್ಚಿ ಆ ದುರಂತ ಸಂಭವಿಸಿತ್ತು.
ಭಾನುವಾರ ಸಂಭವಿಸಿದ ಅಗ್ನಿದುರಂತ ಎರಡು ಮತ್ತು ಮೂರನೇ ಮಹಡಿಯ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮೂಲಕ ಹರಡಿತ್ತು. ಅಪಾರ್ಟ್ಮೆಂಟ್ ಬಾಗಿಲು ತೆರೆದಿರುವುದು ಅಗ್ನಿಶಾಮಕ ಸಿಬ್ಬಂದಿಗೆ ಕಂಡುಬಂದಿದ್ದು, ಇದು ಬೆಂಕಿ ಹಾಗೂ ಹೊಗೆ ಮೇಲ್ಮುಖವಾಗಿ ಹರಡಲು ಕಾರಣವಾಯಿತು ಎಂದು ವಿವರಿಸಿದ್ದಾರೆ. ಕೆಲವು ದಿನಗಳ ಹಿಂದೆ ಎಂಟು ಮಕ್ಕಳು ಸೇರಿದಂತೆ 12 ಮಂದಿ ಫಿಲಿಡೆಲ್ಫಿಯಾದ ಮನೆಯೊಂದರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟಿದ್ದರು.
At least 19 people, including nine children, have died after a fire in a New York apartment building. Another 32 people were sent to hospital, several of whom are in a critical condition, according to New York Mayor Eric Adams.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm