ಬ್ರೇಕಿಂಗ್ ನ್ಯೂಸ್
01-01-22 01:39 pm HK Desk news ದೇಶ - ವಿದೇಶ
ನವದೆಹಲಿ, ಜ.1 : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಮೊದಲ ಬಾರಿಗೆ ಭಾರತ ನೆರವಿನ ಹಸ್ತ ಚಾಚಿದೆ. ಕೋವಿಡ್ ಸೋಂಕಿನ ವಿರುದ್ಧ ನೀಡಲಾಗುವ ಹೈದ್ರಾಬಾದಿನ ಬಯೋಟೆಕ್ ಕಂಪನಿ ಉತ್ಪಾದಿಸಿದ ಒಂದು ಮಿಲಿಯನ್ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ ಅಫ್ಘಾನಿಸ್ತಾನಕ್ಕೆ ಕಳಿಸಿಕೊಟ್ಟಿದೆ.
ಮೊದಲ ಹಂತದಲ್ಲಿ ಇರಾನ್ ಏರ್ವೇಸ್ ವಿಮಾನದಲ್ಲಿ 5 ಲಕ್ಷ ಲಸಿಕೆ ಹೋಗಿದ್ದರೆ, ಮುಂದಿನ ವಾರದಲ್ಲಿ ಮತ್ತೆ ಐದು ಲಕ್ಷ ಲಸಿಕೆ ಅಫ್ಘಾನ್ ತಲುಪಲಿದೆ. ಕಳೆದ ಸೆಪ್ಟಂಬರ್ ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಭಾರತದಿಂದ ನೀಡಲಾಗುತ್ತಿದ್ದ ನೆರವನ್ನು ನಿಲ್ಲಿಸಲಾಗಿತ್ತು.
ವ್ಯಾಕ್ಸಿನ್ ಮೈತ್ರಿ ಪ್ರೋಗ್ರಾಮ್ ಹೆಸರಲ್ಲಿ ಭಾರತವು ಹಿಂದುಳಿದ ರಾಷ್ಟ್ರಗಳಿಗೆ ತನ್ನಲ್ಲಿ ತಯಾರಿಸಿದ ಕೋವಿಡ್ ಲಸಿಕೆಯನ್ನು ನೀಡುತ್ತಿದೆ. ಈಗಾಗ್ಲೇ ಹಲವು ರಾಷ್ಟ್ರಗಳಿಗೆ ಭಾರತದಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗಿದೆ. ಆದರೆ, ಅಫ್ಘಾನಿಸ್ತಾನಕ್ಕೆ ಮೊದಲ ಬಾರಿಗೆ ಈ ರೀತಿಯ ಮೈತ್ರಿಯಡಿ ಲಸಿಕೆ ನೀಡಲಾಗಿದೆ. ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್, ಭೂತಾನ್, ಮಾರಿಷಸ್, ಶ್ರೀಲಂಕಾ, ಮಾಲ್ದೀವ್ಸ್, ಸೌತ್ ಆಫ್ರಿಕಾ, ಬ್ರೆಜಿಲ್, ಮೊರಕ್ಕೋ, ನೈಜೀರಿಯಾ ಮತ್ತು ಡಿಆರ್ ಕಾಂಗೋ ದೇಶಗಳು ಭಾರತದ ಲಸಿಕೆಯ ಪ್ರಯೋಜನವನ್ನು ಪಡೆದಿವೆ.
ಭಾರತ್ ಬಯೋಟೆಕ್ ಕಂಪನಿಯು ತಿಂಗಳಿಗೆ 70 ಮಿಲಿಯನ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಹೈದ್ರಾಬಾದ್, ಪುಣೆ, ಅಕಲೇಶ್ವರ್, ಕರ್ನಾಟಕದ ಮಾಲೂರಿನಲ್ಲಿ ಬಯೋಟೆಕ್ ಉತ್ಪಾದನಾ ಘಟಕಗಳಿವೆ. ಕೋವ್ಯಾಕ್ಸಿನ್ ಲಸಿಕೆಗೆ ಕಳೆದ ನವೆಂಬರ್ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಂಗೀಕಾರ ಸಿಕ್ಕಿದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಕಂಡುಬಂದಿದೆ. ಕೋವ್ಯಾಕ್ಸಿನ್ ಬಳಸಲು ಈಗಾಗ್ಲೇ 20 ದೇಶಗಳು ತಮ್ಮಲ್ಲಿ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ 50ಕ್ಕೂ ದೇಶಗಳಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಬರುವ ನಿರೀಕ್ಷೆಯಿದೆ.
India is providing 1 million doses of its indigenous Covid-19 vaccine, Covaxin, produced by Hyderabad-based Bharat Biotech, to Taliban-controlled Afghanistan.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am