ಬ್ರೇಕಿಂಗ್ ನ್ಯೂಸ್
02-01-22 05:46 pm HK Desk news ದೇಶ - ವಿದೇಶ
ನವದೆಹಲಿ, ಜ.2 : ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 14 ಮಂದಿಯ ದುರಂತ ಸಾವಿಗ ಕಾರಣವಾದ ಹೆಲಿಕಾಪ್ಟರ್ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ಹಲವು ರೀತಿಯ ಶಂಕೆ ಕೇಳಿಬಂದಿದ್ದವು. ಘಟನೆ ಬಗ್ಗೆ ತನಿಖೆ ನಡೆಸಿದ ತನಿಖಾಧಿಕಾರಿಗಳ ತಂಡ, ಅವಘಡಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಅನ್ನುವ ನಿರ್ಧಾರಕ್ಕೆ ಬಂದಿದೆ. ತಜ್ಞರ ತಂಡ ತನಿಖೆಯನ್ನು ಪೂರ್ತಿಗೊಳಿಸಿದ್ದು ಕೆಲವೇ ದಿನಗಳಲ್ಲಿ ಸರಕಾರಕ್ಕೆ ಈ ಬಗ್ಗೆ ವರದಿ ನೀಡಲಿದೆ.
ಡಿ.8ರಂದು ಮಧ್ಯಾಹ್ನ ತಮಿಳುನಾಡಿನ ಊಟಿ ಬಳಿಯ ಕೂನೂರಿನಲ್ಲಿ ವಾಯುಪಡೆಗೆ ಸೇರಿದ ಅತ್ಯಾಧುನಿಕ ಹೆಲಿಕಾಪ್ಟರ್ ಅವಘಡಕ್ಕೆ ತುತ್ತಾಗಿತ್ತು. ಕಾಪ್ಟರ್ ನಲ್ಲಿ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಮತ್ತವರ ಪತ್ನಿ ಪ್ರಯಾಣಿಸುತ್ತಿದ್ದರು. ಸಿಬಂದಿ ಸೇರಿದಂತೆ ಕಾಪ್ಟರ್ ನಲ್ಲಿದ್ದ 13 ಮಂದಿ ಯೋಧರು ಕಾಡಿನ ಮಧ್ಯೆ ದುರಂತಕ್ಕೀಡಾಗಿ ಸಜೀವ ದಹನವಾಗಿದ್ದರು. ಘಟನೆಯಲ್ಲಿ 90 ಶೇಕಡಾ ಸುಟ್ಟ ಗಾಯಗಳೊಂದಿಗೆ ಬದುಕಿ ಉಳಿದಿದ್ದ ಕ್ಯಾಪ್ಟನ್ ಅರುಣ್ ಸಿಂಗ್ ವಾರ ಕಾಲ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊನೆಗೆ ಸಾವನ್ನಪ್ಪಿದ್ದರು.
ಘಟನೆ ಬಗ್ಗೆ ಕಾರಣವೇನು, ಹವಾಮಾನ ವೈಪರೀತ್ಯ ಇದ್ದಾಗ ಸೇನಾ ಪಡೆಗಳ ಮುಖ್ಯಸ್ಥರಿದ್ದ ಕಾಪ್ಟರ್ ತೆರಳಿದ್ದು ಹೇಗೆ, ಈ ಬಗ್ಗೆ ಮೊದಲೇ ಸೇನಾಧಿಕಾರಿಗಳು ನಿಗಾ ವಹಿಸಿಲ್ಲ ಏಕೆ ಎಂಬ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು ಕೇಳಿಬಂದಿದ್ದವು. ಈ ಬಗ್ಗೆ ಭಾರತೀಯ ವಾಯುಪಡೆ ಮತ್ತು ಇನ್ನಿತರ ಉನ್ನತ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ತನಿಖೆಗೆ ನೇಮಕ ಮಾಡಲಾಗಿತ್ತು. ಪೈಲಟ್ ದೋಷದಿಂದ ಅವಘಡ ಸಂಭವಿಸಿತ್ತೇ, ಇತರೇ ತಾಂತ್ರಿಕ ದೋಷದಿಂದಾಗಿ ದುರಂತ ಆಗಿತ್ತೇ ಎನ್ನುವ ಪ್ರಶ್ನೆಗಳಿಗೆ ಸೇನಾಧಿಕಾರಿಗಳಾಗಲೀ, ಸರಕಾರವಾಗಲೀ ಉತ್ತರ ನೀಡಿರಲಿಲ್ಲ.
ಕಳಪೆ ವಾತಾವರಣ, ಹವಾಮಾನ ವೈಪರೀತ್ಯದಿಂದಾಗಿ ಸ್ಪಷ್ಟವಾಗಿ ಗೋಚರಿಸದೇ ಕಾಡಿನ ಮಧ್ಯಕ್ಕೆ ಹೆಲಿಕಾಪ್ಟರ್ ನುಗ್ಗಿತ್ತು ಅನ್ನುವ ವರದಿಯನ್ನು ಸಿದ್ಧಪಡಿಸಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಕೆಲವು ದಿನಗಳಲ್ಲಿ ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿಗೆ ವರದಿ ಸಲ್ಲಿಕೆಯಾಗಲಿದೆ.
an army helicopter carrying 14 people, including chief of staff vipin rawat, crashed in kunnur last 8 to attend an event at the army college. thirteen people, including bipin rawat and his wife, died in the accident.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am