ಬ್ರೇಕಿಂಗ್ ನ್ಯೂಸ್
03-01-22 07:15 pm HK Desk news ದೇಶ - ವಿದೇಶ
ಮುಂಬೈ, ಜ.3 : ಕೋವಿಡ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಮುಂಬೈನಲ್ಲಿ ಒಂದರಿಂದ 9ನೇ ತರಗತಿ ವರೆಗಿನ ಎಲ್ಲ ಮಾದರಿಯ ಶಾಲೆಗಳನ್ನು ಜನವರಿ 31ರ ವರೆಗೆ ಸ್ಥಗಿತ ಮಾಡಲಾಗಿದೆ. ಹತ್ತು ಮತ್ತು 12ನೇ ತರಗತಿ ಮಕ್ಕಳಿಗೆ ಮಾತ್ರ ಶಾಲೆಯಲ್ಲಿ ತರಗತಿ ಮುಂದುವರಿಸಲಾಗಿದೆ. ಜೂನಿಯರ್ ಕಾಲೇಜುಗಳಲ್ಲಿ ಮೊದಲ ಪಿಯುಸಿ ಮಕ್ಕಳಿಗೂ ತರಗತಿ ನಡೆಸದಂತೆ ಸೂಚನೆ ನೀಡಲಾಗಿದೆ.
ಶಾಲೆಗಳಲ್ಲಿ ಮಕ್ಕಳ ದೈಹಿಕ ಪಾಲ್ಗೊಳ್ಳುವಿಕೆ ಬದಲು ಆನ್ಲೈನ್ ಮೂಲಕ ತರಗತಿ ನಡೆಸುವಂತೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯು ಶಾಲಾಡಳಿತಗಳಿಗೆ ಸೂಚನೆ ನೀಡಿದೆ. 8ರಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ತರಗತಿ ಆರಂಭಿಸಲಾಗಿತ್ತು. ಒಂದರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಇದೇ ಡಿಸೆಂಬರ್ 15ರ ವೇಳೆಗೆ ಎರಡು ವರ್ಷಗಳ ಬಳಿಕ ಶಾಲೆ ಆರಂಭಿಸಲಾಗಿತ್ತು. ಮಾರ್ಚ್ 2020ರಲ್ಲಿ ಲಾಕ್ಡೌನ್ ಹೇರಿದ ಸುದೀರ್ಘ 21 ತಿಂಗಳ ಬಳಿಕ ಪ್ರಾಥಮಿಕ ಶಾಲೆಗಳಲ್ಲಿ ಡಿಸೆಂಬರ್ ನಲ್ಲಿ ಮತ್ತೆ ತರಗತಿ ನಡೆಸಲಾಗಿತ್ತು.
ಆದರೆ, ಕೇವಲ 15 ದಿನಗಳ ತರಗತಿಯ ಬಳಿಕ ಮತ್ತೆ ಮುಂಬೈನಲ್ಲಿ ಶಾಲೆ ಸ್ಥಗಿತಗೊಂಡಿದ್ದು ಮಕ್ಕಳು ಮತ್ತು ಪೋಷಕರಲ್ಲಿ ಚಿಂತೆ ಮೂಡಿಸಿದೆ. ಕೆಲವು ಕಡೆ ಕ್ರಿಸ್ಮಸ್ ರಜೆಯ ಬಳಿಕ ಜನವರಿ 3ರಂದು ಸೋಮವಾರ ಮಕ್ಕಳು ಶಾಲೆಗೆ ಹಾಜರಾಗಿದ್ದರು. ಆದರೆ ಇದೇ ವೇಳೆ, ಮಹಾನಗರ ಪಾಲಿಕೆಯ ಕಮಿಷನರ್ ಐ.ಎಸ್.ಚಾಹಲ್, 1ರಿಂದ 9 ಮತ್ತು 11ನೇ ತರಗತಿ ಮಕ್ಕಳಿಗೆ ಆನ್ಲೈನಲ್ಲಿ ಮಾತ್ರ ಕ್ಲಾಸ್ ನಡೆಸುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಸೋಮವಾರ 15ರಿಂದ 18ರ ವಯಸ್ಸಿನ ಮಕ್ಕಳಿಕೆ ಲಸಿಕೆ ನೀಡುವ ಅಭಿಯಾನ ಆರಂಭಗೊಂಡಿದ್ದು, ಮುಂಬೈನಲ್ಲಿ 9ರಿಂದ 12ನೇ ತರಗತಿಯ 6.25 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದಾರೆ. ಲಸಿಕೆ ಪಡೆಯುವುದಕ್ಕಾಗಿ ಮಾತ್ರ ಮಕ್ಕಳು ಶಾಲೆಗೆ ಬರಲು ಅವಕಾಶ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Mumbai School News, Class 10 and Class 12 students are permitted to attend physical classes in Mumbai schools. Amid a rapid surge in COVID-19 cases in Mumbai, including the Omicron variant, the civic body on Monday decided to shut schools of all mediums for classes 1 to 9 and 11 till January 31, a civic official said.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am