ಬ್ರೇಕಿಂಗ್ ನ್ಯೂಸ್
07-01-22 01:03 pm HK Desk news ದೇಶ - ವಿದೇಶ
ನವದೆಹಲಿ, ಜ.7 : ಪ್ರಧಾನಿ ಮೋದಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಭದ್ರತಾ ಲೋಪ ನಡೆದ ಘಟನೆ ಬಗ್ಗೆ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಂಡವನ್ನು ರಚಿಸಿ ಪಂಜಾಬ್ ಸಿಎಂ ಚರಣ್ ಸಿಂಗ್ ಚನ್ನಿ ಆದೇಶ ಮಾಡಿದ್ದಾರೆ.
ಘಟನೆಯನ್ನು ಗಂಭೀರ ಭದ್ರತಾ ಲೋಪ ಎಂದು ಬಣ್ಣಿಸಿರುವ ಕೇಂದ್ರ ಸರಕಾರ, ಇದಕ್ಕೆ ಪಂಜಾಬ್ ಸರಕಾರವನ್ನೇ ಹೊಣೆಯಾಗಿಸಿದೆ. ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ರಸ್ತೆ ಮಾರ್ಗದಲ್ಲಿ ತೆರಳುತ್ತಿದ್ದಾಗ ಪಂಜಾಬಿನ ಫಿರೋಜ್ ಪುರದ ಫ್ಲೈ ಓವರ್ ನಲ್ಲಿ ರೈತರು ರಸ್ತೆಗಡ್ಡ ನಿಂತು ಪ್ರತಿಭಟನೆ ನಡೆಸಿದ್ದು, 20 ನಿಮಿಷಗಳ ಕಾಲ ಕಾನ್ವಾಯ್ ಹೋಗುತ್ತಿದ್ದ ಎಸ್ ಪಿಜಿ ಭದ್ರತಾ ತಂಡದ ವಾಹನಗಳು, ಮೋದಿ ಅವರಿದ್ದ ಭದ್ರತಾ ವಾಹನ ಸ್ಥಗಿತಗೊಂಡಿತ್ತು. ಆನಂತರ, ಮೋದಿ ಅಲ್ಲಿಂದ ಹಿಂತಿರುಗಿದ್ದು ನೇರವಾಗಿ ದೆಹಲಿಗೆ ಪ್ರಯಾಣಿಸಿದ್ದರು.
ಭದ್ರತಾ ಲೋಪ ಘಟನೆಗೆ ಕೊನೆಕ್ಷಣದಲ್ಲಿ ಮೋದಿಯ ಪ್ರಯಾಣ ನಿಗದಿಯಾಗಿದ್ದು ಕಾರಣ ಎಂದು ಪಂಜಾಬ್ ಕಾಂಗ್ರೆಸ್ ಸರಕಾರ ಹೇಳಿಕೊಂಡಿದೆ. ಹೀಗಾಗಿ ಪ್ರತಿಭಟನೆ ನಡೆದಿದ್ದು ಅನಿರೀಕ್ಷಿತವಾಗಿತ್ತು ಎಂದು ಸಿಎಂ ಚರಣ್ ಸಿಂಗ್ ಚನ್ನಿ ಹೇಳಿದ್ದಾರೆ. ಪ್ರಧಾನಿಗೆ ಭದ್ರತಾ ಲೋಪ ಎದುರಾದ ಬಗ್ಗೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೋರ್ಟ್ ವಿಚಾರಣೆಗೆ ಒಪ್ಪಿಕೊಂಡಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವಾಲಯು ಭದ್ರತಾ ಲೋಪ ಘಟನೆಗೆ ಸಂಬಂಧಿಸಿ ಮೂವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ನೇಮಕ ಮಾಡಿದ್ದು, ಪಂಜಾಬ್ ನಲ್ಲಿ ತನಿಖೆಯನ್ನು ಆರಂಭಿಸಿದೆ.
ದೇಶಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ
ಇದಲ್ಲದೆ, ಬಿಜೆಪಿಯಿಂದ ದೇಶಾದ್ಯಂತ ಪ್ರಧಾನಿ ಮೋದಿಗೆ ಎದುರಾಗಿರುವ ಭದ್ರತಾ ಲೋಪವನ್ನು ಖಂಡಿಸಿ, ಪಂಜಾಬ್ ಕಾಂಗ್ರೆಸ್ ಸರಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಂಸದರು, ಶಾಸಕರು ಆಯಾ ಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಬಿಜೆಪಿ ಸಂಸದರು ಸಂಸತ್ತಿನ ಆವರಣದ ಗಾಂಧಿ ಪ್ರತಿಮೆಯ ಎದುರು ಮೌನ ಪ್ರತಿಭಟನೆ ನಡೆಸಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಮನವಿ ನೀಡಲು ಬಿಜೆಪಿ ಸೂಚನೆ ನೀಡಿದೆ.
The Supreme Court today took up a petition seeking a thorough investigation into the security lapse during Prime Minister Narendra Modi's visit to Punjab on Wednesday. The plea, filed by the NGO Lawyers Voice, has sought action against those responsible for the security lapse and appropriate directions to the Punjab government to prevent the recurrence of such an incident in the future. On Wednesday, PM Modi's cavalcade was stuck on a flyover in Punjab for nearly 20 minutes due to farmers blocking the flyover. Private cars were also seen approaching the cavalcade, which was a major security lapse.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am